ಕ್ರೀಡೆ

  • associate partner
HOME » NEWS » Sports » CRICKET ENGLAND JOFRA ARCHER PICKS THIS INDIAN AS TOUGHEST BATSMAN TO BOWL TO IN T20 CRICKET VB

Jofra Archer: ಜೋಫ್ರಾ ಆರ್ಚರ್​ಗೆ ಕರ್ನಾಟಕದ ಈ ಬ್ಯಾಟ್ಸ್​ಮನ್ ಕಂಡರೆ ಭಯವಂತೆ!

KL Rahul: 2018 ರಲ್ಲಿ 659 ರನ್ ಹಾಗೂ 2019 ರಲ್ಲಿ 593 ರನ್ ಸಿಡಿಸಿದ್ದರು. ಅದರಲ್ಲೂ 2018ರ ಸೀಸನ್​ ಒಂದರಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡದ ವಿರುದ್ಧ ಅಬ್ಬರಿಸಿದ್ದ ರಾಹುಲ್ 54 ಬಾಲ್​ಗಳಲ್ಲಿ 84 ರನ್ ಚಚ್ಚಿದ್ದರು.

news18-kannada
Updated:May 11, 2020, 9:11 AM IST
Jofra Archer: ಜೋಫ್ರಾ ಆರ್ಚರ್​ಗೆ ಕರ್ನಾಟಕದ ಈ ಬ್ಯಾಟ್ಸ್​ಮನ್ ಕಂಡರೆ ಭಯವಂತೆ!
2019 ರಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕೆಎಲ್​ಆರ್​ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಹೀಗಾಗಿ ಮುಂದೊಂದು ದಿನ ರಾಹುಲ್ ಬ್ಯಾಟ್​ನಿಂದಲೇ ಹೊಸ ವಿಶ್ವ ದಾಖಲೆ ಮೂಡಿ ಬಂದರೂ ಆಶ್ಚರ್ಯಪಡಬೇಕಿಲ್ಲ.
  • Share this:
ಜೋಫ್ರಾ ಆರ್ಚರ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ವೇಗಿ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡದ ಪರ ಆಡುತ್ತಿರುವ ಇವರು, ಕಳೆದ ಸೀಸನ್​ನಲ್ಲಿ ಮಿಂಚುಹರಿಸಿದ್ದರು. ಸದ್ಯ ತನಗೆ ಟಿ-20 ಕ್ರಿಕೆಟ್​ನಲ್ಲಿ ಬೌಲಿಂಗ್ ಮಾಡಲು ಕಷ್ಟವಾದ ಬ್ಯಾಟ್ಸ್​ಮನ್​ ಯಾರು? ಎಂಬುದನ್ನು ಆರ್ಚರ್ ಬಹಿರಂಗ ಪಡಿಸಿದ್ದಾರೆ.

ಟೀಂ ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡು ಕೇವಲ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೆ ವಿಕೆಟ್ ಕೀಪಿಂಗ್​ನಲ್ಲೂ ಅಮೋಘ ಪ್ರದರ್ಶನ ನೀಡುತ್ತಿರುವ ಹೆಮ್ಮೆಯ ಕನ್ನಡಿದ ಕೆ. ಎಲ್ ರಾಹುಲ್​ಗೆ ಬೌಲಿಂಗ್ ಮಾಡುವಾಗ ಭಯ ಆಗುತ್ತದೆ ಎಂದು ನ್ಯೂಜಿಲೆಂಡ್​ನ ಇಶ್ ಸೋಧಿ ಜೊತೆಗಿನ ಆನ್​ಲೈನ್​​ ಚಾಟ್​ನಲ್ಲಿ ಆರ್ಚರ್ ಹೇಳಿದ್ದಾರೆ.

He’s got me a couple of times: Jofra Archer picks KL Rahul as toughest T20 batsman he’s bowled to
ಜೋಫ್ರಾ ಆರ್ಚರ್.


ವಿರಾಟ್ ಕೊಹ್ಲಿಯನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ ಯಾರು ಗೊತ್ತಾ?

'ರಾಹುಲ್ ಎದುರು ಬೌಲಿಂಗ್ ಮಾಡುವುದು ಅಷ್ಟೊಂದು ಸುಲಭವಲ್ಲ. ರಾಹುಲ್ ಬ್ಯಾಟಿಂಗ್ ಮಾಡುವ ಶೈಲಿ ಭಿನ್ನವಾಗಿದೆ. ಐಪಿಎಲ್ ಟೂರ್ನಿಯಲ್ಲಿ ಹಲವು ಬಾರಿ ನನ್ನ ಬೌಲಿಂಗ್​ಗೆ ಅವರು ಅದ್ಭುತವಾಗಿ ಆಡಿದ್ದಾರೆ' ಎಂಬುದು ಆರ್ಚರ್ ಮಾತು.

ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಪ್ರಮುಖ ಆಟಗಾರನಾಗಿರುವ ರಾಹುಲ್, ಕಳೆದ ಎರಡು ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ್ದರು. 2018 ರಲ್ಲಿ 659 ರನ್ ಹಾಗೂ 2019 ರಲ್ಲಿ 593 ರನ್ ಸಿಡಿಸಿದ್ದರು. ಅದರಲ್ಲೂ 2018ರ ಸೀಸನ್​ ಒಂದರಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡದ ವಿರುದ್ಧ ಅಬ್ಬರಿಸಿದ್ದ ರಾಹುಲ್ 54 ಬಾಲ್​ಗಳಲ್ಲಿ 84 ರನ್ ಚಚ್ಚಿದ್ದರು. ಈ ಪಂದ್ಯದಲ್ಲಿ ಆರ್ಚರ್ ಬೌಲಿಂಗ್​ನಲ್ಲೇ 2 ಸಿಕ್ಸರ್ ಹಾಗೂ 3 ಬೌಂಡಿರು ಬಾರಿಸಿದ್ದರು.

ನಮಗೂ ಅವಕಾಶ ನೀಡಬೇಕೆಂದು ನೋವು ತೋಡಿಕೊಂಡ ಇರ್ಫಾನ್-ರೈನಾ..!ಇನ್ನೂ ಇಶ್ ಸೋಧಿ ಕೂಡ ಕೆ. ಎಲ್ ರಾಹುಲ್ ಕುರಿತು ಮಾತನಾಡಿದ್ದು, 'ಆತ ಅದ್ಭುತ ಆಟಗಾರ. ಕಳೆದ ಬಾರಿ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಬೆಳೆಸಿದ್ದವೇಳೆ ರಾಹುಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಚಿಕ್ಕ ಕ್ರೀಡಾಂಗಣದ ಸಂಪೂರ್ಣ ಲಾಭ ಪಡೆದಿದ್ದರು' ಎಂದು ಹೇಳಿದ್ದಾರೆ.

First published: May 11, 2020, 8:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading