ಬೆಂಗಳೂರು (ಜು. 31): ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂ ಎಸ್ ಕೆ ಪ್ರಸಾದ್ ಮಾಜಿ ನಾಯಕ ಎಂ ಎಸ್ ಧೋನಿ ಬಗ್ಗೆ ಹಾಡಿ ಹೊಗಳಿದ್ದು, ಅವರು ಈಗಲೂ ದಿ ಬೆಸ್ಟ್ ಫಿನಿಶರ್ ಎಂದಿದ್ದಾರೆ.
ವಿಶ್ವಕಪ್ ಸೆಮಿ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಾವು ಗೆದ್ದದಿದ್ದರೆ ಅದಕ್ಕೆ ಪ್ರಮುಖ ಕಾರಣ ರವೀಂದ್ರ ಜಡೇಜಾ ಹಾಗೂ ಎಂ ಎಸ್ ಧೋನಿ. ಟಾಪ್ ಆರ್ಡನ್ ಬ್ಯಾಟ್ಸ್ಮನ್ಗಳ ವೈಫಲ್ಯದ ಬಳಿಕ ಜಡೇಜಾ ಜೊತೆಗೂಡಿ ಧೋನಿ ತಂಡವನ್ನು ಮೇಲುತ್ತುವ ಪ್ರಯತ್ನ ನಡೆಸಿದರು. ಈ ಪಂದ್ಯ ನಾವು ಗೆದ್ದಿದ್ದರೆ, ಇದುವೇ ಅತ್ಯುತ್ತಮ ವಿಜಯವಾಗಿತ್ತು ಎಂದರು
'ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಇಂದಿನ ವರೆಗೂ ಏಕದಿನ, ಟಿ-20 ಕ್ರಿಕೆಟ್ನಲ್ಲಿ ಎಂ ಎಸ್ ಧೋನಿಯೇ ಭಾರತದ ಗ್ರೇಟ್ ಫಿನಿಶರ್. ಉಳಿದವರು ಇನ್ನೂ ಪ್ರಗತಿಯಲ್ಲಿದ್ದಾರಷ್ಟೆ. ವಿಶ್ವಕಪ್ನಲ್ಲಿ ಧೋನಿ ಬ್ಯಾಟಿಂಗ್, ಕೀಪಿಂಗ್ ಮತ್ತು ಫಿಲ್ಡಿಂಗ್ ಸೆಟ್ ಮಾಡುವಲ್ಲಿ ಭಾರತಕ್ಕೆ ಬಲವಾಗಿದ್ದರು' ಎಂದು
ಪ್ರಸಾದ್ ಹೇಳಿದ್ದಾರೆ.
![Dhoni Remains India's Best Wicket-keeper and Finisher in Shorter Formats: Prasad]()
ಎಂ ಎಸ್ ಕೆ ಪ್ರಸಾದ್, ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ
ಕೈ ತಪ್ಪಿದ ಖೇಲ್ ರತ್ನ; ನನ್ನ ಅರ್ಜಿಯನ್ನು ಮತ್ತೊಮ್ಮೆ ಕೇಂದ್ರಕ್ಕೆ ಕಳುಹಿಸಿ ಎಂದ ಹರ್ಭಜನ್
ಇನ್ನು ಟೀಂ ಇಂಡಿಯಾ ಬಗ್ಗೆ ಮಾತನಾಡಿದ ಪ್ರಸಾದ್, 'ಭಾರತ ಟೆಸ್ಟ್ ತಂಡವನ್ನು ನಾವು ಮತ್ತಷ್ಟು ಬಲ ಪಡಿಸುವತ್ತ ಗಮನ ಹರಿಸಿದ್ದೇವೆ. ಕಳೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿದ್ದೆವು. ಸದ್ಯ ನಾವು ವಿಶ್ವ ಟೆಸ್ಟ್ ಚಾಂಪಿಯ್ ಶಿಮ್ ಅನ್ನು ಎದುರು ನೋಡುತ್ತಿದ್ದೇವೆ' ಎಂದರು.
ಇದೇ ಸಂದರ್ಭ ಪದೇ ಪದೇ ಟೀಂ ಇಂಡಿಯಾವನ್ನು ದೂರುತ್ತಿರುವ ಸುನೀಲ್ ಗವಾಸ್ಕರ್ಗೂ ತಿರುಗೇಟು ನೀಡಿದ್ದು, 'ಎಷ್ಟು ಪಂದ್ಯಗಳನ್ನಾಡಿದ್ದಾರೆ ಎಂಬುದರಿಂದ ಎಷ್ಟು ತಿಳಿದಿದ್ದಾರೆ ಎನ್ನುವುದನ್ನು ಅಳೆಯಬಾರದು. ನಾನು ಕೂಡ ಆಡಿದ್ದು ಕೇವಲ 15 ಪಂದ್ಯವನ್ನಷ್ಟೆ. ಒಂದು ಅಂತರಾಷ್ಟ್ರೀಯ ಪಂದ್ಯವನ್ನಾಡಿದ ರಾಜ್ ಸಿಂಗ್ ಡುಂಗಾರ್ಪುರ ಅವರು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸಚಿನ್ರಂತ ಮಹಾನ್ ಆಟಗಾರನನ್ನು ಕ್ರಿಕೆಟ್ಗೆ ಪರಿಚಯಿಸಿದರು' ಎಂದು ಉದಾಹರಣೆ ಮೂಲಕ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ