England vs Australia, 3rd ODI: ಮ್ಯಾಕ್ಸ್​ವೆಲ್ ಸ್ಫೋಟಕ ಆಟ: ಫಿಂಚ್ ಪಡೆಗೆ 3 ವಿಕೆಟ್​ಗಳ ರೋಚಕ ಗೆಲುವು

303 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ 73 ರನ್ ಆಗುವ ಹೊತ್ತಿಗೆ ತನ್ನ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ಈ ಸಂದರ್ಭ ಕ್ರೀಸ್​ಗೆ ಬಂದು ಪಂದ್ಯದ ಗತಿಯನ್ನೇ ಬದಲಾಯಿಸಿದ್ದು ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಅಲೆಕ್ಸ್ ಕ್ಯಾರಿ.

news18-kannada
Updated:September 17, 2020, 12:19 PM IST
England vs Australia, 3rd ODI: ಮ್ಯಾಕ್ಸ್​ವೆಲ್ ಸ್ಫೋಟಕ ಆಟ: ಫಿಂಚ್ ಪಡೆಗೆ 3 ವಿಕೆಟ್​ಗಳ ರೋಚಕ ಗೆಲುವು
ಗ್ಲೆನ್ ಮ್ಯಾಕ್ಸ್​​ವೆಲ್.
  • Share this:
ಮ್ಯಾನ್​ಚೆಸ್ಟರ್​: ಮ್ಯಾನ್​ಚೆಸ್ಟರ್​ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೂರು ವಿಕೆಟ್​ಗಳ ರೋಚಕ ಗೆಲುವು ಸಾಧಿಸುವ ಮೂಲಕ ಸರಣಿ ವಶಪಡಿಸಿಕೊಂಡಿದೆ. ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಅಲೆಕ್ಸ್ ಕ್ಯಾರಿ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಕಾಂಗರೂ ಪಡೆ ಗೆಲುವನ್ನು ತನ್ನದಾಗಿಸಿತು. ಇತ್ತ ಇಂಗ್ಲೆಂಡ್ ತಂಡದ ಜಾನಿ ಬೈರ್​ಸ್ಟೋ ಏಕಾಂಗಿ ಹೋರಾಟ ವ್ಯರ್ಥವಾಯಿತು.

ಟಾಸ್ ಗೆದ್ದ ಇಯಾನ್ ಮಾರ್ಗನ್ ಬಳಗ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ, ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಮಿಚೆಲ್ ಸ್ಟಾರ್ಕ್​ ಬೌಲಿಂಗ್​ನಲ್ಲಿ ಜೇಸನ್ ರಾಯ್ ಅವರು ಮ್ಯಾಕ್ಸ್​ವೆಲ್​ಗೆ ಕ್ಯಾಚಿತ್ತು ಔಟ್ ಆದರು. ಅಚ್ಚರಿ ಎಂಬಂತೆ ಎರಡನೇ ಎಸೆತದಲ್ಲಿ ಜೋ ರೂಟ್ ಎಲ್​ಬಿ ಬಲೆಗೆ ಸಿಲುಕಿದರು.




IPL 2020: CSK ತಂಡದ ದೌರ್ಬಲ್ಯ ತಿಳಿಸಿದ ಡೀನ್ ಜೋನ್ಸ್ನಾಯಕ ಇಯಾನ್ ಮಾರ್ಗನ್ ಇನ್ನಿಂಗ್ಸ್​ ಕಟ್ಟಲು ಹೊರಟರಾದರೂ 23 ರನ್ ಗಳಿಸಿದ್ದಾಗ ಝಂಪ ಬೌಲಿಂಗ್​ನಲ್ಲಿ ನಿರ್ಗಮಿಸಬೇಕಾಯಿತು. ಬಳಿಕ ಜಾನಿ ಬೈರ್​ ಸ್ಟೋ ತಂಡವನ್ನು ಮೇಲುತ್ತುವ ಪ್ರಯತ್ನ ನಡೆಸಿದರು. ಆದರೆ, ಇವರಿಗೆ ಜಾಸ್ ಬಟ್ಲರ್ ಉತ್ತಮ ಸಾತ್ ನೀಡಲಿಲ್ಲ. ಕೇವಲ 8 ರನ್ ಗಳಿಸಿ ಬಟ್ಲರ್ ಕೂಡ ನಿರ್ಗಮಿಸಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಈ ಸಂದರ್ಭ ಬೈರ್​​ಸ್ಟೋ ಜೊತೆಯಾದ ಸ್ಯಾಮ್ ಬಿಲ್ಲಿಂಗ್ಸ್​ ಅದ್ಭುತ ಜೊತೆಯಾಟ ಆಡಿದರು. 96 ರನ್​ಗೆ 4 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡದ ಮೊತ್ತವನ್ನು ಈ ಜೋಡಿ 200ರ ಗಡಿ ದಾಟಿಸಿತು. ಬೈರ್​ಸ್ಟೋ ಅಮೋಘ ಶತಕ ಸಿಡಿಸಿ ಮಿಂಚಿದರೆ, ಬಿಲ್ಲಿಂಗ್ಸ್​ ಅರ್ಧಶತಕ ಸಿಡಿಸಿ 57 ರನ್​ಗೆ ಔಟ್ ಆದರು. ಬಳಿಕ ಬಂದ ಕ್ರಿಸ್ ವೋಕ್ಸ್​ ಸ್ಫೋಟಕ ಬ್ಯಾಟಿಂಗ್ ನಡೆಸಿದರು.

ಈ ನಡುವೆ ಬೈರ್​ಸ್ಟೋ 126 ಎಸೆತಗಳಲ್ಲಿ 12 ಬೌಂಡರಿ, 2 ಸಿಕ್ಸರ್ ಸಿಡಿಸಿ 112 ರನ್​ಗೆ ಔಟ್ ಆದರು. ಅಂತಿಮ ಹಂತದಲ್ಲಿ ವೋಕ್ಸ್ ಆರ್ಭಟಿಸಿ ಎದುರಾಳಿಗೆ ಸವಾಲಿನ ಟಾರ್ಗೆಟ್ ನೀಡಲು ನೆರವಾದರು. ವೋಕ್ಸ್ 39 ಎಸೆತಗಳಲ್ಲಿ ಅಜೇಯ 53 ರನ್ ಚಚ್ಚಿದರು.

ಅಂತಿಮವಾಗಿ ಇಂಗ್ಲೆಂಡ್ 50 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 302 ರನ್ ಕಲೆಹಾಕಿತು. ಸ್ಟಾರ್ಕ್​ ಮತ್ತು ಝಂಪ ತಲಾ 3 ವಿಕೆಟ್ ಕಿತ್ತರು.

303 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ 73 ರನ್ ಆಗುವ ಹೊತ್ತಿಗೆ ತನ್ನ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ಈ ಸಂದರ್ಭ ಕ್ರೀಸ್​ಗೆ ಬಂದು ಪಂದ್ಯದ ಗತಿಯನ್ನೇ ಬದಲಾಯಿಸಿದ್ದು ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಅಲೆಕ್ಸ್ ಕ್ಯಾರಿ.





IPL 2020: ಬೆನ್​ ಸ್ಟೋಕ್ಸ್ ಐಪಿಎಲ್ ಆಡಲಿದ್ದಾರಾ? ಈ ಬಗ್ಗೆ ಕೋಚ್ ಹೇಳಿದ್ದೇನು?

ದ್ವಿಶತಕದ ಭರ್ಜರಿ ಜೊತೆಯಾಟ ಆಡಿದ ಈ ಜೋಡಿ ತಂಡಕ್ಕೆ ಗೆಲುವು ತಂದುಕೊಟ್ಟಿತು. ಮ್ಯಾಕ್ಸ್​ವೆಲ್ ಸ್ಫೋಟಕ ಆಟವಾಡಿದರೆ, ಕ್ಯಾರಿ ಇವರಿಗೆ ಉತ್ತಮ ಸಾತ್ ನೀಡಿದರು. ಮ್ಯಾಕ್ಸ್​ವೆಲ್​ 90 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸರ್ ಸಿಡಿಸಿ 108 ರನ್ ಚಚ್ಚಿದರೆ, ಕ್ಯಾರಿ 114 ಎಸೆತಗಳಲ್ಲಿ 106 ರನ್ ಬಾರಿಸಿದರು.

ಆಸ್ಟ್ರೇಲಿಯಾ 49.4 ಓವರ್​​ನಲ್ಲಿ 7 ವಿಕೆಟ್ ಕಳೆದುಕೊಂಡು 305 ರನ್ ಕಲೆಹಾಕಿ 3 ವಿಕೆಟ್​ಗಳ ರೋಚಕ ಗೆಲುವು ಕಂಡಿತು. ಜೊತೆಗೆ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿತು. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಗ್ಲೆನ್ ಮ್ಯಾಕ್ಸ್​ವೆಲ್ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ತಮ್ಮದಾಗಿಸಿದರು.
Published by: Vinay Bhat
First published: September 17, 2020, 12:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading