ಆಂಗ್ಲರ ವಿರುದ್ಧ ಹೀನಾಯ ಪ್ರದರ್ಶನ; ಕೇವಲ 45 ರನ್​ಗೆ ವೆಸ್ಟ್​ ಇಂಡೀಸ್ ಅಲೌಟ್

ವೆಸ್ಟ್​ ಇಂಡೀಸ್ ತಂಡ 11.5 ಓವರ್​ಗಳಲ್ಲಿ 45 ರನ್​ಗೆ ಆಲೌಟ್ ಆಗಿ ಟಿ-20 ಕ್ರಿಕೆಟ್ ಇತಿಹಾಸದಲ್ಲೇ 2ನೇ ಕನಿಷ್ಠ ಸ್ಕೋರ್ ಮಾಡಿದ ಕುಖ್ಯಾತಿಗೆ ಒಳಗಾಗಿದೆ.

Pic: Twitter

Pic: Twitter

  • Share this:
ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ವೆಸ್ಟ್​ ಇಂಡೀಸ್ ತನ್ನ ತವರು ಮೈದಾನದಲ್ಲೇ ಹಿಂದೆಂದೂ ನೀಡದ ಕಳಪೆ ಪ್ರದರ್ಶನ ತೋರಿದೆ. ಟಿ-20 ಕ್ರಿಕೆಟ್​ನಲ್ಲಿ ಕೇವಲ 45 ರನ್​​ಗಳಿಗೆ ಆಲೌಟ್ ಆಗುವ ಮೂಲಕ ಕಳಪೆ ಆಟವಾಡಿದೆ.

ಮೊದಲ ಬ್ಯಾಟ್ ಮಾಡಿದ ಇಂಗ್ಲೆಂಡ್ ಸ್ಯಾಮ್ ಬಿಲ್ಲಿಂಗ್ಸ್​ರ 87 ಹಾಗೂ ಜೋ ರೂಟ್ ಅವರ 55 ರನ್​​ಗಳ ನೆರವಿನಿಂದ ನಿಗದಿತ 20 ಓವರ್​​​ಗೆ 6 ವಿಕೆಟ್ ನಷ್ಟಕ್ಕೆ 182 ರನ್ ಬಾರಿಸಿತು.

ಈ ಸವಾಲಿನ ಮೊತ್ತ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ಆಂಗ್ಲರ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಪ್ರಮುಖ ಸ್ಟಾರ್ ಬ್ಯಾಟ್ಸ್​ಮನ್​​ಗಳಾದ ಕ್ರಿಸ್ ಗೇಲ್ 5, ಶಾಯ್ ಹೋಪ್ 7, ಡ್ಯಾರೆನ್ ಬ್ರಾವೋ ಹಾಗೂ ಜೇಸನ್ ಹೋಲ್ಡರ್ ಶೂನ್ಯ ಸುತ್ತಿದರು.

ತಂಡದ ಪರ ಶಿಮ್ರೋನ್ ಹೆಟ್ಮೆಯೆರ್ ಹಾಗೂ ಕಾರ್ಲಸ್ ಬ್ರಾಥ್​​ವೈಟ್ 10 ರನ್​ಗಳಿಸಿದ್ದೇ ಹೆಚ್ಚು. ಪರಿಣಾಮ 11.5 ಓವರ್​ಗಳಲ್ಲಿ ವಿಂಡೀಸ್ 45 ರನ್​​ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಕ್ರಿಸ್ ಜಾರ್ಡನ್ 4 ವಿಕೆಟ್ ಕಿತ್ತರೆ, ಡೇವಿಡ್ ವಿಲ್ಲೆ, ಆದಿಲ್ ರಶೀದ್ ಹಾಗೂ ಲ್ಯಾಮ್ ಪ್ಲಂಕೆಟ್ ತಲಾ 2 ವಿಕೆಟ್ ಪಡೆದರು.

ಈ ಮೂಲಕ ಆಂಗ್ಲರು 137 ರನ್​ಗಳ ಭರ್ಜರಿ ಜಯದೊಂದಿಗೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಜೊತೆಗೆ ಸರಣಿ ಕೈವಶ ಮಾಡಿಕೊಂಡಿದ್ದು, ಕ್ಲೀನ್ ಸ್ವೀಪ್​​ ನತ್ತ ಚಿತ್ತ ನೆಟ್ಟಿದೆ.

ವೆಸ್ಟ್​ ಇಂಡೀಸ್ ತಂಡ 11.5 ಓವರ್​ಗಳಲ್ಲಿ 45 ರನ್​ಗೆ ಆಲೌಟ್ ಆಗಿ ಟಿ-20 ಕ್ರಿಕೆಟ್ ಇತಿಹಾಸದಲ್ಲೇ 2ನೇ ಕನಿಷ್ಠ ಸ್ಕೋರ್ ಮಾಡಿದ ಕುಖ್ಯಾತಿಗೆ ಒಳಗಾಗಿದೆ. ಇದಕ್ಕೂ ಮೊದಲು ನೆದರ್​​ಲ್ಯಾಂಡ ತಂಡ ಶ್ರೀಲಂಕಾ ವಿರುದ್ಧ 39 ರನ್​ಗಳಿಗೆ ಆಲೌಟ್ ಆಗಿದ್ದು ಅತಿ ಕಡಿಮೆ ಸ್ಕೋರ್ ಆಗಿದೆ.
Published by:Vinay Bhat
First published: