HOME » NEWS » Sports » CRICKET ENGLAND SQUAD FOR INDIA ODIS INJURED ARCHER MISSES OUT ZP

England squad: ಭಾರತದ ವಿರುದ್ಧದ ಏಕದಿನಕ್ಕೆ ಇಂಗ್ಲೆಂಡ್ ತಂಡ ಪ್ರಕಟ: ಸ್ಟಾರ್ ಆಟಗಾರರ ಹೊರಕ್ಕೆ..!

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್)

news18-kannada
Updated:March 22, 2021, 5:25 PM IST
England squad: ಭಾರತದ ವಿರುದ್ಧದ ಏಕದಿನಕ್ಕೆ ಇಂಗ್ಲೆಂಡ್ ತಂಡ ಪ್ರಕಟ: ಸ್ಟಾರ್ ಆಟಗಾರರ ಹೊರಕ್ಕೆ..!
England team
  • Share this:
ಭಾರತದ ವಿರುದ್ಧ ಟೆಸ್ಟ್ ಸರಣಿ ಬಳಿಕ ಟಿ20 ಸರಣಿಯನ್ನೂ ಸೋತಿರುವ ಇಂಗ್ಲೆಂಡ್ ತಂಡ ಇದೀಗ ಏಕದಿನ ಸರಣಿಗೆ ಅಣಿಯಾಗುತ್ತಿದೆ. ಮಾರ್ಚ್ 23 ರಿಂದ ಶುರುವಾಗಲಿರುವ ಒನ್​ಡೇ ಪಂದ್ಯಗಳಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. 14 ಸದಸ್ಯರನ್ನು ಒಳಗೊಂಡಿರುವ ಈ ತಂಡದಿಂದ ವೇಗದ ಬೌಲರ್ ಜೋಫ್ರಾ ಆರ್ಚರ್​ನ್ನು ಕೈ ಬಿಡಲಾಗಿದೆ. ಹಾಗೆಯೇ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಮುನ್ನಡೆಸಿದ್ದ ಜೋ ರೂಟ್​ಗೂ ಸ್ಥಾನ ನೀಡಲಾಗಿಲ್ಲ.

ಬಲ ಮೊಣಕೈ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಜೋಫ್ರಾ ಆರ್ಚರ್ ವೈದ್ಯಕೀಯ ಪರಿಶೀಲನೆಗಾಗಿ ಇಂಗ್ಲೆಂಡ್​ಗೆ ಮರಳಿದ್ದಾರೆ. ಹೀಗಾಗಿ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಅವರ ಬದಲಿಗೆ ಲಿಯಾಮ್ ಲಿವಿಂಗ್​ಸ್ಟೋನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಹಾಗೆಯೇ ಹೆಚ್ಚುವರಿ ಆಟಗಾರರಾಗಿ ತಂಡದ ಜೊತೆ ಜಾಕ್ ಬಲ್ಲ್, ಕ್ರಿಸ್ ಜೋರ್ಡನ್ ಹಾಗೂ ಡೇವಿಡ್ ಮಲಾನ್ ಇರಲಿದ್ದಾರೆ.

ಇನ್ನು ಭಾರತ-ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯವು ಮಾರ್ಚ್ 23ರಂದು ನಡೆಯಲಿದ್ದು, 2ನೇ ಪಂದ್ಯ ಮಾರ್ಚ್ 26 ಹಾಗೂ 3ನೇ ಪಂದ್ಯವು
ಮಾರ್ಚ್ 28 ರಂದು ಜರುಗಲಿದೆ. ಈ ಎಲ್ಲಾ ಪಂದ್ಯಗಳು ಪುಣೆಯಲ್ಲೇ ನಡೆಯಲಿದೆ.

ಇಂಗ್ಲೆಂಡ್ ತಂಡ ಹೀಗಿದೆ: ಇಯಾನ್ ಮೋರ್ಗನ್ (ನಾಯಕ), ಮೊಯೀನ್ ಅಲಿ, ಜಾನಿ ಬೈರ್‌ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಟಾಮ್ ಕರ್ರನ್, ಸ್ಯಾಮ್ ಕರ್ರನ್, ಲಿಯಾಮ್ ಲಿವಿಂಗ್​ಸ್ಟೋನ್, ಮ್ಯಾಟ್ ಪಾರ್ಕಿನ್ಸನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ ಮತ್ತು ಮಾರ್ಕ್ ವುಡ್. ತಂಡದ ಜೊತೆ ಇರಲಿರುವ ಹೆಚ್ಚುವರಿ ಆಟಗಾರರು:- ಜಾಕ್ ಬಲ್ಲ್, ಕ್ರಿಸ್ ಜೋರ್ಡನ್ ಹಾಗೂ ಡೇವಿಡ್ ಮಲಾನ್.
Youtube Video

ಟೀಮ್ ಇಂಡಿಯಾ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಯಜುವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಶುಭ್​ಮನ್ ಗಿಲ್, ಮೊಹಮ್ಮದ್ ಸಿರಾಜ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ಪ್ರಸಿದ್ ಕೃಷ್ಣ.
Published by: zahir
First published: March 22, 2021, 5:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories