ಸದ್ಯಕ್ಕೆ ಮೈದಾನಕ್ಕಿಳಿಯಲ್ಲ MSD; ಧೋನಿ ಕ್ರಿಕೆಟ್ ಆಡುವುದು ಯಾವಾಗ?; ಇಲ್ಲಿದೆ ಖಚಿತ ಮಾಹಿತಿ!

ನವೆಂಬರ್ 3 ರಿಂದ ಟೀಂ ಇಂಡಿಯಾ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಸರಣಿ ಆರಂಭಿಸಲಿದೆ. ಬಾಂಗ್ಲಾ ವಿರುದ್ಧ ಕೊಹ್ಲಿ ಪಡೆ ಮೂರು ಪಂದ್ಯಗಳ ಟಿ-20 ಹಾಗೂ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಇದಕ್ಕೂ ಧೋನಿ ಅಲಭ್ಯರಾಗಲಿದ್ದಾರೆ.

Vinay Bhat | news18-kannada
Updated:September 22, 2019, 4:05 PM IST
ಸದ್ಯಕ್ಕೆ ಮೈದಾನಕ್ಕಿಳಿಯಲ್ಲ MSD; ಧೋನಿ ಕ್ರಿಕೆಟ್ ಆಡುವುದು ಯಾವಾಗ?; ಇಲ್ಲಿದೆ ಖಚಿತ ಮಾಹಿತಿ!
ಎಂ ಎಸ್ ಧೋನಿ
  • Share this:
ಬೆಂಗಳೂರು (ಸೆ. 22): 2019 ವಿಶ್ವಕಪ್ ಮುಗಿದ ಬೆನ್ನಲ್ಲೆ ವಿಶ್ರಾಂತಿಗೆ ಜಾರಿದ್ದ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಎರಡು ತಿಂಗಳು ಕಳೆದರು ಬ್ಯಾಟ್ ಹಿಡಿದಿಲ್ಲ. ಈ ಮಧ್ಯೆ ವೆಸ್ಟ್​ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದು ಭಾರತೀಯ ಸೇನೆ ಜೊತೆ ಸೇವೆ ಸಲ್ಲಿಸಲು ಕಾಶ್ಮೀರಕ್ಕೆ ತೆರಳಿದ್ದರು. ಇಲ್ಲಿಂದ ವಾಪಾಸು ಬಂದು ಟೀಂ ಇಂಡಿಯಾ ಸೇರಲಿದ್ದಾರೆ ಎಂದು ಹೇಳಲಾಗಿತ್ತು.

ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಧೋನಿ ಗೈರಾದರು. ಧೋನಿ ರಜಾ ಅವಧಿ ಇನ್ನೂ ಮುಗಿದಿಲ್ಲ, ಹೀಗಾಗಿ ಆಫ್ರಿಕಾ ಸರಣಿಗೆ ಅವರನ್ನು ಆಯ್ಕೆ ಮಾಡಲಿಲ್ಲ ಎಂದು ಬಿಸಿಸಿಐ ಸ್ಪಷ್ಟ ಪಡಿಸಿತ್ತು. ಧೋನಿ ರಜಾ ಅವಧಿ ಸೆ. 21 ನಿನ್ನೆಗೆ ಅಂತ್ಯಗೊಳ್ಳುವುದಾಗಿ ಹೇಳಿತ್ತು. ಆದರೆ, ಧೋನಿ ಇನ್ನೊಂದಿಷ್ಟು ದಿನ ಮೈದಾನಕ್ಕಿಳಿಯಲ್ವಂತೆ.

ನವೆಂಬರ್ 3 ರಿಂದ ಟೀಂ ಇಂಡಿಯಾ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಸರಣಿ ಆರಂಭಿಸಲಿದೆ. ಬಾಂಗ್ಲಾ ವಿರುದ್ಧ ಕೊಹ್ಲಿ ಪಡೆ ಮೂರು ಪಂದ್ಯಗಳ ಟಿ-20 ಹಾಗೂ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಇದಕ್ಕೂ ಧೋನಿ ಅಲಭ್ಯರಾಗಲಿದ್ದಾರೆ.

IND vs SA: ಚಿನ್ನಸ್ವಾಮಿಯ ಹೈವೋಲ್ಟೇಜ್ ಪಂದ್ಯಕ್ಕೆ ವರುಣನ ಅಡ್ಡಿ?; ಬೆಂಗಳೂರಿನ ಹವಮಾನ ಇಲಾಖೆ ಏನನ್ನುತ್ತೆ?

ನವೆಂಬರ್ ಅಂತ್ಯದ ವರೆಗೂ ಧೋನಿ ಮೈದಾನಕ್ಕಿಳಿಯಲ್ಲ. ಅವರು ಮತ್ತಷ್ಟು ವಿಶ್ರಾಂತಿ ಬಯಸಿದ್ದಾರೆ. ಹೀಗಾಗಿ ವಿಜಯ್ ಹಜಾರೆ ಹಾಗೂ ಬಾಂಗ್ಲಾ ಸರಣಿಯಿಂದ ಹಿಂದೆ ಸರಿದಿದ್ದಾರೆ ಎಂದು ಇಂಗ್ಲಿಶ್ ಪತ್ರಿಕೆಯೊಂದು ವರದಿ ಮಾಡಿದೆ.

ಡಿಸೆಂಬರ್​ನಲ್ಲಿ ವೆಸ್ಟ್​ ಇಂಡೀಸ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಯಲ್ಲಿ ಧೋನಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಇತ್ತೀಚೆಗಷ್ಟೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಡಿದ್ದ ಒಂದು ಟ್ವೀಟ್​ನಿಂದ ಧೋನಿ ನಿವೃತ್ತಿ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆ ಬಳಿಕ ಕೊಹ್ಲಿಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ನಿವೃತ್ತಿ ಧೋನಿಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದರು. ಹೀಗಿರುವಾಗಲೆ ಧೋನಿ ಹೆಚ್ಚಿನ ವಿಶ್ರಾಂತಿ ಮೊರೆ ಹೋಗಿರುವುದು ವಿದಾಯ ಗುಟ್ಟ ಎಂಬ ಪ್ರಶ್ನೆ ಹುಟ್ಟಿದೆ.
First published:September 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ