England vs Australia: 27 ವರ್ಷಗಳ ಬಳಿಕ ಆಂಗ್ಲರು​ ಫೈನಲ್​ಗೆ: ಲಾರ್ಡ್ಸ್​ನಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ಕದನ

ಇನ್ನು ಗ್ಲೆನ್ ಮ್ಯಾಕ್ಸ್​ವೆಲ್ (22)  ಇನಿಂಗ್ಸ್ ಅಂತ್ಯಗೊಳಿಸಿದರೆ, ಪ್ಯಾಟ್​ ಕಮ್ಮಿನ್ಸ್(6) ಬಂದ ವೇಗದಲ್ಲೇ ಹಿಂತಿರುಗಿದರು. ಆದರೆ ಮತ್ತೊಂದೆಡೆ ಏಕಾಂಗಿಯಾಗಿ ತಂಡದ ನೆರವಿಗೆ ನಿಂತ ಸ್ಮಿತ್​ 44.3 ಓವರ್​ನಲ್ಲಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು

zahir | news18
Updated:July 11, 2019, 10:10 PM IST
England vs Australia: 27 ವರ್ಷಗಳ ಬಳಿಕ ಆಂಗ್ಲರು​ ಫೈನಲ್​ಗೆ: ಲಾರ್ಡ್ಸ್​ನಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ಕದನ
England Vs Australia,
 • News18
 • Last Updated: July 11, 2019, 10:10 PM IST
 • Share this:
ಎಡ್ಜ್​ಬಾಸ್ಟನ್​ನಲ್ಲಿ ನಡೆದ  2ನೇ ಸೆಮಿ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಇಂಗ್ಲೆಂಡ್ ವಿಶ್ವಕಪ್​ ಫೈನಲ್ ಪ್ರವೇಶಿಸಿದೆ. ಈ ಮೂಲಕ 27 ವರ್ಷಗಳ ಬಳಿಕ ಮತ್ತೊಮ್ಮೆ ಫೈನಲ್ ಹಣಾಹಣಿಗೆ ಆಂಗ್ಲರು ಅಡಿಯಿಟ್ಟಿದ್ದಾರೆ. ಜು.14 ರಂದು ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲಿ ನಡೆಯಲಿರುವ ಚಾಂಪಿಯನ್ ಪಟ್ಟಕ್ಕಾಗಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಕಣಕ್ಕಿಳಿಯಲಿದೆ.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ನೀಡಿದ 224 ರನ್​ಗಳ ಸಾಧಾರಣ ಸವಾಲನ್ನು ಬೆನ್ನತ್ತಿದ ಇಂಗ್ಲೆಂಡ್​ಗೆ ಆರಂಭಿಕರಾದ ಜಾನಿ ಬೈರ್​ಸ್ಟೋ ಹಾಗೂ ಜೇಸನ್ ರಾಯ್ ಭರ್ಜರಿ ಆರಂಭ ಒದಗಿಸಿದ್ದರು.ಆರಂಭದಿಂದಲೇ ಆಸೀಸ್ ವೇಗಿಗಳ ವಿರುದ್ದ ತಿರುಗಿ ಬಿದ್ದ ಜೇಸನ್ ರಾಯ್ ಚೆಂಡನ್ನು ಮೈದಾನದ ಮೂಲೆ ಮೂಲೆಗೂ ತಲುಪಿಸುವ ಕಾಯಕಕ್ಕೆ ಕೈ ಹಾಕಿದ್ದರು. ಅದರಂತೆ 7 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಿಡಿಸಿದ ರಾಯ್ 50 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇನ್ನೊಂದೆಡೆ ರಾಯ್​ಗೆ ಉತ್ತಮ ಸಾಥ್ ನೀಡಿದ ಬೈರ್​ಸ್ಟೋ ನಿಧಾನಗತಿಯ ಆಟಕ್ಕೆ ಒತ್ತು ನೀಡಿದರು.ಆದರೆ ತಂಡದ ಮೊತ್ತ 124 ಆಗಿದ್ದ ವೇಳೆ ಸ್ಟಾರ್ಕ್​ ಎಸೆತವನ್ನು ತಡೆಯುವಲ್ಲಿ ವಿಫಲರಾದ ಬೈರ್​ಸ್ಟೋ(34) ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದರು. ಇನ್ನು ಆಸೀಸ್ ವೇಗಿಗಳನ್ನು ಮನಸೋ ಇಚ್ಛೆ ದಂಡಿಸುತ್ತಿದ್ದ ರಾಯ್​ (85) ರನ್ನು ಆಸೀಸ್​ ಅಪೀಲ್​ಗೆ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆದರೆ ರಿಪ್ಲೇನಲ್ಲಿ ಚೆಂಡು ಬ್ಯಾಟ್​ನಿಂದ ಬಲು ದೂರದಲ್ಲಿ ಸಾಗುತ್ತಿರುವುದು ಕಂಡು ಬಂತು. ಅಂಪೈರ್ ತೀರ್ಪಿಗೆ ಮೈದಾನದಲ್ಲೇ ಆಕ್ರೋಶ ವ್ಯಕ್ತಪಡಿಸಿ ರಾಯ್ ಹೊರ ನಡೆದರು.

ಈ ಹಂತದಲ್ಲಿ ಜೊತೆಗೂಡಿದ ರೂಟ್ ಹಾಗೂ ನಾಯಕ ಮೋರ್ಗನ್ ಆಸೀಸ್​ ವೇಗಿಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದರು. ರಾಯ್ ಹಾಕಿಕೊಟ್ಟ ಭದ್ರ ಅಡಿಪಾಯಕ್ಕೆ ತಕ್ಕಂತೆ ಬ್ಯಾಟ್​ ಬೀಸಿದ  8 ಬೌಂಡರಿಗಳೊಂದಿಗೆ ಮೋರ್ಗನ್ 49 ರನ್​ ಬಾರಿಸಿದರು. ಮತ್ತೊಂದೆಡೆ  ರೂಟ್ 45 ರನ್ ಪೂರೈಸಿ ತಂಡವನ್ನು 32.1 ಓವರ್​ನಲ್ಲಿ ಗೆಲುವಿನ ಗುರಿ ಸೇರಿಸಿದರು. ಈ ಮೂಲಕ 27 ವರ್ಷಗಳ ಮತ್ತೊಮ್ಮೆ ವರ್ಲ್ಡ್​ಕಪ್​ ಫೈನಲ್​ಗೇರಲು ಇಂಗ್ಲೆಂಡ್​ಗೆ ನೆರವಾದರು.27 ವರ್ಷಗಳ ಬಳಿಕ ಸೆಮಿ ಫೈನಲ್​:
1992ರ ವಿಶ್ವಕಪ್​ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡ  ಫೈನಲ್‌ಗೆ ತಲುಪಿದೆ. 1987 ಹಾಗೂ 1992ರಲ್ಲಿ ವಿಶ್ವಕಪ್ ಫೈನಲ್​ನಲ್ಲಿ ಸೋತಿದ್ದ ಆಂಗ್ಲರು ಈ ಬಾರಿಯಾದರೂ ವಿಶ್ವಕಪ್​ಗೆ ಮುತ್ತಿಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ಇಂಗ್ಲಿಷ್ ಕ್ರಿಕೆಟ್ ಅಭಿಮಾನಿಗಳು.  ಏಕದಿನ ಕ್ರಿಕೆಟ್ ರ್ಯಾಕಿಂಗ್​ನಲ್ಲಿ ಇಂಗ್ಲೆಂಡ್ ತಂಡವು ನಂ.1 ಸ್ಥಾನದಲ್ಲಿರುವ ತಂಡವು ತನ್ನ ಶ್ರೇಷ್ಠ ಆಟವನ್ನು ಪ್ರದರ್ಶಿಸುವ ಮೂಲಕ ಈ ಬಾರಿ ವಿಶ್ವಕಪ್ ಫೈನಲ್​ಗೇರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಆಸೆಗೆ ತಣ್ಣೀರೆರೆಚಿದರು.

ಆಂಗ್ಲರ ಬ್ಯಾಟಿಂಗ್​ಗೂ ಮುನ್ನ ಟಾಸ್ ಗೆದ್ದ ಆಸೀಸ್ ನಾಯಕ ಆರೋನ್ ಫಿಂಚ್ ಬ್ಯಾಟಿಂಗ್ ಆಯ್ದುಕೊಂಡರು. ತವರಿನ ಬೆಂಬಲದೊಂದಿಗೆ ಬೌಲಿಂಗ್​ ಆರಂಭಿಸಿದ ಇಂಗ್ಲೆಂಡ್​ ತಂಡವು ಆಸ್ಟ್ರೇಲಿಯಾ ತಂಡಕ್ಕೆ 2ನೇ ಓವರ್​ನಲ್ಲೇ ಶಾಕ್​ ನೀಡುವಲ್ಲಿ ಯಶಸ್ವಿಯಾಯಿತು. ತಂಡದ ಮೊತ್ತ ನಾಲ್ಕು ರನ್​ ಆಗಿದ್ದಾಗ ನಾಯಕ ಫಿಂಚ್​ರನ್ನು ಎಲ್​ಬಿ ವಿಕೆಟ್​ಗೆ ಕೆಡವಿದ ಜೋಫ್ರಾ ಇಂಗ್ಲೆಂಡ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ನಾಯಕನ ಬೆನ್ನಲ್ಲೇ ಎರಡು ಬೌಂಡರಿ ಬಾರಿಸಿದ್ದ ವಾರ್ನರ್(9) ಸ್ಲಿಪ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ತಂಡದ ಮೊತ್ತ 14 ಆಗಿದ್ದಾಗ ಹ್ಯಾಂಡ್ಸ್​ಕಾಂಬ್ ಅನ್ನು ಕ್ಲೀನ್ ಬೌಲ್ಡ್​ ಮಾಡುವ ಮೂಲಕ ವೋಕ್ಸ್ ಆಸೀಸ್​ಗೆ ಮತ್ತೊಂದು ಶಾಕ್ ನೀಡಿದರು.

ಈ ಹಂತದಲ್ಲಿ ಜೊತೆಗೂಡಿದ ಕ್ಯಾರಿ ಹಾಗೂ ಸ್ಟೀವ್ ಸ್ಮಿತ್ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಸ್ಮಿತ್​ ಒಂಟಿ ರನ್​ಗಳ ಮೂಲಕ ಇನಿಂಗ್ಸ್​ ಕಟ್ಟಿದರು. ಅಲ್ಲದೆ 4ನೇ ವಿಕೆಟ್​ಗೆ 100 ರನ್​ಗಳ ಜೊತೆಯಾಟದ ಕಾಣಿಕೆ ನೀಡಿದರು. ಆರಂಭಿಕ ಯಶಸ್ಸು ಕಂಡಿದ್ದ ಇಂಗ್ಲೆಂಡ್ ಬೌಲರುಗಳು ಒಂದು ಹಂತದಲ್ಲಿ ಈ ಜೋಡಿಯನ್ನು ಬೇರ್ಪಡಿಸಲು ಬೆವರಿಳಿಸಬೇಕಾಯಿತು.

ಆದರೆ ಆದಿಲ್ ರಶೀದ್​ರ 28ನೇ ಓವರ್​ನಲ್ಲಿ ಭರ್ಜರಿ ಹೊಡೆತಕ್ಕೆ ಮುನ್ನುಗ್ಗಿದ ಅಲೆಕ್ಸ್ ಕ್ಯಾರಿ (46) ಬೌಂಡರಿ ಲೈನ್​ನಲ್ಲಿ ಕ್ಯಾಚ್​ ನೀಡಿ ನಿರ್ಗಮಿಸಿದರು. ಕ್ಯಾರಿ ಬೆನ್ನಲ್ಲೇ ಸ್ಟೋಯಿನಿಸ್​ರನ್ನು ಎಲ್​ಬಿ ಮಾಡಿ ಶೂನ್ಯಕ್ಕೆ ಪೆವಿಲಿಯನ್​ಗಟ್ಟುವಲ್ಲಿ ರಶೀದ್ ಯಶಸ್ವಿಯಾದರು. ಬ್ಯಾಕ್​ ಟು ಬ್ಯಾಕ್ ವಿಕೆಟ್ ಉರುಳಿದರೂ, ಒಂದೆಡೆ ಸ್ಟೀವ್​ ಸ್ಮಿತ್ 72 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

ಇನ್ನು ಗ್ಲೆನ್ ಮ್ಯಾಕ್ಸ್​ವೆಲ್ (22)  ಇನಿಂಗ್ಸ್ ಅಂತ್ಯಗೊಳಿಸಿದರೆ, ಪ್ಯಾಟ್​ ಕಮ್ಮಿನ್ಸ್(6) ಬಂದ ವೇಗದಲ್ಲೇ ಹಿಂತಿರುಗಿದರು. ಆದರೆ ಮತ್ತೊಂದೆಡೆ ಏಕಾಂಗಿಯಾಗಿ ತಂಡದ ನೆರವಿಗೆ ನಿಂತ ಸ್ಮಿತ್​ 44.3 ಓವರ್​ನಲ್ಲಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಕೊನೆಯ ಹಂತದಲ್ಲಿ ಸ್ಟಾರ್ಕ್​ ಜೊತೆಗೂಡಿ ಬಿರುಸಿನ ಆಟಕ್ಕೆ ಮುಂದಾದ ಸ್ಮಿತ್ ಒಂದಷ್ಟು ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. ಇನ್ನು ಅಪಾಯಕಾರಿ ಆಗಲಿದ್ದ ಸ್ಮಿತ್​ ರನ್ನು ಅದ್ಭುತ ರನೌಟ್​ ಮೂಲಕ ಪೆವಿಲಿಯನ್​ ಹಾದಿ ತೋರಿಸುವಲ್ಲಿ ಕೊನೆಗೂ ಬಟ್ಲರ್ ಯಶಸ್ವಿಯಾದರು. 119 ಎಸೆತಗಳನ್ನು ಎದುರಿಸಿದ ಸ್ಮಿತ್ 6 ಬೌಂಡರಿಗಳೊಂದಿಗೆ 85 ರನ್​ಗಳಿಸಿದ ಹೊರ ನಡೆದರು.

ಸ್ಮಿತ್ ಹೊರ ನಡೆಯುತ್ತಿದ್ದಂತೆ ಸ್ಟಾರ್ಕ್​(29)ಗೆ ಅದೇ ಹಾದಿ ತೋರಿಸುವಲ್ಲಿ ವೋಕ್ಸ್ ಯಶಸ್ವಿಯಾದರು. ಇನ್ನು 48ನೇ ಓವರ್​ನ ಕೊನೆಯ ಎಸೆತದಲ್ಲಿ ಜೇಸನ್​ ವಿಕೆಟ್​ ಕಳೆದುಕೊಳ್ಳುವ ಮೂಲಕ ಆಸ್ಟ್ರೇಲಿಯಾ 223 ರನ್​ಗಳಿಗೆ ಸರ್ವಪತನ ಕಂಡಿತು.

ಈ ಸಾಧಾರಣ ಗುರಿಯನ್ನು 32.1 ಓವರ್​ಗಳಲ್ಲಿ ಮುಟ್ಟುವ ಮೂಲಕ ವಿಶ್ವಕಪ್​ಗೆ ಮುತ್ತಿಡಲು ಇಂಗ್ಲೆಂಡ್ ತಂಡ ಫೈನಲ್​ ಪ್ರವೇಶಿಸಿದೆ. ಇನ್ನು ಭಾನುವಾರ ನಡೆಯಲಿರುವ ಕ್ರಿಕೆಟ್​ ಕದನದಲ್ಲಿ ಕೇನ್ ವಿಲಿಯಮ್ಸನ್ ಮುನ್ನಡೆಸಲಿರುವ ನ್ಯೂಜಿಲೆಂಡ್ ತಂಡವನ್ನು ಇಯಾನ್ ಮೋರ್ಗನ್ ಪಡೆ ಎದುರಿಸಲಿದೆ.

ಇನ್ನು 6 ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಮತ್ತೊಂದು ವರ್ಲ್ಡ್​ಕಪ್ ಗೆಲ್ಲುವ ಆಸೆ ಕಮರಿ ಹೋಗಿದೆ. 1987, 1999, 2003, 2007 ಹಾಗೂ 2015ರಲ್ಲಿ ಚಾಂಪಿಯನ್ ಆಗಿದ್ದ ತಂಡವು ಸೋಲಿನೊಂದಿಗೆ ವಿಶ್ವಕಪ್​ಗೆ ವಿದಾಯ ಹೇಳಿದ್ದಾರೆ.

ಇಂಗ್ಲೆಂಡ್ ಪರ 3 ವಿಕೆಟ್​ ಉರುಳಿಸಿ ಮಿಂಚಿದ್ದ ಕ್ರಿಸ್ ವೋಕ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಂಗ್ಲೆಂಡ್ : ಜೇಸನ್ ರಾಯ್, ಜಾನಿ ಬೈರ್‌ಸ್ಟೋ, ಜೋ ರೂಟ್, ಇಯಾನ್ ಮೋರ್ಗನ್ (ನಾಯಕ), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಕ್ರಿಸ್ ವೋಕ್ಸ್, ಲಿಯಾಮ್ ಪ್ಲಂಕೆಟ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆರೋನ್ ಫಿಂಚ್ (ನಾಯಕ), ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್‌ಕಾಂಬ್, ಮಾರ್ಕಸ್ ಸ್ಟೋಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಅಲೆಕ್ಸ್ ಕ್ಯಾರಿ , ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೇಸನ್ ಬೆಹ್ರೆಂಡೋರ್ಫ್, ನಾಥನ್ ಲಿಯಾನ್
First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,205,178

   
 • Total Confirmed

  1,680,527

  +76,875
 • Cured/Discharged

  373,587

   
 • Total DEATHS

  101,762

  +6,070
Data Source: Johns Hopkins University, U.S. (www.jhu.edu)
Hospitals & Testing centres