• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • VIDEO: ಅಂಪೈರ್ ವಿವಾದಾತ್ಮಕ ತೀರ್ಪು: ಔಟಾದ ಬಳಿಕ ಬ್ಯಾಟ್​ ಬೀಸಿ ಆಕ್ರೋಶ ವ್ಯಕ್ತಪಡಿಸಿದ ರಾಯ್..!

VIDEO: ಅಂಪೈರ್ ವಿವಾದಾತ್ಮಕ ತೀರ್ಪು: ಔಟಾದ ಬಳಿಕ ಬ್ಯಾಟ್​ ಬೀಸಿ ಆಕ್ರೋಶ ವ್ಯಕ್ತಪಡಿಸಿದ ರಾಯ್..!

Jason Roy

Jason Roy

Jason Roy: ಅಲ್ಲದೆ ಪೆವಿಲಿಯನ್​ನಲ್ಲೂ ಬ್ಯಾಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಇದೀಗ ಅಂಪೈರ್ ತೀರ್ಪನ್ನು ಗೌರವಿಸದೇ ಮೈದಾನದಲ್ಲೇ ವಾದ ಮಾಡಿರುವ ರಾಯ್ ಮೇಲೆ ದಂಡ ವಿಧಿಸುವ ಸಾಧ್ಯತೆಯಿದೆ.

  • News18
  • 4-MIN READ
  • Last Updated :
  • Share this:

ವಿಶ್ವಕಪ್​ನ ಎರಡನೇ ಸೆಮಿ ಫೈನಲ್​ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಜೇಸನ್ ರಾಯ್. ಇಂಗ್ಲೆಂಡ್ ತಂಡದ ಆಕ್ರಮಣಕಾರಿ ಆರಂಭಿಕ ಆಸೀಸ್​ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದ್ದರು. ಇನ್ನೇನು ಪ್ರಮುಖ ಪಂದ್ಯದಲ್ಲಿ ಶತಕ ಸಿಡಿಸುವತ್ತ ದಾಪುಗಾಲಿಟ್ಟಿದ್ದರು.

5 ಭರ್ಜರಿ ಸಿಕ್ಸರ್​ ಹಾಗೂ 9 ಸೂಪರ್ ಫೋರ್​ಗಳಿಂದ 65 ಎಸೆತಗಳಲ್ಲಿ 85 ಬಾರಿಸಿದ್ದ ರಾಯ್​ ಅಂಪೈರ್​ ನೀಡಿದ ಕೆಟ್ಟ ತೀರ್ಪಿನಿಂದ ಶತಕ ವಂಚಿತರಾದರು. ಪ್ಯಾಟ್​ ಕಮ್ಮಿನ್ಸ್​ ಅವರ ಬೌನ್ಸರ್​​ ಎಸೆತವು ಲೆಗ್​ ಸೈಡ್​ ಮೂಲಕ ಕೀಪರ್​ ಕ್ಯಾರಿ ಕೈ ಸೇರಿತ್ತು.

ಈ ವೇಳೆ ಆಸೀಸ್ ಆಟಗಾರರು  ಬಲವಾದ ಮನವಿ ಸಲ್ಲಿಸಿದರು. ಈ ಮನವಿಯಿಂದ ಗೊಂದಲಕ್ಕೆ ಒಳಗಾದ ಅಂಪೈರ್ ಕುಮಾರ್ ಧರ್ಮಸೇನಾ ಮೊದಲು ಔಟ್​ ನೀಡಲು ಮುಂದಾಗಿರಲಿಲ್ಲ. ಆದರೆ ಇದಕ್ಕಿದ್ದಂತೆ ಕೈ ಮೇಲೆತ್ತುವ ಮೂಲಕ  ಔಟ್ ನೀಡಿದ್ದರು.

ಆದರೆ ಅಂಪೈರ್ ನೀಡಿದ ತೀರ್ಪಿನಿಂದ ರಾಯ್​ ಕುಪಿತಗೊಂಡಿದ್ದರು. ಈ ತೀರ್ಪಿನ ವಿರುದ್ಧ ಮೈದಾನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ ರಿಪ್ಲೇನಲ್ಲಿ ಸಹ ಚೆಂಡು ಬ್ಯಾಟ್​ನಿಂದ ಬಲುದೂರದಲ್ಲಿರುವುದು ಕಂಡು ಬಂತು. ಆದರೆ ಇಂಗ್ಲೆಂಡ್ ಬಳಿ ಡಿಆರ್‌ಎಸ್ ಆಯ್ಕೆಯು ಇಲ್ಲದಿದ್ದರಿಂದ ರಾಯ್ ಕ್ರೀಸ್ ತೊರೆಯುವುದು ಅನಿವಾರ್ಯವಾಯಿತು.



ಇದರಿಂದ ಅಂಪೈರ್ ಮೇಲೆ ಸಿಟ್ಟುಗೊಂಡ ಜೇಸನ್ ಕೋಪದಿಂದಲೇ ಗುನುಗುತ್ತಾ ಮೈದಾನವನ್ನು ತೊರೆದರು. ಅಲ್ಲದೆ ಪೆವಿಲಿಯನ್​ನಲ್ಲೂ ಬ್ಯಾಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಇದೀಗ ಅಂಪೈರ್ ತೀರ್ಪನ್ನು ಗೌರವಿಸದೇ ಮೈದಾನದಲ್ಲೇ ವಾದ ಮಾಡಿರುವ ರಾಯ್ ಮೇಲೆ ದಂಡ ವಿಧಿಸುವ ಸಾಧ್ಯತೆಯಿದೆ.

First published: