MS Dhoni Press conference: ಕೆಲವೇ ಕ್ಷಣಗಳಲ್ಲಿ ಧೋನಿ ತುರ್ತು ಸುದ್ದಿಗೋಷ್ಠಿ; ಕ್ರಿಕೆಟ್​ಗೆ ಇಂದೇ ಎಂಎಸ್​ಡಿ ವಿದಾಯ?

Dhoni Retirement: ವಿಶ್ವಕಪ್​ ಸೆಮಿ ಫೈನಲ್​ನಲ್ಲಿ ಕೊಹ್ಲಿ ಪಡೆ ಸೋತಿದೆ. ಈ ಮೂಲಕ ಫೈನಲ್​ ಏರಿವ ಕನಸು ನುಚ್ಚು ನೂರಾಗಿತ್ತು. ಈ ಮಧ್ಯೆ ಧೋನಿ ಕಳಪೆ ಆಟವಾಡಿದ್ದಾರೆ ಎನ್ನುವ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು.

Rajesh Duggumane | news18-kannada
Updated:September 12, 2019, 7:00 PM IST
MS Dhoni Press conference: ಕೆಲವೇ ಕ್ಷಣಗಳಲ್ಲಿ ಧೋನಿ ತುರ್ತು ಸುದ್ದಿಗೋಷ್ಠಿ; ಕ್ರಿಕೆಟ್​ಗೆ ಇಂದೇ ಎಂಎಸ್​ಡಿ ವಿದಾಯ?
Dhoni Retirement: ವಿಶ್ವಕಪ್​ ಸೆಮಿ ಫೈನಲ್​ನಲ್ಲಿ ಕೊಹ್ಲಿ ಪಡೆ ಸೋತಿದೆ. ಈ ಮೂಲಕ ಫೈನಲ್​ ಏರಿವ ಕನಸು ನುಚ್ಚು ನೂರಾಗಿತ್ತು. ಈ ಮಧ್ಯೆ ಧೋನಿ ಕಳಪೆ ಆಟವಾಡಿದ್ದಾರೆ ಎನ್ನುವ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು.
  • Share this:
ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಇದು ಧೋನಿ ನಿವೃತ್ತಿ ಬಗ್ಗೆ ಸಾಕಷ್ಟು ಊಹಾಪೋಹ ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೊನಿಗೆ ಈಗ ವಯಸ್ಸು 38. ಅವರು ಈಗ ಮೊದಲಿನ ಚಾರ್ಮ್​ ಹಾಗೂ ಫಾರ್ಮ್​ ಹೊಂದಿಲ್ಲ ಎಂದು ಟೀಕಿಗೊಳಗಾಗುತ್ತಿದ್ದಾರೆ. ವಿಶ್ವಕಪ್​ ವೇಳೆಯೂ ಅವರನ್ನು ಸಾಕಷ್ಟು ಹಂಗಿಸಲಾಗಿತ್ತು. ಹೀಗಾಗಿ ಧೋನಿಗೆ ಕ್ರಿಕೆಟ್​ಗೆ ವಿದಾಯ ಹೇಳುತ್ತಿದ್ದಾರಂತೆ. ಅಚ್ಚರಿ ಎಂದರೆ ಎಂಎಸ್​ ಧೋನಿ ಇಂದೇ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮಹೇಂದ್ರ ಸಿಂಗ್ ಧೋನಿ ಈ ಹಿಂದೆ ಯಾರೂ ಊಹಿಸದ ರೀತಿಯಲ್ಲಿ ಮೂರು ಮಾದರಿಯ ಕ್ರಿಕೆಟ್​ನ ನಾಯಕತ್ವಕ್ಕೆ ಏಕಾಏಕಿ ದಿಢೀರನೇ ನಿವೃತ್ತಿ ಘೋಷಿಸಿದ್ದರು. ಧೋನಿ ನಿವೃತ್ತಿಯ ನಂತರ ಈ ಸ್ಥಾನ ವಿರಾಟ್​ ಕೊಹ್ಲಿಗೆ ಅನಾಯಾಸವಾಗಿ ಒಲಿದುಬಂದಿತ್ತು. ಧೋನಿ ನಾಯಕತ್ವಕ್ಕೆ ವಿದಾಯ ನೀಡಿದಂತೆ ಟೆಸ್ಟ್​ ಕ್ರಿಕೆಟ್​ಗೂ ದಿಢೀರೆಂದು ವಿದಾಯ ಘೋಷಿಸಿದ್ದರು.

ಇದನ್ನೂ ಓದಿ: ಧೋನಿ ನಿವೃತ್ತಿ!: ಟೀಂ ಇಂಡಿಯಾ ಮಾಜಿ ನಾಯಕನಿಂದ ಮಹತ್ವದ ಹೇಳಿಕೆ

ಕೊಹ್ಲಿಗೆ ನಾಯಕ ಪಟ್ಟ ದೊರೆತಿದ್ದರೂ ಕಳೆದ ಮೂರು ವರ್ಷದಿಂದ ಅವರ ಬೆನ್ನಿಗೆ ನಿಂತು ನಾಯಕತ್ವದ ಒಂದೊಂದೆ ಪಟ್ಟುಗಳನ್ನು ತಂತ್ರಗಳನ್ನು ಹೇಳಿಕೊಟ್ಟು ಬೆಳೆಸಿದ್ದು, ಕೊಹ್ಲಿಯ ಈಗಿನ ಎಲ್ಲಾ ಸಾಧನೆಗಳ ಹಿಂದೆ ಇರುವುದು ಇದೇ ಮಹೇಂದ್ರ ಸಿಂಗ್ ಧೋನಿ ಎನ್ನುವ ಶಕ್ತಿ ಎಂಬುದು ಇಂದು ಗುಟ್ಟಾಗೇನು ಉಳಿದಿಲ್ಲ. ಹಾಗಾಗಿ ಈ ಬಾರಿಯ ವಿಶ್ವಕಪ್​ ಗೆಲ್ಲುವ ಮೂಲಕ ಧೋನಿಗೆ ವಿದಾಯ ಹೇಳಬೇಕು ಎನ್ನುವ ಆಲೋಚನೆಯಲ್ಲಿತ್ತು ಕೊಹ್ಲಿ ಪಡೆ.
ಆದರೆ, ವಿಶ್ವಕಪ್​ ಸೆಮಿ ಫೈನಲ್​ನಲ್ಲಿ ಕೊಹ್ಲಿ ಪಡೆ ಸೋತಿದೆ. ಈ ಮೂಲಕ ಫೈನಲ್​ ಏರಿವ ಕನಸು ನುಚ್ಚು ನೂರಾಗಿತ್ತು. ಈ ಮಧ್ಯೆ ಧೋನಿ ಕಳಪೆ ಆಟವಾಡಿದ್ದಾರೆ ಎನ್ನುವ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು.ಧೋನಿ ಸೇನಾ ತರಬೇತಿ ಪಡೆಯಲು ತೆರಳಿದ್ದರಿಂದ ವೆಸ್ಟ್​ ಇಂಡೀಸ್​ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಅವರು ಲಭ್ಯವಾಗಿಲ್ಲ. ಈಗ ಧೋನಿ ಏಕಾಏಕಿ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಲಿದ್ದಾರಾ? ಎನ್ನುವ ಪ್ರಶ್ನೆ ಕಾಡುತ್ತಿದೆ. ಇದರಿಂದ ಬೇಸರಗೊಂಡ ಅನೇಕರು ಇದನ್ನು ನಾವು ಸಹಿಸೆವು ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.
First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading