ಮಾಹಿ ಬರ್ತ್​ ಡೇಗೆ ಸ್ಪೆಷಲ್​ ಸಾಂಗ್​!; ​​​ವಿಂಡೀಸ್​​ ಆಟಗಾರನಿಂದ ಧೋನಿಗೆ ‘ನಂಬರ್​ 7‘ ಗಿಫ್ಟ್​​

ಜುಲೈ 7 ರಂದು ಮಹೇಂದ್ರ ಸಿಂಗ್​​ ಧೋನಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು ಬ್ರಾವೊ ಮಾಹಿಗೆ ಬೆಸ್ಟ್​​ ಗಿಫ್ಟ್​ ನೀಡಲು ಮುಂದಾಗಿದ್ದಾರೆ. ಕ್ರಿಕೆಟ್​ ಲೋಕದಲ್ಲಿ ಮಾತ್ರವಲ್ಲದೆ ಸಂಗೀತ ಲೋಕದಲ್ಲೂ ಪ್ರಸಿದ್ಧಿ ಪಡೆದಿರುವ ಬ್ರಾವೊ ಅವರು ಮಾಹಿ ಹುಟ್ಟುಹಬ್ಬಕ್ಕೆ ‘ನಂಬರ್ 7‘ ಎಂಬ ಹಾಡನ್ನು ಸಿದ್ಧಪಡಿಸುತ್ತಿದ್ದಾರೆ. ಈ ಹಾಡನ್ನು ಧೋನಿ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಿದ್ದಾರೆ.

ಬ್ರಾವೊಗ-ಧೋನಿ

ಬ್ರಾವೊಗ-ಧೋನಿ

 • Share this:
  ಟೀಂ ಇಂಡಿಯಾದ ಆಟಗಾರ ಮಹೇಂದ್ರ ಸಿಂಗ್​ ಧೋನಿ ಭಾರತೀಯರಿಗೆ ಮಾತ್ರವಲ್ಲ, ವಿದೇಶಿಯರಿಗೂ ಅಚ್ಚುಮೆಚ್ಚು. ಸಾಕಷ್ಟು ವಿದೇಶಿ ಅಭಿಮಾನಿಗಳನ್ನು ಹೊಂದಿದ್ದಾರೆ ಧೋನಿ. ಅಷ್ಟೇ ಏಕೆ ವಿದೇಶಿ ಕ್ರಿಕೆಟ್​ ತಾರೆಯರಿಗೂ ಮಹೇಂದ್ರ ಸಿಂಗ್​ ಧೋನಿ ಎಂದರೆ ಇಷ್ಟ. ಅದರಲ್ಲೂ ವೆಸ್ಟ್​ ಇಂಡೀಸ್​ ಆಟಗಾರ ಬ್ರಾವೊಗೆ ಧೋನಿ ಮೇಲೆ ಎಲ್ಲಿಲ್ಲದ ಪ್ರೀತಿ. ಐಪಿಎಲ್​ನಲ್ಲಿ ಇವರಿಬ್ಬರು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಆಡುತ್ತಿದ್ದಾರೆ. ಹಾಗಾಗಿ ಇವರಿಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ.

  ಜುಲೈ 7 ರಂದು ಮಹೇಂದ್ರ ಸಿಂಗ್​​ ಧೋನಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದಂದು ಬ್ರಾವೊ ಮಾಹಿಗೆ ಬೆಸ್ಟ್​​ ಗಿಫ್ಟ್​ ನೀಡಲು ಮುಂದಾಗಿದ್ದಾರೆ. ಕ್ರಿಕೆಟ್​ ಲೋಕದಲ್ಲಿ ಮಾತ್ರವಲ್ಲದೆ ಸಂಗೀತ ಲೋಕದಲ್ಲೂ ಪ್ರಸಿದ್ಧಿ ಪಡೆದಿರುವ ಬ್ರಾವೊ ಅವರು ಮಾಹಿ ಹುಟ್ಟುಹಬ್ಬಕ್ಕೆ ‘ನಂಬರ್ 7‘ ಎಂಬ ಹಾಡನ್ನು ಸಿದ್ಧಪಡಿಸುತ್ತಿದ್ದಾರೆ. ಈ ಹಾಡನ್ನು ಧೋನಿ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಿದ್ದಾರೆ.

  ಬ್ರಾವೊ ‘ನಂಬರ್​ 7‘ ಹಾಡಿನ ಟೀಸರ್​​​ ಅನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಹಾಡು ಕೇಳಿದಾಗ ಬ್ರಾವೊ ಅದ್ಧೂರಿಯಾಗಿ ವಿಶ್​ ಮಾಡಲಿದ್ದಾರೆ ಎಂಬುದು ಕಾಣಿಸುತ್ತಿದ್ದೆ.

  ಬ್ರಾವೋ ಈಗಾಗಲೇ ಕೆಲವು ಹಾಡುಗಳನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ‘ಡಿಜೆ ಬ್ರಾವೊ ಚಾಂಪಿಯನ್’​​​ ಎಂಬ ಹಾಡು ಜನಪ್ರಿಯತೆ ಪಡೆದಿತ್ತು. ಇದೀಗ ಧೋನಿ ಜುಲೈ 7 ರಂದು ತಮ್ಮ 39ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಬ್ರಾವೊ ‘ನಂಬರ್​ 7’ ಹಾಡನ್ನು ಗಿಫ್ಟ್​​​ ಆಗಿ ನೀಡಲಿದ್ದಾರೆ.
  First published: