ಟೆಸ್ಟ್​ ಕ್ರಿಕೆಟ್​ನಲ್ಲಿ ಇದೇ ಮೊದಲ ಬಾರಿಗೆ ಗೆದ್ದು ಬೀಗಿದ ಅಫ್ಘಾನಿಸ್ತಾನ

147 ರನ್​ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಇಶಾತುಲ್ಲ ಜನತ್ ಅವರ 65* ಹಾಗೂ ರೆಹಮತ್ ಶಾರ 76* ರನ್​ಗಳ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 149 ರನ್ ಬಾರಿಸಿ ಗೆಲುವು ಸಾಧಿಸಿದೆ.

ಸಂಭ್ರಮಿಸುತ್ತಿರುವ ಅಫ್ಘಾನಿಸ್ತಾನ ತಂಡದ ಆಟಗಾರರು

ಸಂಭ್ರಮಿಸುತ್ತಿರುವ ಅಫ್ಘಾನಿಸ್ತಾನ ತಂಡದ ಆಟಗಾರರು

 • News18
 • Last Updated :
 • Share this:
  ಡೆಹ್ರಾಡೂನ್ (ಮಾ. 18): ಐರ್ಲೆಂಡ್ ತಂಡದ ವಿರುದ್ಧ 7 ವಿಕೆಟ್​ಗಳ ವಿಕೆಟ್​​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಅಫ್ಘಾನಿಸ್ತಾನ ತಂಡ ಟೆಸ್ಟ್​​ ಕ್ರಿಕೆಟ್​ನಲ್ಲಿ ತನ್ನ ಮೊದಲ ಗೆಲುವು ದಾಖಲಿಸಿದೆ.

  ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 172 ರನ್​ಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಅಫ್ಘಾನಿಸ್ತಾನ ತಂಡ ರೆಹಮತ್ ಶಾ ಅವರ 98, ನಾಯಕ ಅಶ್ಗರ್ ಅಫ್ಗರ್ ಅವರ 67 ಹಾಗೂ ಹಶ್ಮತುಲ್ಲಾ ಶಾಹಿದಿ ಅವರ 61 ರನ್​​ಗಳ ನೆರವಿನಿಂದ 314 ರನ್ ಕಲೆಹಾಕಿತು.

  142 ರನ್​​ಗಳ ಹಿನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಐರ್ಲೆಂಡ್ ಮತ್ತದೆ ಕಳಪೆ ಆಟ ಪ್ರದರ್ಶಿಸಿತು. ತಂಡದ ಪರ ಆ್ಯಂಡ್ರೋ ಬಲ್ಬಿರ್ನ್​​​​ 82 ಹಾಗೂ ಕೆವಿನ್ ಓಬ್ರಿಯನ್ 56 ರನ್​​​ ಗಳಿಸಿದ್ದು, ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​​ಗಳು ಒಂದಿಷ್ಟು ರನ್ ಕಲೆಹಾಕಿ ಪೆವಿಲಿಯನ್​​ನತ್ತ ಹೆಜ್ಜೆ ಹಾಕಿದರು. ಪರಿಣಾಮ 288 ರನ್​ಗೆ ಆಲೌಟ್ ಆಗಿ ಅಫ್ಘನ್​​ಗೆ ಗೆಲ್ಲಲು 147 ರನ್​ಗಳ ಟಾರ್ಗೆಟ್ ನೀಡಿತು. 2ನೇ ಇನ್ನಿಂಗ್ಸ್​ನಲ್ಲಿ ಅಫ್ಘನ್​​ ಪರ ರಶೀದ್ ಖಾನ್ 85 ರನ್​ಗೆ 5 ವಿಕೆಟ್ ಕಿತ್ತು ಮಿಂಚಿದರು.

  ಇದನ್ನೂ ಓದಿ: IPL 2019: ಬೆಂಗಳೂರಿಗಿದೆ ತ್ರಿಮೂರ್ತಿಗಳ ಶಕ್ತಿ; ಚೆನ್ನೈ ಪಡೆಯಲ್ಲಿ ಶುರುವಾಗಿದೆ ನಡುಕ

     147 ರನ್​ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಇಶಾತುಲ್ಲ ಜನತ್ ಅವರ 65* ಹಾಗೂ ರೆಹಮತ್ ಶಾರ 76* ರನ್​ಗಳ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 149 ರನ್ ಬಾರಿಸಿ ಗೆಲುವು ಸಾಧಿಸಿತು.

  ಈ ಮೂಲಕ ಅಫ್ಘಾನಿಸ್ತಾನ ತಂಡ ಒಂದೇ ಟೆಸ್ಟ್​ ಪಂದ್ಯವಿದ್ದುದರಿಂದ, ಅದರಲ್ಲೇ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಇದೇ ಮೊದಲ ಬಾರಿಗೆ ಟೆಸ್ಟ್​​ ಕ್ರಿಕೆಟ್​​ನಲ್ಲಿ ಗೆದ್ದು ಬೀಗಿದೆ. ಅದ್ಭುತ ಪ್ರದರ್ಶನ ನೀಡಿದ ರೆಹಮತ್ ಶಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

  ಇದನ್ನೂ ಓದಿ: IPL 2019: ಚೆನ್ನೈ ವಿರುದ್ಧದ ಮೊದಲ ಸೆಣೆಸಾಟಕ್ಕೆ ಆರ್​ಸಿಬಿ ಬಲಿಷ್ಠ ತಂಡ ಇಲ್ಲಿದೆ!

  ಟೆಸ್ಟ್​ ಕ್ರಿಕೆಟ್​ಗೂ ಮೊದಲು ನಡೆದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಅಫ್ಘಾನಿಸ್ತಾನ್ ತಂಡ ಮೂರನ್ನು ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿತ್ತು. ಅಂತೆಯೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾಗಿ ಉಭಯ ತಂಡಗಳು 2-2ರ ಸಮಬಲ ಸಾಧಿಸಿದ್ದವು.

  First published: