8 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿರುವಂತಹ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಅವರನ್ನು 14ನೇ ಸ್ಥಾನದ ಹ್ಯುಬರ್ಟ್ ಹರ್ಕಜ್ಹ್ ಅವರು ಆಲ್ ಇಂಗ್ಲೆಂಡ್ ಕ್ಲಬ್ ನ ಕ್ವಾರ್ಟರ್ ಫೈನಲ್ ನಲ್ಲಿ ನೇರ ಸೆಟ್‌ಗಳಿಂದ ಮಣಿಸಿದರು. 8 ಬಾರಿ ವಿಂಬಲ್ಡನ್ ಚಾಂಪಿಯನ್ ಅವರನ್ನು ಪೋಲಾಂಡ್‌ನ ಟೆನ್ನಿಸ್ ಆಟಗಾರ ಹ್ಯುಬರ್ಟ್ ಅವರು ಆಲ್ ಇಂಗ್ಲೆಂಡ್ ಕ್ಲಬ್ ನ ಕ್ವಾರ್ಟರ್ ಫೈನಲ್ ನಲ್ಲಿ 6-3, 7-6(4), 6-0 ನೇರ ಸೆಟ್‌ಗಳಿಂದ ಬುಧವಾರದಂದು ಹೀನಾಯವಾಗಿ ಸೋಲಿಸಿದರು. ಈ ಆಲ್ ಇಂಗ್ಲೆಂಡ್ ಕ್ಲಬ್ ಟೂರ್ನಮೆಂಟ್ ನಲ್ಲಿ ಇದುವರೆಗೂ ಫೆಡರರ್ 22ನೇ ಬಾರಿ ಆಟದ ಮೈದಾನದಲ್ಲಿ ಕಾಣಿಸಿಕೊಂಡಿದ್ದರು.
ಫೆಡರರ್ ಅವರ ಈ ಸೋಲು "ಧನ್ಯವಾದಗಳು... ಒಂದು ವೇಳೆ ... ಗುಡ್ ಬಾಯ್ ಸಹ ಆಗಬಹುದೆಂಬ ಭಾವನೆಯು ಟೆನ್ನಿಸ್ ಆಟದ ಮೈದಾನದಲ್ಲಿ ನೆರೆದಿರುವ ಜನರಲ್ಲಿ ಮೂಡಿರಬೇಕು ಎಂಬಂತೆ ಭಾಸವಾಗುತ್ತಿತ್ತು. ಆದರೆ ಫೆಡರರ್ ಸಹ "ನನಗೆ ಗೊತ್ತಿಲ್ಲ ನಾನು ಮರಳಿ ಇಲ್ಲಿಗೆ ಬರುತ್ತೇನೆ ಎಂದು" ಅಂತ ಹೇಳಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇಲ್ಲಿಗೆ ಬರುವುದು ಇದೇ ಕೊನೆಯಬಾರಿ ಆಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಸ್ವತಃ ಫೆಡರರ್ ಅವರೇ "ನನಗೆ ಗೊತ್ತಿಲ್ಲ, ನಿಜಕ್ಕೂ ಗೊತ್ತಿಲ್ಲ, ಆದರೆ ಮತ್ತೊಮ್ಮೆ ನಾನು ಆಟಕ್ಕೆ ಸಜ್ಜಾಗಬೇಕಿದೆ" ಎಂದು ಹೇಳಿದರು. ನೀವು ಆಟಕ್ಕೆ ವಿದಾಯ ಘೋಷಿಸುವಿರಾ ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಫೆಡರರ್ "ಇಲ್ಲ ಇಲ್ಲ ಇನ್ನೂ ಟೆನ್ನಿಸ್ ಆಡುವ ಗುರಿಯನ್ನು ನಾನು ಹೊಂದಿದ್ದೇನೆ" ಎಂದು ನುಡಿದರು.
ಕಳೆದ ಕೆಲವು ಪಂದ್ಯಗಳಿಂದ ನೀವು ನಿಮ್ಮ ನೈಜ ಆಟವನ್ನು ಆಡಲು ಆಗುತ್ತಿಲ್ಲಾ ಎಂಬ ಪ್ರಶ್ನೆಗೆ ಫೆಡರರ್ ನ್ಯೂಸ್ ಕಾನ್ಪರೆನ್ಸ್ ನಲ್ಲಿ ತಮ್ಮ ಯಾವುದೇ ಭಾವನೆಯನ್ನು ಹೊರಹಾಕದೆ "ನಾನು ಈ ತರವಾದಂತಹ ಪರಿಸ್ಥಿತಿಗಳನ್ನು ಎದುರಿಸಿರಲಿಲ್ಲ ಮತ್ತು ಅದರಲ್ಲೂ ಈ ಟೊರ್ನಾಮೆಂಟ್ ನಲ್ಲಿ ನಾನು ಊಹಿಸಿರಲಿಲ್ಲ" ಎಂದು ಹೇಳಿದರು.
24 ವರ್ಷದ ಪೋಲಾಂಡ್ ಆಟಗಾರ ಫೆಡರರ್ ಅವರನ್ನೇ ಅವರ ಐಡಲ್ ಎಂದು ಭಾವಿಸಿದ್ದು, ಈ ಪಂದ್ಯದ ಫಲಿತಾಂಶವನ್ನು ನೀವು ಮೊದಲೇ ಊಹಿಸಿದ್ದೀರಾ ಎಂದು ಕೇಳಿದ ಪ್ರಶ್ನೆಗೆ, " ಇಲ್ಲ ಇಲ್ಲ ನಾನು ಇದನ್ನು ಊಹಿಸಿರಲಿಲ್ಲ" ಎಂದು ಪೋಲಾಂಡ್ ನ ಟೆನ್ನಿಸ್ ಆಟಗಾರ ಹೇಳಿದರು.
ಆಗಸ್ಟ್ 8 ಕ್ಕೆ 40 ವರ್ಷ ತುಂಬಲಿರುವ ಫೆಡರರ್ ಗೆ 2020 ರಲ್ಲಿ ಎರಡು ಬಾರಿ ತಮ್ಮ ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಬೇಕಾಯ್ತು ಮತ್ತು ನಂತರ ಅವರು ಕೇವಲ ಎಂಟು ಪಂದ್ಯಗಳನ್ನಾಡಿ ವಿಂಬಲ್ಡನ್ ಗೆ ಬಂದಿದ್ದು ಇಲ್ಲಿ ಗಮನಿಸಬೇಕಾದಂತಹ ಅಂಶವಾಗಿದೆ.
"ನನಗೆ ಈ ಎಲ್ಲಾ ಸಮಸ್ಯೆಗಳ ಮಧ್ಯ ಇಲ್ಲಿವರೆಗೂ ಸಾಗಿ ಬಂದ ನನ್ನ ಕ್ರೀಡಾ ಜೀವನದ ಬಗ್ಗೆ ತುಂಬಾ ಖುಷಿ ಇದೆ ಮತ್ತು ನಾನು ಮತ್ತೆ ವಿಂಬಲ್ಡನ್ ಆಡಬೇಕೆಂಬ ಬಯಕೆ ನನ್ನಲ್ಲಿದ್ದೆ, ಆದರೆ ನನ್ನ ವಯಸ್ಸನ್ನು ಗಣನೆಗೆ ತೆಗೆದುಕೊಂಡರೆ ಮುಂದೆ ಏನು ಆಗಲಿದೆ ಎನ್ನುವುದರ ಬಗ್ಗೆ ನನಗೂ ಸಹ ಗೊತ್ತಿಲ್ಲ" ಎಂದು ಫೆಡರರ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ