2019ರ ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಇಂಗ್ಲೆಂಡ್ ತಂಡ ಐರ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 85 ರನ್ಗಳಿಗೆ ಆಲ್ ಔಟ್ ಆಗಿದೆ. ಲಂಡನ್ನ ಲಾಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆಂಗ್ಲರು 23.4 ಓವರ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಹೀನಾಯ ಪ್ರದರ್ಶನ ತೋರಿಸಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಕೇವಲ 23.4 ಓವರ್ಗಳಿಗೆ 85 ರನ್ಗಳಿಸುವ ಮೂಲಕ ವಿಕೆಟ್ ಒಪ್ಪಿಸಿದ್ದಾರೆ. ಇಂಗ್ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಿದ ರೋನಿ ಬನ್ರ್ಸ್6, ಜೇಸನ್ ರಾಯ್ 5 ರನ್ ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಕಳಪೆ ಪ್ರದರ್ಶನ ನೀಡಿದ್ದಾರೆ. ನಂತರ ಬಂದ ಜೋ ಡೆನ್ಸಿ 23 ರನ್ಗಳಿಸಿ ಔಟಾದರೆ, ನಾಯಕ ರೂಟ್ 2 ರನ್ಗೆ ಸೀಮಿತವಾದರು. ಬೈಸ್ಟೋವ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ. ಆಲ್ರೌಂಡರ್ ಸ್ಯಾಮ್ ಕರ್ರನ್ 18, ಸ್ಟುವರ್ಟ್ ಬ್ರಾಡ್ 3, ಒಲ್ಲಿ ಸ್ಟೋನ್ 19 ರನ್ಗೆ ವಿಕೆಟ್ ಒಪ್ಪಿಸಿದ್ದಾರೆ.
85 ALL OUT!
It's been a dreamlike morning for Ireland. Five wickets for the brilliant Murtagh, three for Adair and Rankin with two.
ಇನ್ನು ಐರ್ಲೆಂಡ್ ತಂಡ ಟೀಮ್ ಮುಟರ್ಗ್ ಎಸೆತದಲ್ಲಿ ಇಂಗ್ಲೆಂಡ್ ತಂಡಕ್ಕೆ 13 ರನ್ ನೀಡಿ 5 ವಿಕೆಟ್ಗಳಿಸಿಕೊಂಡರು. ಮಾರ್ಕ್ ಅದೈರ್ 32 ರನ್ಗೆ 3 ವಿಕೆಟ್ ಹಾಗೂ ರಂಕಿನ್ 2 ವಿಕೆಟ್ ಕಬಳಿಸುವುದರ ಮೂಲಕ ಇಂಗ್ಲೆಂಡ್ ತಂಡದ ಸರ್ವ ಪತನಕ್ಕೆ ಕಾರಣರಾದರು.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ