• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • ಕೊಹ್ಲಿ, ಯುವಿ, ಧೋನಿ ಸೇರಿದಂತೆ ಭಾರತೀಯ ಆಟಗಾರರ ಎಜುಕೇಷನ್ ಬಗ್ಗೆ ನಿಮಗೆ ಗೊತ್ತೆ?; ಇಲ್ಲಿದೆ ವಿವರ

ಕೊಹ್ಲಿ, ಯುವಿ, ಧೋನಿ ಸೇರಿದಂತೆ ಭಾರತೀಯ ಆಟಗಾರರ ಎಜುಕೇಷನ್ ಬಗ್ಗೆ ನಿಮಗೆ ಗೊತ್ತೆ?; ಇಲ್ಲಿದೆ ವಿವರ

Team India

Team India

Cricket Players Education Qualification: ರಾಹುಲ್ ದ್ರಾವಿಡ್ ಅವರಿಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಮಂತ್ರಣ ಬರುವ ಮೊದಲು ಸೆಂಟ್‍ಜೋಸೆಫ್ ಕಾಲೇಜ್ ಆಫ್ ಬ್ಸುಸ್‍ನೆಸ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಎಂಬಿಎ ವಿದ್ಯಾರ್ಥಿ. ಭಾರತ ತಂಡದ ಬಾಗಿಲು ತೆರೆದಾಗ ಅರ್ಧಕ್ಕೆ ಬಿಟ್ಟು ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ ಮಾಡಿದರು.

ಮುಂದೆ ಓದಿ ...
 • Share this:

  ಕ್ರಿಕೆಟ್ ಜಗತ್ತು ಕಂಡ ಬಲಿಷ್ಠ ತಂಡಗಳ ಪೈಕಿ ಭಾರತ ಕೂಡ ಪ್ರಮುಖವಾದುದು. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ಜಹೀರ್ ಖಾನ್, ಯುವರಾಜ್ ಸಿಂಗ್, ರಾಹುಲ್ ದ್ರಾವಿಡ್​ರಂತಹ ದಿಗ್ಗಜರಿಂದ ಬೆಳೆದುಬಂದ ಟೀಂ ಇಂಡಿಯಾ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ನಾಯಕತ್ವದಿಂದ ಮತ್ತಷ್ಟು ಉತ್ತುಂಗಕ್ಕೆ ಏರಿತು.


  ಟೀಂ ಇಂಡಿಯಾ ಆಟಗಾರರು ಸಾಕಷ್ಟು ಅಭಿಮಾನಿಗಳನ್ನು ಪಡೆದು ವಿಶ್ವಕ್ಕೆ ಪರಿಚಯವಾಗಿದ್ದಾರೆ. ಆದರೆ, ಅವರ ಖಾಸಗಿ ವಿಷಯ, ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಕುರಿತ ವಿಶೇಷ ಮಾಹಿತಿ ಇಲ್ಲಿದೆ.


  Sachin Tendulkar: ಕ್ರಿಕೆಟ್ ದೇವರು ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಇಂದಿಗೆ 31 ವರ್ಷ: ಬಿಸಿಸಿಐಯಿಂದ ಸಚಿನ್​ಗೆ ಸ್ಪೆಷಲ್ ಗಿಫ್ಟ್


  ಸಚಿನ್ ತೆಂಡೂಲ್ಕರ್: ತನ್ನ 16ನೇ ವಯಸ್ಸಿಗೆ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್ ಮಾಸ್ಟರ್ ಬ್ಲಾಸ್ಟರ್ ಆಗಿ ಹೊರಹೊಮ್ಮಿದರು. ಸಚಿನ್ ವೃತ್ತಿಪರ ಕ್ರಿಕೆಟ್‍ಗೆ ಪದಾರ್ಪಣೆ ಮಾಡುವ ಮೊದಲು ಶಾರದಾಶ್ರಮ ವಿದ್ಯಾಮಂದಿರದಲ್ಲಿ 12ನೇ ತರಗತಿವರೆಗೆ ಮಾತ್ರ ಓದಿದ್ದಾರೆ.


  ಸೌರವ್ ಗಂಗೂಲಿ: ವಿಶ್ವ ಕ್ರಿಕೆಟ್ ತಂಡ ಶ್ರೇಷ್ಠ ಆಟಗಾರ ಬಂಗಾಲದ ಹುಲಿ ಸೌರವ್ ಗಂಗೂಲಿ. ಇವರು ಪ್ರತಿಷ್ಠಿತ ಸೆಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ನಂತರ ಗೌರವ ಪಿಎಚ್‍ಡಿ (ಡಾಕ್ಟರೇಟ್) ಕೂಡ ನೀಡಲಾಯಿತು. ಸದ್ಯ ದಾದಾ ಬಿಸಿಸಿಐ ಅಧ್ಯಕ್ಷ ಪಟ್ಟದಲ್ಲಿದ್ದಾರೆ.


  ವೀರೇಂದ್ರ ಸೆಹ್ವಾಗ್: ಟೀಂ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಕ್ರಿಕೆಟ್‍ಗೆ ಬರುವ ಮೊದಲು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಮುಗಿಸಿದ್ದರು.


  IPL: ಆರ್​ಸಿಬಿಯಿಂದ ಶಾಕಿಂಗ್ ನಿರ್ಧಾರ: 3 ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಡುವ ಸಾಧ್ಯತೆ


  ವಿ. ವಿ. ಎಸ್ ಲಕ್ಷ್ಮಣ್: ಟೆಸ್ಟ್ ಸ್ಪೆಷಲಿಸ್ಟ್ ವಿ. ವಿ. ಎಸ್ ಲಕ್ಷ್ಮಣ್ ಅತಿ ಹೆಚ್ಚು ಶೈಕ್ಷಣಿಕ ಅರ್ಹತೆ ಹೊಂದಿದ ಕ್ರಿಕೆಟರ್. ಇವರು ಎಂಬಿಬಿಎಸ್ ಪದವೀಧರ.


  ರಾಹುಲ್ ದ್ರಾವಿಡ್: ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸೆಂಟ್‍ಜೋಸೆಫ್ ಶಾಲೆಯಲ್ಲಿ ಶಿಕ್ಷಣ ಪಡೆದವರು. ವಾಣಿಜ್ಯಶಾಸ್ತ್ರ ವಿಷಯದಲ್ಲಿ ಪದವಿ ಪಡೆದವರು. ಭಾರತೀಯ ಕ್ರಿಕೆಟ್ ತಂಡಕ್ಕೆ ಆಮಂತ್ರಣ ಬರುವ ಮೊದಲು ಸೆಂಟ್‍ಜೋಸೆಫ್ ಕಾಲೇಜ್ ಆಫ್ ಬ್ಸುಸ್‍ನೆಸ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಎಂಬಿಎ ವಿದ್ಯಾರ್ಥಿ. ಭಾರತ ತಂಡದ ಬಾಗಿಲು ತೆರೆದಾಗ ಅರ್ಧಕ್ಕೆ ಬಿಟ್ಟು ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ ಮಾಡಿದರು.


  ಯುವರಾಜ್ ಸಿಂಗ್: ಡಿಎವಿ ಪಬ್ಲಿಕ್ ಶಾಲೆಯಲ್ಲಿ 12ನೇ ತರಗತಿ ಮುಗಿಸುವಷ್ಟರಲ್ಲೇ ತನ್ನ ಶಾಲಾದಿನದಲ್ಲೇ ಒಬ್ಬ ಚಾಂಪಿಯನ್ ಆಟಗಾರನಾಗಿ ಹೊರಹೊಮ್ಮಿದ್ದರು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್. ಕ್ಯಾನ್ಸರ್‍ನಿಂದ ಬಳಲುತಿದ್ದರೂ ಹೋರಾಡಿ, ಉತ್ತಮ ಆಟ ಪ್ರದರ್ಶಿಸಿ ಭಾರತಕ್ಕೆ ವಿಶ್ವಕಪ್ ತಂದಿತ್ತ ಯುವರಾಜ ಓದಿದ್ದು ಮಾತ್ರ 12ನೇ ತರಗತಿ.


  ಅನಿಲ್ ಕುಂಬ್ಳೆ: ಕರ್ನಾಟಕದ ಮತ್ತೊಬ್ಬ ಹೆಮ್ಮೆಯ ಕ್ರಿಕೆಟಿಗ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಪ್ರಾರ್ಥಮಿಕ ಶಿಕ್ಷಣವವನ್ನು ಹೋಲಿ ಸೆಂಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಮುಗಿಸಿದರು. ನಂತರ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಓದಿ ಮೆಕನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಬಿಇ ಪದವಿಯನ್ನು ಪಡೆದರು.


  IPL 2021 Auction: ಐಪಿಎಲ್ 2021 ಹರಾಜು ಪ್ರಕ್ರಿಯೆ ಯಾವಾಗ?: ಟೂರ್ನಿ ಆರಂಭದ ಕುರಿತ ಮಾಹಿತಿ ಇಲ್ಲಿದೆ


  ಜಾವಗಲ್ ಶ್ರೀನಿನಾಥ್: ಜಾವಗಲ್ ಎಕ್ಸಪ್ರೆಸ್ ಜಾವಗಲ್ ಶ್ರೀನಾಥ್ ಒಬ್ಬ ಇಂಜಿನಿಯರ್. ಮೈಸೂರಿನ ಜಯಚಾಮರಾಜೆಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇನ್ಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.


  ಜಹೀರ್ ಖಾನ್: ಶ್ರೀರಾಂಪುರದಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿದ ಜಹೀರ್ ಖಾನ್ ನಂತರ ಇಂಜಿನಿಯರಿಂಗ್ ಪದವಿ ಮಾಡಲು ಮುಂದಾಗುತ್ತಾರೆ. ಓದುವುದರಲ್ಲಿ ಆಸಕ್ತಿ ಇದ್ದರೂ ಕ್ರಿಕೆಟ್ ಲೋಕ ಕೈ ಬೀಸಿ ಕರೆಯಿತು. ಹೀಗೆ ಓದುವುದನ್ನು ಅರ್ಧದಲ್ಲೆ ಬಿಟ್ಟು ಬಂದ ಜಹೀರ್ ಬಹುಕಾಲ ಭಾರತ ಕ್ರಿಕೆಟ್‍ನ ಬೌಲಿಂಗ್ ಮುಂದಾಳತ್ವವನ್ನು ವಹಿಸಿದ್ದರು.


  ಎಂ. ಎಸ್ ಧೋನಿ: ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕ ಎಂ. ಎಸ್ ಧೋನಿ ಕ್ರಿಕೆಟ್‍ಗೆ ಬರುವ ಮೊದಲು ಓದಿನಲ್ಲಿ ಆಸಕ್ತಿಯಿದ್ದರೂ ಕನಿಷ್ಠ 10ನೇ ತರಗತಿ ಓದುವುದು ಕಷ್ಟವಾಗಿತ್ತು, ಆದರೆ ನಂತರದಲ್ಲಿ 12ನೇ ತರಗತಿ ಹಾಗೂ ಬಿ.ಕಾಂ ಪದವಿಯನ್ನು ಸೆಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪಡೆಯುತ್ತಾರೆ.


  ಗೌತಮ್ ಗಂಭೀರ್: ಭಾರತ ಕಂಡ ಉತ್ತಮ ಓಪನರ್‍ಗಳಲ್ಲಿ ಒಬ್ಬರಾಗಿರುವ ಗೌತಮ್ ಗಂಭೀರ್ ದೆಹಲಿಯ ಮಾರ್ಡನ್ ಸ್ಕೂಲ್‍ನಲ್ಲಿ ಆರಂಭಿಕ ಶಿಕ್ಷಣ ಪಡೆದು, ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ಪದವಿ ಪಡೆದರು.


  ವಿರಾಟ್ ಕೋಹ್ಲಿ: ಪ್ರಸ್ತುತ ಕ್ರಿಕೆಟ್ ಲೋಕದಲ್ಲಿ ತನ್ನದೆ ಆದ ಚಾಪು ಮೂಡಿಸಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶಾಲ್ ಭಾರತ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರು. ಇವರು ಇಲ್ಲಿ 12ನೇ ತರಗತಿವರೆಗೆ ಓದಿದ್ದಾರೆ. ಓದಿನಲ್ಲಿ ಚುರುಕಾಗಿದ್ದರೂ ಕ್ರಿಕೆಟ್ ಕಡೆಗಿನ ಆಸಕ್ತಿ ಇಡೀ ವಿಶ್ವವೇ ಇವರತ್ತ ನೋಡುವಂತೆ ಮಾಡಿದೆ. ವಿಶ್ವಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದಾರೆ.

  Published by:Vinay Bhat
  First published: