ಕೊಹ್ಲಿಯನ್ನು ಕೆಣಕುವುದು ಮಲಗಿರುವ ಕರಡಿಯನ್ನು ಕೆಣಕಿದ ಹಾಗೆ; ಹೀಗೆ ಹೇಳಿದ್ದು ಯಾರು ಗೊತ್ತಾ?

Virat Kohli: ವಿರಾಟ್‌ ಕೊಹ್ಲಿಯನ್ನು ಕೆಣಕುವೂದೂ ಒಂದೇ ಮಲಗಿರುವ ಕರಡಿಯನ್ನು ಚುಚ್ಚಿ ಎಬ್ಬಿಸುವುದೂ ಒಂದೇ. ಇದರಿಂದ ಟೀಂ ಇಂಡಿಯಾ ಕ್ಯಾಪ್ಟನ್‌ ಮತ್ತಷ್ಟು ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುವ ಸಾಧ್ಯತೆ ಇದೆ ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ

ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ

 • Share this:
  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೆಣಕಿದರೆ ಅದರ ಪರಿಣಾಮ ಯಾವರೀತಿ ಇರುತ್ತದೆ ಎಂಬುದನ್ನು ಈಗಾಗಲೇ ನೋಡಿದ್ದೇವೆ. ಹಾಗಿದ್ದರೂ ಕೆಲ ಆಟಗಾರರು ಬೇಕಂತಲೆ ಕೊಹ್ಲಿಯನ್ನು ಕೆಣಕಿ ಪಚೀತಿಗೆ ಸಿಲುಕಿಕೊಳ್ಳುತ್ತಾರೆ. ಇಂತಹ ಆಟಗಾರರಿಗೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್​ಮನ್​ ಡೇವಿಡ್ ವಾರ್ನರ್ ಎಚ್ಚರಿಕೆ ರವಾನಿಸಿದ್ದಾರೆ. ಪ್ರಮುಖವಾಗಿ ಆಸ್ಟ್ರೇಲಿಯಾ ಆಟಗಾರರು ಯಾವುದೇ ಕಾರಣಕ್ಕೂ ವಿರಾಟ್‌ ಕೊಹ್ಲಿ ಅವರನ್ನು ಸ್ಲಿಡ್ಜಿಂಗ್‌ ಮೂಲಕ ಕೆಣಕದಂತೆ ವಾರ್ನರ್‌ ಹೇಳಿದ್ದಾರೆ.

  ಭಾರತ ತಂಡ ಇದೇ ವರ್ಷದ ಅಂತ್ಯಕ್ಕೆ ಕಾಂಗರೂಗಳ ನಾಡಿಗೆ ಪ್ರವಾಸ ಬೆಳೆಸಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್​ ಸರಣಿ ಸಲುವಾಗಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಪಡೆ ಕಣಕ್ಕಿಳಿಯಲಿದೆ.

  ಕ್ರಿಕೆಟ್ ದಕ್ಷಿಣ ಆಫ್ರಿಕಾದ ಏಳು ಹಾಗೂ ಪಾಕ್​ನ ಮೂವರು ಆಟಗಾರರಿಗೆ ಕೊರೋನಾ ಪಾಸಿಟಿವ್

  ಈ ಸಂದರ್ಭ ವಿರಾಟ್‌ ಕೊಹ್ಲಿಯನ್ನು ಕೆಣಕುವೂದೂ ಒಂದೇ ಮಲಗಿರುವ ಕರಡಿಯನ್ನು ಚುಚ್ಚಿ ಎಬ್ಬಿಸುವುದೂ ಒಂದೇ. ಇದರಿಂದ ಟೀಂ ಇಂಡಿಯಾ ಕ್ಯಾಪ್ಟನ್‌ ಮತ್ತಷ್ಟು ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುವ ಸಾಧ್ಯತೆ ಇದೆ ಎಂದು ತಮ್ಮ ತಂಡದ ಸಹ ಆಟಗಾರರಿಗೆ ವಾರ್ನರ್‌‌ ಎಚ್ಚರಿಕೆ ನೀಡಿದ್ದಾರೆ.

  ಇನ್ನೂ ಕೊಹ್ಲಿ-ಸ್ಮಿತ್ ಇವರಲ್ಲಿ ಯಾರು ಶ್ರೇಷ್ಠ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕೊಹ್ಲಿ-ಸ್ಮಿತ್​ಗೆ ಸಂಬಂಧಿಸಿದ್ದು ಅನ್ನೋದಕ್ಕಿಂತ ಇದು ಭಾರತ-ಆಸ್ಟ್ರೇಲಿಯಾಕ್ಕೆ ಸಂಬಂಧಿಸಿದ್ದು ಎಂದು ಪ್ರತಿಕ್ರಿಯಿಸಿದ್ದಾರೆ.

  ಕೊಹ್ಲಿ ಮತ್ತು ಸ್ಮಿತ್ ಇಬ್ಬರೂ ಎಲ್ಲಾ ಮೂರು ಮಾದರಿಯಲ್ಲೂ ಬೆಸ್ಟ್ ಬ್ಯಾಟ್ಸ್​ಮನ್​ಗಳು ಎಂದಿದ್ದಾರೆ. 'ಕೊಹ್ಲಿಯೊಂದಿಗೆ ಸ್ಮಿತ್ ಹೋಲಿಸಿದರೆ, ಇಬ್ಬರೂ ಮೂರೂ ಮಾದರಿಗಳಲ್ಲೂ ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್​ಗಳು. ಜನರು ನಿರೀಕ್ಷಿಸಿದರೆ ಅವರ ನಡುವೆ ದೊಡ್ಡ ಯುದ್ಧವಾಗಲಿದೆ,' ಎಂದು ವಾರ್ನರ್ ಹೇಳಿದ್ದಾರೆ.

  ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯನ್ನು ಆಡಲಿದೆ. ಡಿಸೆಂಬರ್ 3 ರಂದು ಬ್ರಿಸ್ಬೇನ್​ನಲ್ಲಿ ಮೊದಲ ಟೆಸ್ಟ್​ ಆರಂಭವಾದರೆ 2021 ಜನವರಿ 7ಕ್ಕೆ ಆಸ್ಟ್ರೇಲಿಯಾ ಪ್ರವಾಸವನ್ನು ಭಾರತ ಅಂತ್ಯಗೊಳಿಸಲಿದೆ.

  13ನೇ ವಯಸ್ಸಿನಲ್ಲೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಖ್ಯಾತ ಫುಟ್​ಬಾಲ್​ ಆಟಗಾರ!  ಡಿ. 3 ರಿಂದ 7ರ ವರೆಗೆ ಬ್ರಿಸ್ಬೇನ್ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್​ ನಡೆದರೆ, ಡಿ. 11 ರಿಂದ 15ರ ತನಕ ಅಡಿಲೇಡ್​ನಲ್ಲಿ ಎರಡನೇ ಪಂದ್ಯ ಆಯೋಜಿಸಲಾಗಿದೆ. ವಿಶೇಷ ಎಂದರೆ ಎರಡನೇ ಟೆಸ್ಟ್ ಡೇ ನೈಟ್​ ಪಂದ್ಯವಾಗಲಿದ್ದು, ಪಿಂಕ್​ ಬಾಲ್​ನಲ್ಲಿ ರೋಚಕ ಕದನ ನಿರೀಕ್ಷಿಸಲಾಗಿದೆ. ಇನ್ನೂ ಡಿಸೆಂಬರ್ 26 ರಿಂದ ಮೆಲ್ಬೋರ್ನ್​ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್​​ ಆರಂಭವಾದರೆ, ಅಂತಿಮ ನಾಲ್ಕನೇ ಟೆಸ್ಟ್​ ಜನವರಿ 3 ರಿಂದ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಆಯೋಜಿಸಲಾಗಿದೆ.
  First published: