• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • IPL 2021 - ರಾಯಲ್ಸ್ ತಂಡಕ್ಕೆ ಡಬಲ್ ಶಾಕ್; ಜೋಫ್ರಾ ಬಳಿಕ ಮತ್ತೊಬ್ಬ ಪ್ರಮುಖ ಆಟಗಾರ ಔಟ್

IPL 2021 - ರಾಯಲ್ಸ್ ತಂಡಕ್ಕೆ ಡಬಲ್ ಶಾಕ್; ಜೋಫ್ರಾ ಬಳಿಕ ಮತ್ತೊಬ್ಬ ಪ್ರಮುಖ ಆಟಗಾರ ಔಟ್

ಬೆನ್ ಸ್ಟೋಕ್ಸ್

ಬೆನ್ ಸ್ಟೋಕ್ಸ್

ಮೊನ್ನೆ ಏ. 12ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಬೆನ್ ಸ್ಟೋಕ್ಸ್ ಗಾಯಗೊಂಡಿದ್ದರು. ಅದೇ ಕಾರಣದಿಂದ ಅವರು ಉಳಿದ ಐಪಿಎಲ್ ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತಿಲ್ಲ.

 • Share this:

  ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಬೆನ್ನೆಲುಬೆಂದು ಪರಿಗಣಿಸಲಾಗಿದ್ದ ಇಂಗ್ಲೆಂಡ್ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಐಪಿಎಲ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ಆಡುವ ವೇಳೆ ಬೆನ್ ಸ್ಟೋಕ್ಸ್ ಗಾಯಗೊಂಡಿದ್ದರು. ಪಂಜಾಬ್​ನ ಇನ್ನಿಂಗ್ಸ್​ನ 10ನೇ ಓವರ್​ನಲ್ಲಿ ಕ್ರಿಸ್ ಗೇಲ್ ಬ್ಯಾಟಿಂಗ್ ಮಾಡುವಾಗ ಹೊಡೆದ ಚೆಂಡನ್ನು ಬೆನ್ ಸ್ಟೋಕ್ಸ್ ಹಿಡಿಯುವ ಪ್ರಯತ್ನದಲ್ಲಿ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಅವರ ಬೆರಳು ಮುರಿದಿರುವುದು ತಿಳಿದುಬಂದಿದ್ದು, ಮುಂದಿನ ಐಪಿಎಲ್ ಪಂದ್ಯಗಳನ್ನ ಆಡದಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ.


  ಇಂಗ್ಲೆಂಡ್​ನ ಪ್ರಮುಖ ವೇಗದ ಬೌಲರ್ ಜೋಫ್ರಾ ಆರ್ಚರ್ ಕೂಡ ಐಪಿಎಲ್​ನಲ್ಲಿ ಅಲಭ್ಯರಾಗಿದ್ದಾರೆ. ಈಗ ಬೆನ್ ಸ್ಟೋಕ್ಸ್ ಕೂಡ ತಂಡದಿಂದ ಹೊರಗುಳಿಯುತ್ತಿರುವುದು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಶಾಕ್ ಕೊಟ್ಟಿದೆ. ಆದರೆ, ಬೆನ್ ಸ್ಟೋಕ್ಸ್ ಮೈದಾನಕ್ಕೆ ಅಡಿ ಇಡದಿದ್ದರೂ ತಂಡದಲ್ಲಿ ಉಳಿದುಕೊಂಡು ತಮ್ಮ ಅನುಭವದ ಮೂಲಕ ಸಲಹೆಗಳನ್ನ ನೀಡಲಿದ್ದಾರೆ.


  “ಬೆನ್ ಸ್ಟೋಕ್ಸ್ ಅವರು ಅನ್ ಫೀಲ್ಡ್ ಮತ್ತು ಆಫ್ ಫೀಲ್ಡ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅಮೂಲ್ಯವೆನಿಸಿದ್ದಾರೆ…. ಅವರು ನಮ್ಮ ತಂಡದೊಂದಿಗೇ ಉಳಿದು ತಮ್ಮ ಸಲಹೆಗಳನ್ನ ನೀಡುವುದನ್ನು ಮುಂದುವರಿಸಲಿದ್ದಾರೆಂಬುದು ನಮಗೆ ಖುಷಿ ತಂದಿದೆ. ಆನ್ ಫೀಲ್ಡ್​ನಲ್ಲಿ ಅವರ ಸ್ಥಾನ ತುಂಬುವ ಸಮರ್ಥ ಆಟಗಾರನ ಅನ್ವೇಷಣೆ ನಡೆಸುತ್ತಿದ್ದೇವೆ” ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಹೇಳಿಕೆಯಲ್ಲಿ ತಿಳಿಸಲಾಗಿದೆ.


  ಇದನ್ನೂ ಓದಿ: Sanju Samson: ಒಂದು ಶತಕದೊಂದಿಗೆ ಹಲವು ದಾಖಲೆ ಬರೆದ ಸಂಜು ಸ್ಯಾಮ್ಸನ್..!


  ಪಂಜಾಬ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಬೌಲಿಂಗ್ ಮಾಡಿದ್ದು ಒಂದೇ ಓವರ್. ಬ್ಯಾಟಿಂಗ್​ನಲ್ಲಿ ಸ್ಟೋಕ್ಸ್ ಕೇವಲ 3 ಬಾಲ್ ಎದುರಿಸಿ ಶಮಿಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದ್ದರು. ಆ ಪಂದ್ಯದಲ್ಲಿ ಗೆಲುವಿಗೆ 222 ರನ್​ಗಳ ಕಠಿಣ ಗುರಿ ಪಡೆದಿದ್ದ ರಾಜಸ್ಥಾನ್ ರಾಯಲ್ಸ್ ತಂಡ 217 ರನ್ ಗಳಿಸಿ 4 ರನ್​ಗಳಿಂದ ವೀರೋಚಿತ ಸೋಲನುಭವಿಸಿತ್ತು. ಸಂಜು ಸ್ಯಾಮ್ಸನ್ ಕೇವಲ 63 ಎಸೆತದಲ್ಲಿ 119 ರನ್ ಗಳಿಸಿದ್ದು ರಾಯಲ್ಸ್ ತಂಡವನ್ನು ಗೆಲುವಿನ ದಡದ ಸಮೀಪಕ್ಕೆ ಕೊಂಡೊಯ್ದಿತ್ತು.

  Published by:Vijayasarthy SN
  First published: