ಸಲಿಂಗಿ ಸಂಬಂಧ ಹೊಂದಿರುವುದಾಗಿ ಬಹಿರಂಗ ಪಡಿಸಿದ ಖ್ಯಾತ ಅಥ್ಲೀಟ್ ತಾರೆ

ಇತ್ತೀಚೆಗೆ ನಡೆದ ಏಷ್ಯಾನ್ ಅಥ್ಲೆಟಿಕ್ ಚಾಂಪಿಯನ್​ಶಿಷ್​ನ 200ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದರು.

zahir | news18
Updated:May 19, 2019, 10:56 PM IST
ಸಲಿಂಗಿ ಸಂಬಂಧ ಹೊಂದಿರುವುದಾಗಿ ಬಹಿರಂಗ ಪಡಿಸಿದ ಖ್ಯಾತ ಅಥ್ಲೀಟ್ ತಾರೆ
ದ್ಯುತಿ ಚಾಂದ್
  • News18
  • Last Updated: May 19, 2019, 10:56 PM IST
  • Share this:
ಭಾರತದ ಖ್ಯಾತ ಅಥ್ಲೀಟ್ ತಾರೆ ದ್ಯುತಿ ಚಾಂದ್ ತಾನು ಸಲಿಂಗಿ ಸಂಬಂಧ ಹೊಂದಿರುವುದಾಗಿ ಬಹಿರಂಗಪಡಿಸಿದ್ದಾರೆ. 2018 ರ ಏಷ್ಯನ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದು ಸಂಚಲನ ಸೃಷ್ಟಿಸಿದ್ದ ದ್ಯುತಿ, ತಮ್ಮ ಸಂಗಾತಿಯ ಬಗ್ಗೆ ತಿಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಒಡಿಶಾ ರಾಜ್ಯದ ಚಕ ಗೋಪಾಲ್​ಪುರ ಮೂಲದ 23 ವರ್ಷದ ಯುವತಿಯೊಂದಿಗೆ ಸಂಬಂಧ ಹೊಂದಿದ್ದು, ಅವರ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ. ಆಕೆಯೇ ನನ್ನ ಬಾಳಸಂಗಾತಿ ಎಂದು ಮದುವೆ ವಿಷಯದ ಪ್ರಶ್ನೆಗೆ ದ್ಯುತಿ ಚಾಂದ್ ಉತ್ತರಿಸಿದ್ದಾರೆ.

ಎಲ್ಲರಿಗೂ ಅವರವರ ಇಚ್ಛೆಯಂತೆ ಜೊತೆಗಾರರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ. ನಾನು ಸಹ ಬಾಳಸಂಗಾತಿಯನ್ನು ಕಂಡುಕೊಂಡಿದ್ದೇನೆ. ಈ ಹಿಂದೆಯೇ ನಾನು ಸಲಿಂಗ ಸಂಬಂಧವನ್ನು ಬೆಂಬಲಿಸಿದ್ದೆ. ಈಗಲೂ ಬೆಂಬಲಿಸುತ್ತಲೇ ಬರುತ್ತಿರುವುದಾಗಿ ಇದೇ ವೇಳೆ ತಿಳಿಸಿದರು.

ಇತ್ತೀಚೆಗೆ ನಡೆದ ಏಷ್ಯಾನ್ ಅಥ್ಲೆಟಿಕ್ ಚಾಂಪಿಯನ್​ಶಿಷ್​ನ 200ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದರು. ಸದ್ಯ ಮುಂಬರುವ ಅಥ್ಲೆಟಿಕ್ಸ್​ನಲ್ಲಿ ಪದಕ ಗೆಲ್ಲುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.ಭಾರತದಲ್ಲೂ ಸಲಿಂಗ ವಿವಾಹ ಕಾನೂನಬದ್ಧವಾಗಿದ್ದು, ಕಾಯ್ದೆ 377 ನಿಯಮದ ಪ್ರಕಾರ ಸಲಿಂಗಿ ಸಂಬಂಧಗಳು ಕಾನೂನು ಬಾಹಿರವಲ್ಲ ಎಂದು ಸುಪ್ರೀಂ ಕೋರ್ಟ್​ ಕಳೆದ ವರ್ಷ ತೀರ್ಪು ನೀಡಿದೆ. ಹಾಗಾಗಿ ಈ ಸಂಬಂಧದಲ್ಲಿ ಯಾವುದೇ ತಪ್ಪಿಲ್ಲ ಎಂದು ದ್ಯುತಿ ಚಾಂದ್ ಹೇಳಿದ್ದಾರೆ.


Loading...

ಇದನ್ನೂ ಓದಿ: ಟೀಂ ಇಂಡಿಯಾದ ಈ ಆಟಗಾರ ತಂಡದಲ್ಲಿದ್ದರೆ, 2023ರ ವಿಶ್ವಕಪ್​ನಲ್ಲಿ ಆಡುವೆ ಎಂದ ಎಬಿಡಿ

ಇದನ್ನೂ ಓದಿ: ಮಾನವೀಯತೆ ಮರೆದ ವಿಶ್ವದ ಶ್ರೇಷ್ಠ ಆಟಗಾರ..!

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ

First published:May 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...