ಈ ಸಲ ಕಪ್ ನಮ್ದೆ: ಆಸ್ಟ್ರೇಲಿಯಾದಿಂದ ಘೋಷವಾಕ್ಯ ಮೊಳಗಿಸಿದ ಆರ್​ಸಿಬಿ ಆಟಗಾರ

RCB: ಈ ಹಿಂದೆ ಕೂಡ ಆರ್​ಸಿಬಿ ಆಟಗಾರರು ಈ ಸಲ ಕಪ್ ನಮ್ದೆ ಎಂದು ಘೋಷಿಸುವ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು. ಆದರೆ  12 ಸೀಸನ್​ಗಳಲ್ಲೂ ಕಪ್ ಮಾತ್ರ ಆರ್​ಸಿಬಿ ಪಾಲಾಗಿರಲಿಲ್ಲ.

zahir | news18-kannada
Updated:January 6, 2020, 6:00 PM IST
ಈ ಸಲ ಕಪ್ ನಮ್ದೆ: ಆಸ್ಟ್ರೇಲಿಯಾದಿಂದ ಘೋಷವಾಕ್ಯ ಮೊಳಗಿಸಿದ ಆರ್​ಸಿಬಿ ಆಟಗಾರ
ಆರ್​ಸಿಬಿ ತಂಡ
  • Share this:
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಅಭಿಮಾನಿಗಳ ಎವರ್​ಗ್ರೀನ್ ಸ್ಲೋಗನ್ ಈ ಸಲ ಕಪ್ ನಮ್ದೆ ಮತ್ತೆ ಸದ್ದು ಮಾಡಲಾರಂಭಿಸಿದೆ. ಅದು ಕೂಡ ದೂರ ಆಸ್ಟ್ರೇಲಿಯಾದಿಂದ ಎಂಬುದು ವಿಶೇಷ. ಹೌದು, ಆರ್​ಸಿಬಿ ತಂಡದ ಆಟಗಾರ ಡೇಲ್ ಸ್ಟೇನ್  'ಈ ಸಲ ಕಪ್ ನಮ್ದೆ' ಘೋಷವಾಕ್ಯ ಮೊಳಗಿಸುವ ಮೂಲಕ ಗಮನ ಸೆಳೆದಿದ್ದಾರೆ.

ಬಿಗ್ ಬ್ಯಾಷ್ ಲೀಗ್ ಟೂರ್ನಿಯಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಸ್ಟೇನ್ ಪ್ರತಿನಿಧಿಸುತ್ತಿದ್ದಾರೆ. ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ದದ ಪಂದ್ಯದ ಬಳಿಕ ದಕ್ಷಿಣ ಆಫ್ರಿಕಾ ವೇಗಿ ಆಟೋಗ್ರಾಫ್ ನೀಡುತ್ತಿದ್ದರು. ಈ ವೇಳೆ ಆರ್‌ಸಿಬಿ ಅಭಿಮಾನಿಯೊಬ್ಬರು ಈ ಸಲ ಕಪ್ ನಮ್ದೆ ಎಂದು ಹೇಳಲು ವಿನಂತಿಸಿದ್ದರು.

ಅದರಂತೆ ಈ ಸಲ ಕಪ್ ನಮ್ದೆ ಎಂದು ಡೇಲ್ ಸ್ಟೇನ್ ಘೋಷಿಸಿದ್ದಾರೆ. ಈ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಹಿಂದೆ ಕೂಡ ಆರ್​ಸಿಬಿ ಆಟಗಾರರು ಈ ಸಲ ಕಪ್ ನಮ್ದೆ ಎಂದು ಘೋಷಿಸುವ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು. ಆದರೆ  12 ಸೀಸನ್​ಗಳಲ್ಲೂ ಕಪ್ ಮಾತ್ರ ಆರ್​ಸಿಬಿ ಪಾಲಾಗಿರಲಿಲ್ಲ.


ಆದರೀಗ ಡೇಲ್ ಸ್ಟೇನ್ ಪದೇ ಪದೇ ರಾಯಲ್ ಚಾಲೆಂಜರ್ಸ್​ ತಂಡದ ಅಭಿಮಾನಿಗಳನ್ನು ಐಪಿಎಲ್​ಗೂ ಮುನ್ನವೇ ಹುರಿದುಂಬಿಸುತ್ತಿರುವುದು ವಿಶೇಷ. ಏಕೆಂದರೆ ಕಳೆದ ತಿಂಗಳು  ಫ್ಯಾನ್​ವೊಬ್ಬರು ಈ ಬಾರಿ ಆರ್​ಸಿಬಿ ಕಪ್ ಗೆಲ್ಲಲಿದೆಯಾ ಎಂದು ಕೇಳಿದಕ್ಕೆ, ನಾನೀದ್ದೀನಲ್ವಾ, ಖಂಡಿತವಾಗಿಯೂ ಗೆಲ್ಲುತ್ತೇವೆ ಎಂದು ಸ್ಟೇನ್ ಭವಿಷ್ಯ ನುಡಿದಿದ್ದರು.


ಕಳೆದ ಸಾಲಿನಲ್ಲೂ ಆರ್‌ಸಿಬಿ ಪರ ಭರ್ಜರಿ ಬೌಲಿಂಗ್ ನಡೆಸಿದ್ದ ಸ್ಟೇನ್ ಗಾಯದಿಂದಾಗಿ ಟೂರ್ನಿಯ ಅರ್ಧದಲ್ಲೇ ಹೊರಗುಳಿಯುಂತಾಗಿತ್ತು. ಈ ವರ್ಷ ತಂಡದಿಂದ ಕೈಬಿಟ್ಟರೂ ಬಳಿಕಎರಡು ಕೋಟಿ ರೂ.ಗಳ ಮೂಲ ಬೆಲೆಗೆ ಡೇಲ್​ ಸ್ಟೇನ್​ರನ್ನು ಆರ್‌ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಹೀಗಾಗಿ ಈ ಬಾರಿ ಕಪ್ ಗೆಲ್ಲಲಿದೆ ಎಂಬ ವಿಶ್ವಾಸವೊಂದು ಅಭಿಮಾನಿಗಳಲ್ಲಿ ಕವಲೊಡೆದಿದೆ.

ಇದನ್ನೂ ಓದಿ: ಭಾರತೀಯ ಸಿನಿ ಇತಿಹಾಸದಲ್ಲೇ ಹೊಸ ದಾಖಲೆ: ಕನ್ನಡ ಚಿತ್ರರಂಗದ ಹೆಮ್ಮೆ ಕಿಚ್ಚ ಸುದೀಪ್
First published:January 6, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ