England vs West Indies: ಹೋಲ್ಡರ್ ಮಾರಕ ದಾಳಿಗೆ ಇಂಗ್ಲೆಂಡ್ ತತ್ತರ; 204 ರನ್​ಗೆ ಆಲೌಟ್; ದಾಖಲೆ ಬರೆದ ವಿಂಡೀಸ್ ನಾಯಕ

ಇಂಗ್ಲೆಂಡ್ ತಂಡ 67.3 ಓವರ್​ನಲ್ಲಿ 204 ರನ್​ಗೆ ಸರ್ವಪತನ ಕಂಡಿತು. ವಿಂಡೀಸ್ ಪರ ಹೋಲ್ಡರ್ 6 ವಿಕೆಟ್ ಕಿತ್ತು ಮಿಂಚಿದರೆ, ಗಾಬ್ರಿಯಲ್ 4 ವಿಕೆಟ್ ಪಡೆದರು.

ವೆಸ್ಟ್​ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್.

ವೆಸ್ಟ್​ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್.

 • Share this:
  ಸೌತಾಂಪ್ಟನ್: ಇಲ್ಲಿನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಕೆರಿಬಿಯನ್ ನಾಯಕ ಜೇಸನ್ ಹೋಲ್ಡರ್ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲರು ಕೇವಲ 204 ರನ್​ಗೆ ಆಲೌಟ್ ಆದರು. ಎರಡನೇ ದಿನದಾಟದ ಅಂತ್ಯಕ್ಕೆ ವೆಸ್ಟ್​ ಇಂಡೀಸ್ 1 ವಿಕೆಟ್ ಕಳೆದುಕೊಂಡು 57 ರನ್ ಕಲೆಹಾಕಿದೆ.

  ಮಳೆಯ ಕಣ್ಣಾಮುಚ್ಚಾಲೆ ನಡುವೆ ನಡೆದ ಮೊದಲ ದಿನದಾಟ ಇಂಗ್ಲೆಂಡ್ ತಂಡ ಒಂದು ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿತ್ತು. ಎರಡನೇ ದಿನ ಬ್ಯಾಟಿಂಗ್ ಮುಂದುವರೆಸಿದ ಜೆ ಡೆನ್ಲಿ 18 ರನ್​ಗೆ ಮೊದಲಿಗರಾಗಿ ಔಟ್ ಆದರೆ, ರಾರಿ ಬರ್ನ್ಸ್​ 30 ರನ್​​ಗೆ ಪೆವಿಲಿಯನ್ ಸೇರಿಕೊಂಡರು.

  ಈ ಮೂವರಲ್ಲಿ ರೋಹಿತ್ ಶರ್ಮಾ ಸ್ಥಾನ ತುಂಬುವವರು ಯಾರು..?

     ಜಾಸ್ ಬಟ್ಲರ್ 35 ಹಾಗೂ ನಾಯಕ ಬೆನ್ ಸ್ಟೋಕ್ಸ್​ 43 ರನ್ ಗಳಿಸಿದ್ದೇ ಹೆಚ್ಚು. ಉಳಿದ ಬ್ಯಾಟ್ಸ್​ಮನ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಡಾಮ್ ಬೆಸ್ 31 ರನ್ ಗಳಿಸಿ ಅಜೇಯರಾಗಿ ಉಳಿದರು. ಇಂಗ್ಲೆಂಡ್ ತಂಡ 67.3 ಓವರ್​ನಲ್ಲಿ 204 ರನ್​ಗೆ ಸರ್ವಪತನ ಕಂಡಿತು. ವಿಂಡೀಸ್ ಪರ ಹೋಲ್ಡರ್ 6 ವಿಕೆಟ್ ಕಿತ್ತು ಮಿಂಚಿದರೆ, ಗಾಬ್ರಿಯಲ್ 4 ವಿಕೆಟ್ ಪಡೆದರು.

  ಬಳಿಕ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಆರಂಭದಲ್ಲೆ ಜಾನ್ ಕ್ಯಾಂಪ್​ಬೆಲ್(28) ವಿಕೆಟ್ ಕಳೆದುಕೊಂಡಿತು. ಎರಡನೇ ದಿನದಾಟದ ಅಂತ್ಯಕ್ಕೆ ಕೆರಿಬಿಯನ್ನರು 19.3 ಓವರ್​ನಲ್ಲಿ 1 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದ್ದಾರೆ. ಕ್ರೈಗ್ ಬ್ರಾಥ್​ವೈಟ್ 20 ಹಾಗೂ ಶಾಯ್ ಹೋಪ್ 3 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವೆಸ್ಟ್​ ಇಂಡೀಸ್ 147 ರನ್​ಗಳ ಹಿನ್ನಡೆಯಲ್ಲಿದೆ.

  ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಮ್ಯಾನೇಜರ್..!

  ಹಲವು ದಾಖಲೆ ಬರೆದ ಹೋಲ್ಡರ್​

  ಇಂಗ್ಲೆಂಡ್​ ನೆಲದಲ್ಲಿ ಅತ್ಯುತ್ತಮ ಬೌಲಿಂಗ್​ ನಿರ್ವಹಣೆ ತೋರಿದ ವೆಸ್ಟ್​ ಇಂಡೀಸ್​ ನಾಯಕ ಎಂಬ ಹೆಗ್ಗಳಿಕೆ ಜೇಸನ್​ ಹೋಲ್ಡರ್ ಪಾತ್ರರಾದರು. 1948ರಲ್ಲಿ ಜಾನ್​ ಗೋಡ್ಡರ್ಡ್​ 31 ರನ್​ಗೆ 5 ವಿಕೆಟ್​ ಕಬಳಿಸಿದ್ದು ಹಿಂದಿನ ಶ್ರೇಷ್ಠ ನಿರ್ವಹಣೆಯಾಗಿತ್ತು. ಇನ್ನೂ ಚೆಂಡಿಗೆ ಎಂಜಲು ಹಚ್ಚದೆ 5 ವಿಕೆಟ್​ ಗೊಂಚಲು ಪಡೆದ ಮೊದಲ ಬೌಲರ್​ ಎಂಬ ವಿಶೇಷ ಹೆಗ್ಗಳಿಕೆಯೂ ಕೊರೋನಾ ಕಾಲದ ಟೆಸ್ಟ್​ನಲ್ಲಿ ಹೋಲ್ಡರ್​ಗೆ ಒಲಿದಿದೆ.

     ಒಟ್ಟಾರೆ ನಾಯಕನೊಬ್ಬ ಇಂಗ್ಲೆಂಡ್​ ವಿರುದ್ಧ ತೋರಿದ 4ನೇ ಅತ್ಯುತ್ತಮ ನಿರ್ವಹಣೆ ಇದಾಗಿದೆ. 1987ರಲ್ಲಿ ಪಾಕಿಸ್ತಾನ ಇಮ್ರಾನ್​ ಖಾನ್​ ಲೀಡ್ಸ್​ನಲ್ಲಿ 40 ರನ್​ಗೆ 7 ವಿಕೆಟ್​ ಕಬಳಿಸಿದ್ದು ಈವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ.
  Published by:Vinay Bhat
  First published: