Jofra Archer: ಐಪಿಎಲ್​ ಹರಾಜಿನಲ್ಲಷ್ಟೇ ಜೋಫ್ರಾ ಆರ್ಚರ್​ ಹೆಸ್ರು.. ಹೆವ್ವಿ ಇಂಜುರಿ ಆಡೋದು ಡೌಟ್​!

2023 ಮತ್ತು 2024ರ ಸೀಸನ್‌ಗಳಲ್ಲಿ ಜೋಫ್ರಾ ಆರ್ಚರ್ ಅವರು ಆಡುವುದು ಖಚಿತ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ (ಇಸಿಬಿ) ತಿಳಿಸಿದ್ದರಿಂದ ಜೋಫ್ರಾ ಹೆಸರನ್ನು ಬಿಸಿಸಿಐಗೆ ಹರಾಜಿಗೆ ಸೇರಿಸಿದೆ

ಜೋಫ್ರಾ ಆರ್ಚರ್​

ಜೋಫ್ರಾ ಆರ್ಚರ್​

  • Share this:

ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ 2022ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮೆಗಾ ಹರಾಜಿ(Mega Auction)ಗೆ ಈಗಾಗಲೇ ವಿಶ್ವದಾದ್ಯಂತ ಆಟಗಾರರು ತಮ್ಮ-ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ. ವಿಶ್ವದ ಕೆಲ ದೊಡ್ಡ ಆಟಗಾರರು ಹರಾಜಿಗೆ ಲಭ್ಯರಾಗಿದ್ದರೆ, ಇನ್ನು ಕೆಲ ಸ್ಟಾರ್ ಆಟಗಾರರು(Star Players) ಅನಿರೀಕ್ಷಿತವಾಗಿ ಹರಾಜಿನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಪ್ರಸ್ತುತ ಮಾಹಿತಿ ಪ್ರಕಾರ ಇಂಗ್ಲೆಂಡ್(England) ತಂಡದ ಸ್ಟಾರ್ ವೇಗಿ ಜೋಫ್ರಾ ಆರ್ಚರ್(Jofra Archer)  ಐಪಿಎಲ್ ಹರಾಜಿಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫ್ರಾಂಚೈಸಿಗಳಿಗೆ ದೃಢಪಡಿಸಿದೆ. ಹೌದು ಐಪಿಎಲ್(IPL) ಹರಾಜಿಗೆ ಜೋಫ್ರಾ ಆರ್ಚರ್ ತಮ್ಮ ಹೆಸರನ್ನು ಸೇರಿಸಿದ್ದಾರೆ. ಆದರೆ, 26ರ ಹರೆಯದ ವೇಗಿ ಕೆಲವು ಇಂಜುರಿ(Injury) ಸಮಸ್ಯೆಗೆ ಒಳಗಾಗಿದ್ದು, 2022ರ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದು ಬಹುತೇಕ ಅನುಮಾನ ಎಂದು ಬಿಸಿಸಿಐ ಐಪಿಎಲ್ ಫ್ರಾಂಚೈಸಿ(IPL Franchises) ಗಳಿಗೆ ತಿಳಿಸಿದೆ.


2023, 2024ರಲ್ಲಿ ಜೋಫ್ರಾ  ಆರ್ಚರ್​ ಆಡೋದು ಕನ್ಫರ್ಮ್!

2023 ಮತ್ತು 2024ರ ಸೀಸನ್‌ಗಳಲ್ಲಿ ಜೋಫ್ರಾ ಆರ್ಚರ್ ಅವರು ಆಡುವುದು ಖಚಿತ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ (ಇಸಿಬಿ) ತಿಳಿಸಿದ್ದರಿಂದ ಜೋಫ್ರಾ ಹೆಸರನ್ನು ಬಿಸಿಸಿಐಗೆ ಹರಾಜಿಗೆ ಸೇರಿಸಿದೆ. 2022ರ ಐಪಿಎಲ್ ಆಟಗಾರರ ಮೆಗಾ ಹರಾಜಿಗೆ ವಿಶ್ವದಾದ್ಯಂತ ಒಟ್ಟು 1,214 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಇದರಲ್ಲಿ 896 ಭಾರತೀಯ ಆಟಗಾರರು ಹಾಗೂ 318 ವಿದೇಶಿ ಆಟಗಾರರು. ಆರ್ಚರ್ ಇಂಗ್ಲೆಂಡ್‌ನ ಏಕೈಕ ಹೊಸ ಸೇರ್ಪಡೆ. ಮತ್ತೊಂದು ಗಮನಾರ್ಹ ಸೇರ್ಪಡೆ ಎಂದರೆ ಉಸ್ಮಾನ್ ಖವಾಜಾ. ಇತ್ತೀಚೆಗೆ ಸಿಡ್ನಿಯಲ್ಲಿ ನಡೆದ ಆ್ಯಶಸ್ ಟೆಸ್ಟ್‌ನ ಪ್ರತಿ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ್ದರು. ಖವಾಜಾ ಅವರ ಮೀಸಲು ಬೆಲೆ 1.5 ಕೋಟಿ ರೂ ಆಗಿದೆ.


ಇದನ್ನೂ ಓದಿ: ಅವ್ನೊಬ್ಬ ಟೀಂ ಅಲ್ಲಿದ್ರೆ ಎದುರಾಳಿ ಎದೆ ನಡುಗುತ್ತಂತೆ.. ಯಾರ್​ ಬಗ್ಗೆ ಹಿಂಗ್​ ಹೇಳಿದ್ದು ಸುನೀಲ್​ ಗವಾಸ್ಕರ್​?

44 ಆಟಗಾರರ ಹೆಸರು ಹೊಸದಾಗಿ ಸೇರ್ಪಡೆ!

ಆರ್ಚರ್ ಮತ್ತು ಖವಾಜಾ ಹೊರತುಪಡಿಸಿ, 44 ಹೊಸ ಸೇರ್ಪಡೆಗಳ ಹೊಸ ಪಟ್ಟಿಯಲ್ಲಿ ಅಫ್ಘಾನಿಸ್ತಾನದಿಂದ ಒಬ್ಬರು, ಆಸ್ಟ್ರೇಲಿಯಾದಿಂದ 5, ಭಾರತದಿಂದ 11, ಐರ್ಲೆಂಡ್‌ನಿಂದ 2, ನ್ಯೂಜಿಲೆಂಡ್‌ನಿಂದ 6, ಸ್ಕಾಟ್ಲೆಂಡ್‌ನಿಂದ 2, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್‌ನಿಂದ ತಲಾ 4, ದಕ್ಷಿಣ ಆಫ್ರಿಕಾದಿಂದ 7 ಆಟಗಾರರ ಹೊಸ ಸೇರ್ಪಡೆಯಾಗಿದೆ.

ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಸ್ಟಾರ್ ಆಟಗಾರರು


ಹೊಸ ಪಟ್ಟಿಯ ಸೇರ್ಪಡೆಯಲ್ಲಿ ಸ್ಟಾರ್ ಆಟಗಾರರ ಅಲಭ್ಯತೆ ಎದ್ದು ಕಾಣುತ್ತಿದೆ. ಕ್ರಿಸ್ ಗೇಲ್, ಬೆನ್ ಸ್ಟೋಕ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಐಪಿಎಲ್ ಟೂರ್ನಿಯಿಂದ ದೂರ ಉಳಿಯಲಿದ್ದಾರೆ. 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಿಂದ ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೊರಗುಳಿದಿದ್ದಾರೆ. ಇದರೊಂದಿಗೆ ಗೇಲ್ ಅವರ ಐಪಿಎಲ್ ಯುಗಾಂತ್ಯವಾಗಿದೆ. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ಬರೆದಿರುವ ಗೇಲ್, ಐಪಿಎಲ್ ಇತಿಹಾಸದಲ್ಲಿಯೇ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಹಿಂದೆ ಆಡಿದ್ದ ಫ್ರಾಂಚೈಸಿಗಳು ಗೇಲ್ ಸೇರ್ಪಡೆಗಾಗಿ ವಿನಂತಿಸಿದ್ದವು, ಆದರೆ ಗೇಲ್ ಈ ವರ್ಷ ಐಪಿಎಲ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.


ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್​ ಮ್ಯಾಚ್​ ವೇಳೆ ಕಂಪಸಿದ ಭೂಮಿ, ಭೂಕಂಪನದ ವಿಡಿಯೋ ಸಿಕ್ಕಾಪಟ್ಟೆ ವೈರಲ್​!

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಬೆನ್​ ಸ್ಟ್ರೋಕ್ಸ್​!

ಗಾಯದ ಕಾರಣ ಕಳೆದ ಸೀಸನ್ ಐಪಿಎಲ್‌ನಿಂದ ಹೊರಗುಳಿದಿದ್ದ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಈ ಬಾರಿ ರಾಜಸ್ಥಾನ್ ರಾಯಲ್ಸ್ ಬಿಡುಗಡೆ ಮಾಡಿತ್ತು. ಇನ್ನು ಆ್ಯಶಸ್ ಸರಣಿ ಮೂಲಕ ಕಂಬ್ಯಾಕ್ ಮಾಡಿದ್ದ ಸ್ಟೋಕ್ಸ್ ಇದೀಗ ಟೆಸ್ಟ್ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಕೇಂದ್ರೀಕರಿಸಲು ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಹಾಗೆ ಮಿಚೆಲ್ ಸ್ಟಾರ್ಕ್ ಕೂಡ 2022ರ ಐಪಿಎಲ್ ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಲ್ಲ ಮತ್ತು ಲೀಗ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

Published by:Vasudeva M
First published: