• Home
  • »
  • News
  • »
  • sports
  • »
  • MS Dhoni: ಧೋನಿಗೆ ಶಾಲೆಯಲ್ಲಿ ಈ ಸಬ್ಜೆಕ್ಟ್ ತುಂಬಾ ಇಷ್ಟವಾಗಿತ್ತಂತೆ, ಬಾಲಕಿಯ ಪ್ರಶ್ನೆಗೆ ಏನಂದ್ರು ಕ್ಯಾಪ್ಟನ್ ಕೂಲ್

MS Dhoni: ಧೋನಿಗೆ ಶಾಲೆಯಲ್ಲಿ ಈ ಸಬ್ಜೆಕ್ಟ್ ತುಂಬಾ ಇಷ್ಟವಾಗಿತ್ತಂತೆ, ಬಾಲಕಿಯ ಪ್ರಶ್ನೆಗೆ ಏನಂದ್ರು ಕ್ಯಾಪ್ಟನ್ ಕೂಲ್

ಎಂ. ಎಸ್. ಧೋನಿ

ಎಂ. ಎಸ್. ಧೋನಿ

ಕ್ಯಾಪ್ಟನ್ ಕೂಲ್ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ನಂತರವೂ ಅಭಿಮಾನಿಗಳ ನೆಚ್ಚಿನ ಆಟಗಾರರಾಗಿ ಉಳಿದಿದ್ದಾರೆ. ಇತ್ತೀಚೆಗೆ ಅಪ್ಲೋಡ್ ಮಾಡಲಾದ ವಿಡಿಯೋದಲ್ಲಿ, ಧೋನಿ ಅವರು ತಮ್ಮ ಕ್ರಿಕೆಟ್ ಆಟದಲ್ಲಿ ತಮ್ಮ ನೆಚ್ಚಿನ ರೋಲ್ ಮಾಡಲ್ ಅವರ ಬಗ್ಗೆ ಮಾತನಾಡುತ್ತಿದ್ದರು, ನಂತರ ಅಲ್ಲೇ ಕುಳಿತಿದ್ದ ಶಾಲೆಗೆ ಹೋಗುವ ಚಿಕ್ಕ ಹುಡುಗಿ ಎದ್ದು ನಿಂತು ಧೋನಿ ಅವರಿಗೆ ಶಾಲೆಯಲ್ಲಿ ಅವರ ನೆಚ್ಚಿನ ವಿಷಯ ಯಾವುದಾಗಿತ್ತು ಅಂತ ಕೇಳಿದ್ದಾರೆ.

ಮುಂದೆ ಓದಿ ...
  • Share this:

ಕ್ಯಾಪ್ಟನ್ ಕೂಲ್ ಅಂತಾನೆ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್ ತಂಡದ (Indian Cricket Team) ಮಾಜಿ ನಾಯಕ ಎಂ. ಎಸ್. ಧೋನಿ (MS Dhoni) ಅವರ ಆಟಕ್ಕೆ ಮತ್ತು ಶಾಂತ ಸ್ವಭಾವಕ್ಕೆ ಮನಸೋಲದವರು ಯಾರಿದ್ದಾರೆ ಹೇಳಿ? ಶಾಲೆಗೆ ಹೋಗುವ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ಎಲ್ಲರಿಗೂ ಧೋನಿ ಎಂದರೆ ಪಂಚಪ್ರಾಣ. ಕ್ರಿಕೆಟ್ ಆಟದ ಮೈದಾನದಲ್ಲಿ ಇವರು ಆಡುವ ಆಟದಿಂದ ಹಿಡಿದು ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಅಭಿಮಾನಿಗಳು (Fans) ಕೇಳುವ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸುವ ಸ್ಟೈಲ್ ವರೆಗೆ ಎಲ್ಲವನ್ನೂ ಇವರ ಅಭಿಮಾನಿಗಳು ಇಷ್ಟ ಪಡುತ್ತಾರೆ.


ಅಭಿಮಾನಿಗಳ ಫೇವರಿಟ್ ಎಂ. ಎಸ್. ಧೋನಿ
ಕ್ರಿಕೆಟ್ ಆಟದ ಮೈದಾನದಲ್ಲಿ ಧೋನಿ ಎಷ್ಟು ಸಮಾಧಾನವಾಗಿ ಆಟವನ್ನು ಆಡುತ್ತಾರೆ ಮತ್ತು ಅಷ್ಟೇ ಚಾಣಾಕ್ಷತನದಿಂದ ಎದುರಾಳಿ ತಂಡದವರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗುತ್ತಾರೋ, ಕ್ರಿಕೆಟ್ ಆಟದ ಮೈದಾನದ ಹೊರಗೂ ಸಹ ಜನರು ಮತ್ತು ಅವರ ಅಭಿಮಾನಿಗಳು ಕೇಳುವ ಅನೇಕ ಗಂಭೀರ ಪ್ರಶ್ನೆಗಳಿಗೂ ಸಹ ಅಷ್ಟೇ ತಾಳ್ಮೆಯಿಂದ ಉತ್ತರ ಕೊಟ್ಟು ಅಲ್ಲಿರುವ ಜನರನ್ನು ನಗೆಗಡಲಲ್ಲಿ ತೇಲಿಸುವ ಬುದ್ದಿವಂತಿಕೆ ಧೋನಿಯವರಲ್ಲಿದೆ.


ಕೇವಲ ಗಂಭೀರವಾದ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರ ನೀಡುತ್ತಾರೆ ಅಂತ ನೀವು ತಿಳಿದುಕೊಳ್ಳಬೇಡಿ, ಅವರು ಅಷ್ಟೇ ಹಾಸ್ಯಭರಿತ ಉತ್ತರಗಳನ್ನು ನೀಡುವಲ್ಲಿ ಸಹ ಹೆಸರುವಾಸಿಯಾಗಿದ್ದಾರೆ. ಅನೇಕ ಟಿವಿ ಸಂದರ್ಶನಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಜನರು ಕೇಳಿದ ಪ್ರಶ್ನೆಗಳಿಗೆ ಹಾಸ್ಯವಾಗಿ ಉತ್ತರಿಸಿ ಜನರನ್ನು ನಗಿಸಿರುವ ಅನೇಕ ಉದಾಹರಣೆಗಳು ಇವೆ.


ಕ್ಯಾಪ್ಟನ್ ಕೂಲ್ ಗೆ ಚಿಕ್ಕ ಹುಡುಗಿ ಕೇಳಿದ ಪ್ರಶ್ನೆ ಏನು?
ಈ ಕ್ಯಾಪ್ಟನ್ ಕೂಲ್ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ನಂತರವೂ ಅಭಿಮಾನಿಗಳ ನೆಚ್ಚಿನ ಆಟಗಾರರಾಗಿ ಉಳಿದಿದ್ದಾರೆ. ಇತ್ತೀಚೆಗೆ ಅಪ್ಲೋಡ್ ಮಾಡಲಾದ ವಿಡಿಯೋದಲ್ಲಿ, ಧೋನಿ ಅವರು ತಮ್ಮ ಕ್ರಿಕೆಟ್ ಆಟದಲ್ಲಿ ತಮ್ಮ ನೆಚ್ಚಿನ ರೋಲ್ ಮಾಡಲ್ ಅವರ ಬಗ್ಗೆ ಮಾತನಾಡುತ್ತಿದ್ದರು, ನಂತರ ಅಲ್ಲೇ ಕುಳಿತಿದ್ದ ಶಾಲೆಗೆ ಹೋಗುವ ಚಿಕ್ಕ ಹುಡುಗಿ ಎದ್ದು ನಿಂತು ಧೋನಿ ಅವರಿಗೆ ಶಾಲೆಯಲ್ಲಿ ಅವರ ನೆಚ್ಚಿನ ವಿಷಯ ಯಾವುದಾಗಿತ್ತು ಅಂತ ಕೇಳಿಯೇ ಬಿಟ್ಟರು.


ಇದನ್ನೂ ಓದಿ:Harleen Deol: ಏನು ವೈನಾಗ್ ಕಾಣಸ್ತಾಳೆ ರನ್ನನ್ನೋ! ಯಾವ ನಟಿಗೆ ಕಡಿಮೆ ಈ ಕ್ರಿಕೆಟ್ ಆಟಗಾರ್ತಿ


ಈ ಪ್ರಶ್ನೆಯಿಂದ ಸ್ವಲ್ಪ ಸ್ಟಂಪ್ ಆದ ಧೋನಿ ಆನಂತರ ನಗುತ್ತಾ "ಕ್ರೀಡೆಯು ಒಂದು ವಿಷಯವಾಗಿ ಅರ್ಹವಾಗಿದೆಯೇ" ಎಂದು ಕೇಳಿದರು, ಇದಕ್ಕೆ ಅಲ್ಲಿ ನೆರೆದಿದ್ದಂತಹ ಪ್ರೇಕ್ಷಕರು ಜೋರಾಗಿ ನಕ್ಕರು.


ಎಂಎಸ್‌ಡಿ ಅವರ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. "ತಲೈವಾ ಅವರು ಶಾಲೆಯಲ್ಲಿದ್ದಾಗ ಅವರ ನೆಚ್ಚಿನ ಪಿರಿಯಡ್ ಸಹ ಪಿಟಿ ಆಗಿತ್ತು" ಸಿಎಸ್‌ಕೆ ತನ್ನ ಪೋಸ್ಟ್ ಗೆ ಶೀರ್ಷಿಕೆಯೊಂದನ್ನು ಬರೆದಿದೆ.


ಕ್ರಿಕೆಟ್ ನಲ್ಲಿ ಧೋನಿಗೆ ರೋಲ್ ಮಾಡಲ್ ಸಚಿನ್ ಅಂತೆ!
ಈ ಮೊದಲು ವಿಡಿಯೋದಲ್ಲಿ, ಧೋನಿ ತಮ್ಮ ನೆಚ್ಚಿನ ರೋಲ್ ಮಾಡಲ್ ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಮಾತನಾಡುತ್ತಿರುವುದನ್ನು ನಾವು ನೋಡಬಹುದು.
"ಕ್ರಿಕೆಟ್ ಆಟದಲ್ಲಿ ನನಗೆ ರೋಲ್ ಮಾಡೆಲ್ ಆಗಿದ್ದವರು ಯಾರು ಅಂತ ಕೇಳಿದರೆ, ನಾನು ಯಾವಾಗಲೂ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಹೇಳಲು ಇಷ್ಟಪಡುತ್ತೇನೆ" ಅಂತ ಧೋನಿ ಹೇಳಿದ ಮಾತನ್ನು ಕೇಳಿದ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿದರು.


ಇದನ್ನೂ ಓದಿ: Shikhar Dhawan: ಶಿಖರ್ ಧವನ್ ಕೇಳದೆ ಮದುವೆ ಫಿಕ್ಸ್ ಮಾಡಿದ ತಂದೆ, ವಿಡಿಯೋ ವೈರಲ್


"ನಾನು ನಿಮ್ಮಂತೆಯೇ ಇದ್ದೆ, ಆದರೆ ಒಮ್ಮೆ ನಾನು ಟಿವಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಆಟವನ್ನು ನೋಡಿದೆ ಮತ್ತು ನಾನು ಅವರಂತೆ ಆಗಲು ಬಯಸಿದೆ” ಎಂದು ಧೋನಿ ಹೇಳಿದರು. “ಆದರೆ ನಂತರ ನನಗೆ ಅರ್ಥವಾಯಿತು, ನಾನು ಅವರಂತೆ ಆಡಲು ಸಾಧ್ಯವಿಲ್ಲ ಅಂತ. ಆದರೆ ನನ್ನ ಹೃದಯದಲ್ಲಿ ಸದಾ ಅವರಂತೆ ಆಡಬೇಕೆಂಬ ಹಂಬಲವಿತ್ತು. ಆದ್ದರಿಂದಲೇ ನಾನು ಕ್ರಿಕೆಟ್ ಆಡುವಾಗ ಅವರು ನನಗೆ ಆರಾಧ್ಯ ದೈವವಾಗಿದ್ದರು" ಎಂದು ಹೇಳಿದರು.

Published by:Ashwini Prabhu
First published: