ಧೋನಿ ಮಾಡಿದ ಸಣ್ಣದೊಂದು ಎಡವಟ್ಟು ಟೀಂ ಇಂಡಿಯಾದ ಸೋಲಿಗೆ ಕಾರಣವಾಯ್ತು..!

ಈ ಹಿಂದೆ ಅನೇಕ ಬಾರಿ ಧೋನಿಯು ಡಿಆರ್​ಎಸ್​ ಮನವಿಯನ್ನು ನಿಖರವಾಗಿ ಮಾಡಿದ್ದರೂ, ಈ ಬಾರಿ ವಿಶ್ವಕಪ್​ನಲ್ಲಿ ಮಾಜಿ ನಾಯಕನ ಲೆಕ್ಕಾಚಾರಗಳು ತಲೆಕೆಳಗಾಗುತ್ತಿದೆ.

zahir | news18
Updated:July 1, 2019, 4:10 PM IST
ಧೋನಿ ಮಾಡಿದ ಸಣ್ಣದೊಂದು ಎಡವಟ್ಟು ಟೀಂ ಇಂಡಿಯಾದ ಸೋಲಿಗೆ ಕಾರಣವಾಯ್ತು..!
Dhoni-virat-pandya
  • News18
  • Last Updated: July 1, 2019, 4:10 PM IST
  • Share this:
ಐಸಿಸಿ ವಿಶ್ವಕಪ್​ನಲ್ಲಿ  ಅಜೇಯರಾಗಿ ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾಗೆ ಕೊನೆಗೂ ಸೋಲಿನ ರುಚಿ ತೋರಿಸಲು ಇಂಗ್ಲೆಂಡ್​ ಪಡೆ ಯಶಸ್ವಿಯಾಗಿದೆ. ರೋಹಿತ್ ಶರ್ಮಾರ ಶತಕದ ಹೊರತಾಗಿಯು ಬೌಲರ್​ಗಳ ಸಂಘಟಿತ ಹೋರಾಟದ ನೆರವಿನಿಂದ ಆಂಗ್ಲರು 31 ರನ್​ಗಳ ಗೆಲುವು ಸಾಧಿಸಿ ಸೆಮೀಸ್ ಹಾದಿಯನ್ನು ಜೀವಂತವಾಗಿರಿಸಿದೆ. ಅತಿಥೇಯ ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿದ್ದು ಆರಂಭಿಕರ ಜೊತೆಯಾಟ ಎಂದರೆ ತಪ್ಪಾಗಲಾರದು.

ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆರಂಭಿಕರಾದ ಜೇಸನ್ ರಾಯ್ ಮತ್ತು ಬೇರ್​ಸ್ಟೊ ಅದ್ಭುತ ಬ್ಯಾಟಿಂಗ್ ಮಾಡಿದ್ದರು. ಭಾರತೀಯ ಬೌಲರುಗಳನ್ನು ಕಾಡಿದ ಈ ಜೋಡಿ ಮೊದಲ ವಿಕೆಟ್​ಗೆ 160 ರನ್​ಗಳ ಜೊತೆಯಾಟ ಆಡಿದ್ದರು. ಆದರೆ ಇಂತಹದೊಂದು ಅಮೋಘ ಪಾರ್ಟನರ್​ಶಿಪ್​ ಮೂಡಿ ಬರಲು ಟೀಂ ಇಂಡಿಯಾದ ಕೊಡುಗೆ ಕೂಡ ಇದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.

11ನೇ ಓವರ್​​ನಲ್ಲೇ ಪೆವಿಲಿಯನ್​ ಸೇರಬೇಕಿದ್ದ ಜೇಸನ್ ರಾಯ್​ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೀಡಿದ ಜೀವದಾನ ಮುಳುವಾಯಿತು. ಹಾರ್ದಿಕ್ ಪಾಂಡ್ಯ ಎಸೆದ ಚೆಂಡು ಜೇಸನ್ ರಾಯ್ ಗ್ಲೌವ್ಸ್​ ತಗುಲಿ ವಿಕೆಟ್ ಕೀಪರ್​ ಮಹೇಂದ್ರ ಸಿಂಗ್ ಧೋನಿಯ ಕೈ ಸೇರಿತ್ತು. ಅಂಪೈರ್ ಮನವಿಯಲ್ಲಿ ನಾಟೌಟ್ ಎಂದು ತೀರ್ಪಿಟ್ಟಿದ್ದರು. ಈ ವೇಳೆ ಕೊಹ್ಲಿ ಮತ್ತು ಹಾರ್ದಿಕ್ ಡಿಆರ್‌ಎಸ್‌ ತೆಗೆದುಕೊಳ್ಳಲು ಉತ್ಸುಕರಾಗಿದ್ದರು. ಆದರೆ ಧೋನಿ ನಿರುತ್ಸಾಹ ತೋರಿದ್ದರು. ಇದೇ ವೇಳೆ ಮಾಜಿ ನಾಯಕ ಡಿಆರ್​ಎಸ್ ಮೊರೆ ಹೋಗದಂತೆ ಭಾರತ ತಂಡದ ನಾಯಕನಿಗೆ ತಿಳಿಸಿದ್ದರು. 

ಆದರೆ  ರೀಪ್ಲೇನಲ್ಲಿ ಅದು ಅಲ್ಟ್ರಾ ಎಡ್ಜ್​ನಲ್ಲಿ ಕ್ಲಿಯರ್​ ಆಗಿ ಔಟ್​ ಆಗಿರುವುದು ಕಾಣಿಸಿತ್ತು. ಡಿಆರ್​ಎಸ್​ ಅಂದರೆ ಧೋನಿ ರಿವ್ಯೂ ಸಿಸ್ಟಂ ಎಂಬ ಅಭಿಪ್ರಾಯ ಈ ಬಾರಿ ತಪ್ಪಾಗಿತ್ತು. ಟೀಂ ಇಂಡಿಯಾವೇ ನೀಡಿದ ಜೀವದಾನದಿಂದ ಜೇಸನ್ ರಾಯ್ ಭರ್ಜರಿ 66 ರನ್​ಗಳನ್ನು ಸಿಡಿಸಿ ಇಂಗ್ಲೆಂಡ್​ಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು.

ಈ ಹಿಂದೆ ಅನೇಕ ಬಾರಿ ಧೋನಿಯು ಡಿಆರ್​ಎಸ್​ ಮನವಿಯನ್ನು ನಿಖರವಾಗಿ ಮಾಡಿದ್ದರೂ, ಈ ಬಾರಿ ವಿಶ್ವಕಪ್​ನಲ್ಲಿ ಮಾಜಿ ನಾಯಕನ ಲೆಕ್ಕಾಚಾರಗಳು ತಲೆಕೆಳಗಾಗುತ್ತಿದೆ. ಇದರ ಬಗ್ಗೆ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಡಿಆರ್​ಎಸ್ ಅವಕಾಶವಿದ್ದರೂ ಬಳಸಿಕೊಳ್ಳದೆ ಟೀಂ ಇಂಡಿಯಾ ಮಾಡಿದ ಸಣ್ಣದೊಂದು ಎಡವಟ್ಟು ಭಾರತ ತಂಡದ ಸೋಲಿಗೆ ಮತ್ತೊಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
First published:July 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ