ಕೇವಲ 1 ಎಸೆತದಲ್ಲಿ 17 ರನ್ ನೀಡಿದ ಬೌಲರ್ ಬಗ್ಗೆ ನೀವು ಕೇಳಿದ್ದೀರಾ..?; ಇಲ್ಲಿದೆ ಮಾಹಿತಿ

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್​ ಬ್ಯಾಶ್​ ಲೀಗ್ ಟೂರ್ನಿ​ನಲ್ಲಿ ಈ ಘಟನೆ ನಡೆದಿದೆ. ಹಾಬರ್ಟ್​ ಹರಿಕೇನ್ಸ್​ ತಂಡದ ಬೌಲರ್​​ ರಿಲೆ ಮೆರೆಡಿತ್ ತನ್ನ 1 ಎಸೆತದಲ್ಲಿ 17 ರನ್ ನೀಡಿದವರಾಗಿದ್ದಾರೆ.

ಆಸ್ಟ್ರೇಲಿಯಾ ತಂಡದ ಆಟಗಾರರು.

ಆಸ್ಟ್ರೇಲಿಯಾ ತಂಡದ ಆಟಗಾರರು.

  • Share this:
    ಕೊರೋನಾ ವೈರಸ್​ನಿಂದಾಗಿನ ಕ್ರಿಕೆಟ್ ಜಗತ್ತು ಸ್ತಬ್ದಗೊಂಡಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಅರ್ಧದಲ್ಲೇ ಮೊಟಕುಗೊಂಡರೆ, ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಸ್ಥಿತಿ ತೂಗುಯ್ಯಾಲೆಯಲ್ಲಿದೆ. ಲಾಕ್​ಡೌನ್​ನಿಂದಾಗಿ ಕ್ರಿಕೆಟ್ ಆಟಗಾರರೆಲ್ಲ ಮನೆಯಲ್ಲಿಯೇ ಕುಳಿತು ಸಮಯ ಕಳೆಯುತ್ತಿದ್ದಾರೆ.

    Do you know This bowler gave 17 runs in one ball in a cricket match; here is the details
    ರಿಲೆ ಮೆರೆಡಿತ್, ಆಸ್ಟ್ರೇಲಿಯಾ ತಂಡದ ಆಟಗಾರ.


    ಹೀಗಿರುವಾಗ ಈ ಹಿಂದೆ ಕ್ರಿಕೆಟ್​ನಲ್ಲಿ ನಡೆದ ವಿಚಿತ್ರ ಘಟನೆಗಳ ಕುರಿತು ಕೆಲವೊಂದು ಮಾಹಿತಿಯನ್ನು ಮೆಲುಕು ಹಾಕೋಣ. ಕ್ರಿಕೆಟ್​ ಅಂದಮೇಲೆ ಒಂದಲ್ಲಾ ಒಂದು ವಿಚಿತ್ರ ಘಟನೆಗಳು ನಡೆಯುತ್ತಲೆ ಇರುತ್ತದೆ. ಇದೇ ಸಾಲಿಗೆ ಕಳೆದ ವರ್ಷ ಹೊಸ ಸೇರ್ಪಡೆಯಾಗಿದ್ದು ಆಸ್ಟ್ರೇಲಿಯಾ ಬೌಲರ್ ಒಬ್ಬ ತನ್ನ ಒಂದೇ ಎಸೆತದಲ್ಲಿ ಬರೋಬ್ಬರಿ 17 ರನ್ ನೀಡಿರುವುದು. ಹೇಗೆ ಅಂತಿರ ಈ ಸ್ಟೋರಿ ಓದಿ..

    Anil Chaudhary: ಲಾಕ್​ಡೌನ್ ವೇಳೆ ಮರ ಏರಿದ ಅಂಪೈರ್..!; ಕಾರಣ..?

    ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್​ ಬ್ಯಾಶ್​ ಲೀಗ್ ಟೂರ್ನಿ​ನಲ್ಲಿ ಈ ಘಟನೆ ನಡೆದಿದೆ. ಹಾಬರ್ಟ್​ ಹರಿಕೇನ್ಸ್​ ತಂಡದ ಬೌಲರ್​​ ರಿಲೆ ಮೆರೆಡಿತ್ ತನ್ನ 1 ಎಸೆತದಲ್ಲಿ 17 ರನ್ ನೀಡಿದವರಾಗಿದ್ದಾರೆ. ಹಾಬರ್ಟ್​ ತಂಡದ ನೀಡಿದ್ದ 184 ರನ್​ಗಳ ಸವಾಲು ಸ್ವೀಕರಿಸಿದ ಮೆಲ್ಬೋರ್ನ್​​​ ರೆನೆಗೇಡ್ಸ್​​ ತಂಡಕ್ಕೆ ಮೊದಲ ಓವರ್​ನಲ್ಲೇ ಒಟ್ಟು 23 ರನ್ ದಕ್ಕಿತು.

    ಮೊದಲ ಓವರ್​​ನ ಮೆರೆಡಿತ್ ಅವರ ಒಂದು ಹಾಗೂ ಎರಡನೇ ಎಸೆತ ಡಾಟ್ ಬಾಲ್ ಆದರೆ, ಮೂರನೇ ಎಸೆತದಲ್ಲಿ 1 ರನ್ ಬಂತು. 4ನೇ ಎಸೆತ ನೋಬಾಲ್​​​​ ಆಗಿದೆ. ಹೀಗಾಗಿ ಮತ್ತೆ 4ನೇ ಎಸೆತ ಎಸೆದಿದ್ದು​​​ ಬಾಲ್ ವೈಡ್​​ ಜೊತೆಗೆ ಬೌಂಡರಿ ಗೆರೆ ದಾಟಿದೆ. ವೈಡ್ ಆಗಿದ್ದರಿಂದ ನೋ ಬಾಲ್ ಹಾಗೆ ಉಳಿದಿದ್ದು, ಮುಂದಿನ ಎಸೆತದಲ್ಲಿ ಬ್ಯಾಟ್ಸ್​ಮನ್​​​ ಬೌಂಡರಿ ಬಾರಿಸಿದ್ದಾನೆ.

    ಗ್ರಹಚಾರ ಎಂದರೆ ಈ ಎಸೆತವು ನೋ ಬಾಲ್ ಆಗಿದೆ. ಹೀಗಾಗಿ ಮತ್ತೊಂದು ನೋ ಬಾಲ್​ನಲ್ಲಿ ಬ್ಯಾಟ್ಸ್​ಮನ್​ ಚೆಂಡನ್ನು ಮತ್ತೆಮ್ಮೆ ಬೌಂಡರಿಗೆ ಅಟ್ಟಿದ್ದಾನೆ. ಈ ಮೂಲಕ ಬೌಲರ್​ನ ಒಂದು ಎಸೆತ ಮುಗಿವ ಹೊತ್ತಿಗೆ 17 ರನ್ ಮೂಡಿಬಂದಿದೆ.

    ನಿಜಕ್ಕೂ ಬಡವರ ಪಾಲಿಗೆ ದೇವರಾದ ಕ್ರಿಕೆಟ್ ದೇವರು; ಏನು ಮಾಡಿದ್ದಾರೆ ಗೊತ್ತಾ ಸಚಿನ್?

    ಇಲ್ಲಿದೆ ನೋಡಿ ವಿಡಿಯೋ:

     



    ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಹಾಬರ್ಡ್ ತಂಡ 20 ಓವರ್​​ಗೆ 6 ವಿಕೆಟ್ ಕಳೆದುಕೊಂಡು 183 ರನ್ ಬಾರಿಸಿತ್ತು. 184 ರನ್​ಗಳ ಗುರಿ ಬೆನ್ನತ್ತಿದ ಮೆಲ್ಬೋರ್ನ್​​ ತಂಡ 20 ಓವರ್​ಗೆ 8 ವಿಕೆಟ್ ಕಳೆದುಕೊಂಡು 167 ರನ್​​ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಗೊಂಡಿತ್ತು.

    First published: