• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Deodhar Trophy: ನಿಬ್ಬೆರಗಾಗಿಸುತ್ತೆ ಒಂದೇ ಕೈಯಲ್ಲಿ ದಿನೇಶ್ ಕಾರ್ತಿಕ್ ಹಿಡಿದ ಈ ಅದ್ಭುತ ಕ್ಯಾಚ್!

Deodhar Trophy: ನಿಬ್ಬೆರಗಾಗಿಸುತ್ತೆ ಒಂದೇ ಕೈಯಲ್ಲಿ ದಿನೇಶ್ ಕಾರ್ತಿಕ್ ಹಿಡಿದ ಈ ಅದ್ಭುತ ಕ್ಯಾಚ್!

ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ದಿನೇಶ್ ಕಾರ್ತಿಕ್

ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ದಿನೇಶ್ ಕಾರ್ತಿಕ್

ಈ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಟ್ವಿಟ್ಟರ್​ನಲ್ಲಿ ಕಾರ್ತಿಕ್ ಹಿಡಿದ ಈ ಅದ್ಭುತ ಕ್ಯಾಚ್​ಗೆ ಪ್ರಶಂಸೆಗಳ ಮಳೆಯೇ ಸುರಿಯುತ್ತಿದೆ.

  • Share this:

    ಬೆಂಗಳೂರು (ನ. 04): ರಾಂಚಿಯಲ್ಲಿ ಸಾಗುತ್ತಿರುವ ದೇವಧರ್ ಟ್ರೋಫಿಯ ಫೈನಲ್ ಪಂದ್ಯಾವಳಿಯಲ್ಲಿ ಪಾರ್ಥಿವ್ ಪಟೇಲ್ ನಾಯತ್ವದ ಭಾರತ ಬಿ ತಂಡ ಗೆಲುವಿನತ್ತ ದಾಪುಗಾಲಿಡುತ್ತಿದೆ. ಈ ನಡುವೆ ಭಾರತ ಸಿ ತಂಡದ ಆಟಗಾರ ದಿನೇಶ್ ಕಾರ್ತಿಕ್ ಹಿಡಿದ ಅದ್ಭುತ ಕ್ಯಾಚ್​ನ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಬಿ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಓಪನರ್​ಗಳಾದ ರುತುರಾಜ್ ಗಾಯಕ್ವಾಡ್ ಮೊದಲ ಓವರ್​ನಲ್ಲೇ ಸೊನ್ನೆ ಸುತ್ತಿದರೆ, ನಾಯಕ ಪಾರ್ಥಿವ್ ಪಟೇಲ್ 14 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

    ಸ್ಟಾರ್ ಪ್ಲೇಯರ್ ಪಾರ್ಥಿವ್ ಪಟೇಲ್ ಔಟ್ ಮಾಡುವಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಪ್ರಮುಖ ಪಾತ್ರ ವಹಿಸಿದರು. ಇಶಾನ್ ಪೋರ್ ಬೌಲಿಂಗ್​ನಲ್ಲಿ ಪಾರ್ಥಿವ್ ಚೆಂಡನ್ನು ಸಂಪೂರ್ಣವಾಗಿ ಎದುರಿಸಲು ಎಡವಿದರು. ಬ್ಯಾಟ್​ನ ಔಟ್​ಸೈಡ್ ಎಡ್ಜ್​ಗೆ ತಾಗಿದ ಬಾಲ್ ಅನ್ನು ಕೀಪರ್ ದಿನೇಶ್ ಕಾರ್ತಿಕ್ ಡೈ ಬಿದ್ದು ಒಂದೇ ಕೈಯಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದರು.

    INDW vs WIW: ಮಿಂಚಿದ ಪೂನಂ ರಾವತ್; ಎರಡನೇ ಏಕದಿನದಲ್ಲಿ ಭಾರತಕ್ಕೆ ಭರ್ಜರಿ ಜಯ

     



    ಈ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಟ್ವಿಟ್ಟರ್​ನಲ್ಲಿ ಕಾರ್ತಿಕ್ ಹಿಡಿದ ಈ ಅದ್ಭುತ ಕ್ಯಾಚ್​ಗೆ ಪ್ರಶಂಸೆಗಳ ಮಳೆಯೇ ಸುರಿಯುತ್ತಿದೆ.

     


    ಮೊದಲು ಬ್ಯಾಟ್ ಮಾಡಿದ ಭಾರತ ಬಿ ತಂಡ ಕೇದರ್ ಜಾಧವ್​ 86, ಯಶಸ್ವಿ ಜೈಸ್ವಾಲ್​ರ 54 ಹಾಗೂ ಅಂತಿಮ ಹಂತದಲ್ಲಿ ಕೃಷ್ಣಪ್ಪ ಗೌತಮ್ 10 ಎಸೆತಗಳಲ್ಲಿ 35 ರನ್ ಸಿಡಿಸಿದ ಪರಿಣಾಮ 50 ಓವರ್​ಗೆ 7 ವಿಕೆಟ್ ಕಳೆದುಕೊಂಡು 283 ರನ್ ಬಾರಿಸಿತು.

    ಇನ್ಮುಂದೆ ಪ್ರತಿ ವರ್ಷ ಭಾರತದಲ್ಲಿ ಡೇ ನೈಟ್ ಟೆಸ್ಟ್​; ಸೌರವ್ ಗಂಗೂಲಿ

    ಸದ್ಯ 284 ರನ್​ಗಳ ಟಾರ್ಗೆಟ್ ಬೆನ್ನಟ್ಟಿರು ಭಾರತ ಸಿ ತಂಡ ಸೋಲಿನ ಸುಳಿಗೆ ಸಿಲುಕಿದೆ. ಪ್ರಿಯಾಮ್ ಗಾರ್ಗ್​ 74 ರನ್​ಗಳ ಕಾಣಿಕೆ ನೀಡಿದರಾದರು ಉಳಿದ ಬ್ಯಾಟ್ಸ್​ಮನ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ.

     





    top videos
      First published: