ಟಿ20 ವಿಶ್ವಕಪ್ನಲ್ಲಿ (T20 World Cup) ಭಾರತ ಮತ್ತು ಪಾಕಿಸ್ತಾನ (IND vs Pakistan) ನಡುವಿನ ಪಂದ್ಯಕ್ಕೆ ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಪಂದ್ಯದ ಎಲ್ಲಾ ಟಿಕೆಟ್ಗಳೂ ಈಗಾಗಲೇ ಸೋಲ್ಡ್ ಔಟ್ ಆಗಿವೆ. ಈ ಪಂದ್ಯದ ಕುತೂಹಲ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಈ ನಡುವೆ ಈ ಪಂದ್ಯದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿರುವ ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ (Ajit Agarkar), "ಭಾರತದ ಪ್ರಸ್ತುತ ಗೆಲುವಿನ ಅಂಕಿ-ಅಂಶ ಮತ್ತು ತಂಡದ ಫಾರ್ಮ್ ಅನ್ನು ಗಮನಿಸಿದರೆ ಪಾಕಿಸ್ತಾನ (Team Pakistan) ತಂಡ ಭಾರತಕ್ಕೆ (Team India) ತಕ್ಕ ಸವಾಲನ್ನು ಹಾಕುತ್ತದೆ ಎಂದು ನಾನು ಭಾವಿಸುವುದಿಲ್ಲ. ಈ ಪಂದ್ಯದಲ್ಲಿ ಭಾರತ ಸುಲಭಕ್ಕೆ ಗೆಲುವು ಸಾಧಿಸಲಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ (Star Spotrs) ವಾಹಿನಿ ನಡೆಸಿಕೊಡುವ "ಕ್ಲಾಸ್ ಆಫ್ 2007" ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ಅಜಿತ್ ಅಗರ್ಕರ್, "ಭಾರತ ಮತ್ತು ಪಾಕಿಸ್ತಾನದ ನಡುವಿ ಪಂದ್ಯದಲ್ಲಿ ಯಾವಾಗಲೂ ಕುತೂಹಲ ಹೆಚ್ಚಿರುತ್ತದೆ. ಯಾವಾಗಲೂ ಭಾರತಕ್ಕಿಂತ ಪಾಕ್ ತಂಡದ ಬಲ ಒಂದು ಕೈ ಹೆಚ್ಚೇ ಇರುತ್ತದೆ. ಆದರೆ, ಈ ವರ್ಷ ಪಾಕಿಸ್ತಾನದ ತಂಡ ಆ ಮಟ್ಟಿಗೆ ಬಲಿಷ್ಠವಾಗಿದೆ ಎಂದು ನನಗನಿಸುವುದಿಲ್ಲ. ಭಾರತಕ್ಕೆ ತಕ್ಕ ಸವಾಲನ್ನು ಪಾಕಿಸ್ತಾನ ನೀಡುವ ಭರವಸೆ ಇಲ್ಲ. ಹೀಗಾಗಿ ಭಾರತ ಈ ಪಂದ್ಯದಲ್ಲಿ ಸುಲಭ ಜಯವನ್ನು ದಾಖಲಿಸಲಿದೆ. ಆದರೂ, ಕ್ರಿಕೆಟ್ ಆಟದಲ್ಲಿ ಯಾರನ್ನೂ ಹಗುರವಾಗಿ ಪರಿಗಣಿಸುವುದು ಸಾಧ್ಯವಿಲ್ಲ" ಎಂದು ಅವರು ತಿಳಿಸಿದ್ದಾರೆ.
2007 ಟಿ20 ವಿಶ್ವಕಪ್ ನೆನಪು;
2007ರ ಟಿ-20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡವನ್ನು 5 ರನ್ಗಳಿಂದ ಸೋಲಿಸಿದ್ದ ಬಗ್ಗೆಯೂ ಮಾತನಾಡಿರುವ ಅಜಿತ್ ಅಗರ್ಕರ್, "ಇಡೀ ಟೂರ್ನಮೆಂಟ್ ನಮಗೆ ಕನಸಿನ ಪ್ರವಾಸವಾಗಿತ್ತು. ತಂಡದಲ್ಲಿದ್ದ ಯುವಕರು ಇಂತಹ ಸಾಧನೆಯನ್ನು ಸಾಧಿಸಬಹುದೆಂದು ನಾವು ಭಾವಿಸಿರಲಿಲ್ಲ, ಅದೂ ಪಾಕಿಸ್ತಾನದ ವಿರುದ್ಧ. ಭಾರತ-ಪಾಕಿಸ್ತಾನ ಪೈಪೋಟಿ ಯಾವಾಗಲೂ ಭಾವನೆಗಳಿಗೆ ಸಂಬಂಧಪಟ್ಟಿರುತ್ತದೆ. ಈ ಪಂದ್ಯದಲ್ಲಿ ಭಾರತ ಗೆದ್ದದ್ದು ಎಂದಿಗೂ ಮರೆಯಲಾದ ಅಚ್ಚಳಿಯದ ಘಟನೆ" ಎಂದು ಅಗರ್ಕರ್ ಅಭಿಪ್ರಾಯಪಟ್ಟರು.
ಬೌಲ್ ಔಟ್ ಪಂದ್ಯದ ನೆನೆದ ಇರ್ಫಾನ್ ಪಠಾಣ್:
ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮದಲ್ಲಿ ಡರ್ಬನ್ ಅಂಗಳದಲ್ಲಿ ಪಾಕ್ ವಿರುದ್ಧ ನಡೆದ ಬೌಲ್ ಔಟ್ ಪ್ರಸಂಗದ ಬಗ್ಗೆ ನೆನಪಿಸಿಕೊಂಡ ಮಾಜಿ ಆಟಗಾರ ಇರ್ಫಾನ್ ಪಠಾಣ್, "ಪಾಕ್ ಎದುರಿನ ಬೌಲ್ ಔಟ್ ಪಂದ್ಯ ಭಾರತದ ಪಾಲಿಗೆ ಸ್ಮರಣೀಯವಾಗಿದೆ. ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಬಹುತೇಕ ಹಿರಿಯ ಆಟಗಾರರು ಟಿ20 ವಿಶ್ವಕಪ್ನಿಂದ ಹೊರ ನಡೆದಿದ್ದರು.ಹೀಗಾಗಿ ಟೀಮ್ ಇಂಡಿಯಾ ಸಾಕಷ್ಟು ಯುವ ಮತ್ತು ಅನನುಭವಿ ತಂಡದೊಂದಿಗೆ ಪಂದ್ಯಾವಳಿಗೆ ಪ್ರವೇಶಿಸಿತ್ತು.
ಇದನ್ನೂ ಓದಿ: T20 World Cup 2021| ಟಿ20 ವಿಶ್ವಕಪ್ಗೆ ಇಂದಿನಿಂದ ಸಿಗಲಿದೆ ಅದ್ದೂರಿ ಚಾಲನೆ; ಯಾರು ಕಪ್ ಗೆಲ್ಲುವ ಫೇವರಿಟ್?
ನಾನು ಅಲ್ಪಾವಧಿಗೆ ಮಿಡ್ಲ್ಸೆಕ್ಸ್ ತಂಡಕ್ಕಾಗಿ ಆಡಿದ್ದರಿಂದ ಈ ಹೊಸ ರೂಪದ ಕ್ರಿಕೆಟ್ನಲ್ಲಿ ನನಗೆ ಇನ್ನೂ ಹೆಚ್ಚಿನ ಅನುಭವವಿದೆ ಎಂದು ನಾನು ಭಾವಿಸಿದ್ದೆ. ಆದರೆ, ಬೌಲ್ ಔಟ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ನಂತರ ನಾವು ಒಂದು ಘಟಕವಾಗಿ ಒಂದು ಪರಿಪೂರ್ಣ ತಂಡವಾಗಿ ಮಾರ್ಪಟ್ಟಿದ್ದೆವು. ಇದು ಮುಂದೆ ವಿಶ್ವಕಪ್ ಫೈನಲ್ ಗೆಲ್ಲಲೂ ಸಹ ಸಹಕಾರಿಯಾಗಿತ್ತು. ಹೀಗಾಗಿ ಬಹುಶಃ ಇಡೀ ಪಂದ್ಯಾವಳಿಯಲ್ಲಿ ನನ್ನ ಅತ್ಯಂತ ಮೆಚ್ಚಿನ ಪಂದ್ಯ ಪಾಕ್ ವಿರುದ್ಧದ ಬೌಲ್ ಔಟ್ ಪಂದ್ಯವಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: T20 World Cup- ವಿಶ್ವಕಪ್ ತಂಡದಲ್ಲಿ ಚಾಹರ್, ಭುವಿ, ಅಶ್ವಿನ್ ಸೇರ್ಪಡೆಗೆ ಕೊಹ್ಲಿ ಕೊಟ್ಟ ಕಾರಣಗಳಿವು
ಈ ಕಾರ್ಯಕ್ರಮದಲ್ಲಿ ಇರ್ಫಾನ್ ಪಠಾಣ್, ಅಜಿತ್ ಅಗರ್ಕರ್ ಜೊತೆಗೆ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ಆರ್ ಪಿ ಸಿಂಗ್, ದಿನೇಶ್ ಕಾರ್ತಿಕ್ ಮತ್ತು ಎಸ್. ಶ್ರೀಶಾಂತ್ ಸಹ ಭಾಗವಹಿಸಿದ್ದರು. "ಕ್ಲಾಸ್ ಆಫ್ 2007" ಕಾರ್ಯಕ್ರಮವನ್ನು ಅಕ್ಟೋಬರ್ 18 ರಂದು ಮಧ್ಯಾಹ್ನ 1 ಗಂಟೆಗೆ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ವಾಹಿನಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ