HOME » NEWS » Sports » CRICKET DHONIS DAUGHTER ZIVA AND RISHABH PANT HAVE A BLAST AT INDIA VS PAKISTAN MATCH

India vs Pakistan: ರೋಚಕ ಪಂದ್ಯದ ನಡುವೆ ರಿಷಭ್ ಪಂತ್​ಗೆ ಬೇಬಿ ಸಿಟ್ಟರ್ ಕೆಲಸ: ವಿಡಿಯೋ ವೈರಲ್

ಈ ಹಿಂದೆ ಮೆಲ್ಬೊರ್ನ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆಯಲ್ಲಿ ಆಸೀಸ್ ನಾಯಕ ಟಿಮ್ ಪೈನ್ ತಮ್ಮ ಮಗಳಿಗೆ ಬೇಬಿ ಸಿಟ್ಟರ್ ಆಗುವೆಯಾ? ಎಂದು ರಿಷಭ್ ಪಂತ್ ಅವರನ್ನು ಮೈದಾನದಲ್ಲೇ ಕಿಚ್ಚಾಯಿಸಿದ್ದರು.

zahir | news18
Updated:June 17, 2019, 2:55 PM IST
India vs Pakistan: ರೋಚಕ ಪಂದ್ಯದ ನಡುವೆ ರಿಷಭ್ ಪಂತ್​ಗೆ ಬೇಬಿ ಸಿಟ್ಟರ್ ಕೆಲಸ: ವಿಡಿಯೋ ವೈರಲ್
Rishabh Pant and ziva dhoni ರಿಷಭ್ ಪಂತ್ ಮತ್ತು ಝಿವಾ ಧೋನಿ
  • News18
  • Last Updated: June 17, 2019, 2:55 PM IST
  • Share this:
ಭಾರತ-ಪಾಕಿಸ್ತಾನ ನಡುವಣ ವಿಶ್ವಕಪ್​ ಪಂದ್ಯದಲ್ಲಿ ಟೀಂ ಇಂಡಿಯಾ ಡೆಕ್​ವರ್ತ್​​ ನಿಯಮದ ಅನ್ವಯ 89 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪಾಕ್​ ವಿರುದ್ಧದ ವರ್ಲ್ಡ್​ಕಪ್ ಗೆಲುವಿನ ನಾಗಾಲೋಟವನ್ನು ಮುಂದುವೆರೆಸಿದೆ. ಇನ್ನು ಈ ಪಂದ್ಯದ ವೇಳೆ ಇತ್ತೀಚೆಗೆ ತಂಡವನ್ನು ಕೂಡಿಕೊಂಡಿದ್ದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಸ್ಟೇಡಿಯಂನಲ್ಲಿ ಕೂತು ತಂಡವನ್ನು ಹುರಿದುಂಬಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಅದು ಕೂಡ ಮಹೇಂದ್ರ ಸಿಂಗ್ ಧೋನಿ ಮಗಳೊಂದಿಗೆ ಎಂಬುದು ವಿಶೇಷ.

ಏಕೆಂದರೆ ಅಂತರಾಷ್ಟ್ರೀಯ ಕ್ರಿಕೆಟ್​ನ 'ಬೆಸ್ಟ್​ ಬೇಬಿ ಸಿಟ್ಟರ್' ಎಂಬ ಖ್ಯಾತಿ ಪಡೆದಿರುವ ರಿಷಭ್ ಭಾನುವಾರ ನಡೆದ ರೋಚಕ ಪಂದ್ಯದ ವೇಳೆಯು ಬೇಬಿ ಸಿಟ್ಟರ್ ಆಗಿದ್ದರು. ಹೈ ವೋಲ್ಟೇಜ್ ಪಂದ್ಯವನ್ನು ಎಲ್ಲರೂ ಕಣ್ತುಂಬಿಕೊಳ್ಳುತ್ತಿದ್ದರೆ ರಿಷಭ್ ಧೋನಿ ಮಗಳು ಝಿವಾಳೊಂದಿಗೆ ಸೇರಿ ತಂಡಕ್ಕೆ ಕಿರುಚಾಟದ ಕೀಟಲೆಯಲ್ಲಿ ತೊಡಗಿಕೊಂಡಿದ್ದರು.

ಝಿವಾ ಜೊತೆಗೂಡಿ ಸ್ಟೇಡಿಯಂನಲ್ಲಿ ಗದ್ದಲವೆಬ್ಬಿಸುತ್ತಿರುವ ವಿಡಿಯೋವನ್ನು ಖುದ್ದು ರಿಷಭ್ ಪಂತ್ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಾನು ಟೀಂ ಇಂಡಿಯಾದ ಬೆಸ್ಟ್​ ಬೇಬಿ ಸಿಟ್ಟರ್​ ಎಂಬುದನ್ನು ಮತ್ತೊಮ್ಮೆ ಎಡಗೈ ದಾಂಡಿಗ ನಿರೂಪಿಸಿದ್ದಾರೆ.

ಈ ಹಿಂದೆ ಮೆಲ್ಬೊರ್ನ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆಯಲ್ಲಿ ಆಸೀಸ್ ನಾಯಕ ಟಿಮ್ ಪೈನ್ ತಮ್ಮ ಮಗಳಿಗೆ ಬೇಬಿ ಸಿಟ್ಟರ್ ಆಗುವೆಯಾ? ಎಂದು ರಿಷಭ್ ಪಂತ್ ಅವರನ್ನು ಮೈದಾನದಲ್ಲೇ ಕಿಚ್ಚಾಯಿಸಿದ್ದರು. ನಂತರ ರಿಷಭ್ ಪಂತ್, ಪೈನ್ ಮನೆಗೆ ಹೋಗಿ ಬೋನಿ ಪೈನ್ ಮತ್ತು ಮಕ್ಕಳ ಜೊತೆ ಪೋಟೋ ತೆಗೆಸಿಕೊಂಡಿದ್ದರು. ಆ ಫೋಟೋಗಳು ಭಾರೀ ವೈರಲ್ ಆಗಿತ್ತು.

ಆಸ್ಟ್ರೇಲಿಯಾದ ಆಟಗಾರನ ಸ್ಲೆಡ್ಜಿಂಗ್​ಗೆ ವಿಭಿನ್ನವಾಗಿ ಮರುತ್ತರ ನೀಡಿದ್ದ ಪಂತ್​ಗೆ ನಂತರ ರೋಹಿತ್ ಶರ್ಮಾ, ತಮ್ಮ ಮಗಳಿಗೆ ಬೇಬಿ ಸಿಟ್ಟರ್ ಆಗುತ್ತೀಯಾ? ಎಂದು ಕೇಳಿ ಕಚಗುಳಿಯಿಟ್ಟಿದ್ದರು. ಈ ಪ್ರಶ್ನೆಗೆ ಪಂತ್ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನ  ಕಾಲೆಳೆದಿದ್ದರ. ಚಾಹಲ್ ಸರಿಯಾಗಿ ಕೆಲಸ ಮಾಡ್ತಿಲ್ವ? ಹಾಗಿದ್ರೆ ನಿಮ್ಮ ಮಗಳು ಸಮೈರಾಗೆ ತಾನು ಸಂತೋಷದಿಂದಲೇ ಬೇಬಿ ಸಿಟ್ಟರ್​ ಆಗುವುದಾಗಿ ಹಾಸ್ಯ ಚಟಾಕಿ ಹಾರಿಸಿದ್ದರು.

ಇದೀಗ ವಿಶ್ವಕಪ್​ನಲ್ಲೂ ರಿಷಭ್ ಪಂತ್ ಹಿರಿಯ ಕ್ರಿಕೆಟರುಗಳ ಮಕ್ಕಳ್ಳೊಂದಿಗೆ ಕೀಟಲೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.  ಝಿವಾ-ಪಂತ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಟೀಂ ಇಂಡಿಯಾದ ​ ಬೇಬಿ ಸಿಟ್ಟರ್ ಕೆಲಸಕ್ಕೆ ಪಂತ್ ಫಿಕ್ಸ್ ಆಗಿದ್ದಾರೆ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ.


 
View this post on Instagram
 

Partners in crime 😈 @ziva_singh_dhoni


A post shared by Rishabh Pant (@rishabpant) on


ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶಿಖರ್ ಧವನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ರಿಷಭ್​ ಪಂತ್ ಅವರನ್ನು ಸ್ಟ್ಯಾಂಡ್​ ಬೈ ಆಟಗಾರನ್ನಾಗಿ ಬಿಸಿಸಿಐ ನೇಮಕ ಮಾಡಿದೆ. ಆದರೆ, ಇವರಿಗೆ ಟೀಂ ಇಂಡಿಯಾದ 15ರ ಬಳಗದಲ್ಲಿ ಅವರಿಗೆ ಸ್ಥಾನ ನೀಡುವಂತಿಲ್ಲ.

ಧವನ್ ಇನ್ನೂ ವಿಶ್ವಕಪ್‌ನಿಂದ ಹೊರಗುಳಿದಿಲ್ಲ. ಗಾಯದ ಸಮಸ್ಯೆಯಿಂದ ತಂಡದಿಂದ ಶಿಖರ್ ಧವನ್​ರನ್ನು ಕೈ ಬಿಟ್ಟರೆ ಆ ಸ್ಥಾನವು ಪಂತ್ ಪಾಲಾಗಲಿದೆ. ಹೀಗಾಗಿ ಟೀಂ ಇಂಡಿಯಾದ ಸಬ್​ ಆಟಗಾರನಾಗಿ ರಿಷಭ್ ಪಂತ್​ಗೆ ವರ್ಲ್ಡ್​ಕಪ್​ ತಂಡಕ್ಕೆ ಬುಲಾವ್ ನೀಡಲಾಗಿದೆ.

ಇದನ್ನೂ ಓದಿ: ಕಳ್ಳಾಟ ಆಡಿದರೂ ಗೆಲ್ಲಲಿಲ್ಲ ಪಾಕ್..!
First published: June 17, 2019, 2:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories