HOME » NEWS » Sports » CRICKET DHONI FANS WANT ICC TO FOCUS ON UMPIRING QUALITY AND NOT HIS ARMY INSIGNIA GLOVES

ಧೋನಿ ಗ್ಲೌಸ್​ ವಿಚಾರ ಬಿಟ್ಟು ಐಸಿಸಿ ಅಂಪೈರ್​​​ಗಳ ಕೆಟ್ಟ ತೀರ್ಪಿನ ಬಗ್ಗೆ ಚಿಂತಿಸಲಿ!

Dhoni Keep The Glove: ಟ್ವಿಟ್ಟರ್​​ನಲ್ಲಿ ಧೋನಿಯ ಅನೇಕ ಅಭಿಮಾನಿಗಳು ಅನುಭವ ಇಲ್ಲದ ಅಂಪೈರ್​ಗಳನ್ನು ಮೊದಲು ತೆಗೆದು ಹಾಕಿ, ವಿಶ್ವಕಪ್​​ನಲ್ಲಿ ಅಂಪೈರ್​ಗಳು ನೀಡುತ್ತಿರುವ ತಪ್ಪು ತೀರ್ಪಿನ ಬಗ್ಗೆ ಮೊದಲು ಕ್ರಮ ಕೈಗೊಳ್ಳಿ ಎಂದು ಐಸಿಸಿಗೆ ತಿಳಿಸಿದ್ದಾರೆ.

Vinay Bhat | news18
Updated:June 7, 2019, 4:03 PM IST
ಧೋನಿ ಗ್ಲೌಸ್​ ವಿಚಾರ ಬಿಟ್ಟು ಐಸಿಸಿ ಅಂಪೈರ್​​​ಗಳ ಕೆಟ್ಟ ತೀರ್ಪಿನ ಬಗ್ಗೆ ಚಿಂತಿಸಲಿ!
ಎಂ ಎಸ್ ಧೋನಿ ಹಾಗೂ ಆಸ್ಟ್ರೇಲಿಯಾ ಬೌಲರ್ ನೋ ಬಾಲ್ ಎಸೆಯುತ್ತಿರುವ ದೃಶ್ಯ
  • News18
  • Last Updated: June 7, 2019, 4:03 PM IST
  • Share this:
ಬೆಂಗಳೂರು (ಜೂ. 07): '#DhoniKeepTheGlove' ಎಂಬ ಹ್ಯಾಶ್​ ಟ್ಯಾಗ್ ಭಾರತದ ಟ್ವಿಟ್ಟರ್​ನಲ್ಲಿ ಇಂದು ಭಾರೀ ಸದ್ದು ಮಾಡುತ್ತಿದೆ. ದ. ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಎಂ ಎಸ್​ ಧೋನಿ ತೊಟ್ಟಿದ್ದ ಗ್ಲೌಸ್​ನಲ್ಲಿ ಭಾರತೀಯ ಸೇನೆಯ ‘ಬಲಿದಾನ್’​ ಚಿನ್ಹೆ ಇತ್ತು. ಇದಕ್ಕೆ ಐಸಿಸಿ ಅಪಸ್ವರ ಎತ್ತಿದ್ದು, ಧೋನಿ ಗ್ಲೌಸ್​ನಲ್ಲಿ ಈ ಚಿನ್ಹೆ ತೆಗೆದು ಹಾಕಿ ಎಂದು ಬಿಸಿಸಿಗೆ ಮನವಿ ಮಾಡಿದೆ.

ಈ ರೀತಿ ಚಿಹ್ನೆ ಧರಿಸಬೇಕಾದರೆ ತಂಡ ಅಥವಾ ಆಟಗಾರ ಐಸಿಸಿಯಿಂದ ಮೊದಲೇ ಅನುಮತಿ ಪಡೆಯಬೇಕು. ಧೋನಿ ಧರಿಸಿರುವುದು ಐಸಿಸಿ ನಿಯಮಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ. ಹೀಗಿರುವಾಗ ಧೋನಿ ಅಭಿಮಾನಿಗಳು ಈ ವಿಚಾರವನ್ನು ಗಂಭೀರವಾಗಿ ಪರಗಣಿಸಿದ್ದು, ಐಸಿಸಿ ವಿರುದ್ಧ ಗರಂ ಆಗಿದ್ದಾರೆ.

 
ಗ್ಲೌಸ್​ನಲ್ಲಿ ‘ಬಲಿದಾನ್’ ಚಿನ್ಹೆ ವಿಚಾರ: ‘ಕ್ರೀಡೆಗೆ ಗೌರವ ಸಲ್ಲಿಸಿ’; ಭಾರತೀಯ ಆಟಗಾರನಿಂದಲೇ ಧೋನಿಗೆ ಕಿವಿಮಾತು!

ಟ್ವಿಟ್ಟರ್​​ನಲ್ಲಿ ಧೋನಿಯ ಅನೇಕ ಅಭಿಮಾನಿಗಳು ಅನುಭವ ಇಲ್ಲದ ಅಂಪೈರ್​ಗಳನ್ನು ಮೊದಲು ತೆಗೆದು ಹಾಕಿ, ವಿಶ್ವಕಪ್​​ನಲ್ಲಿ ಅಂಪೈರ್​ಗಳು ನೀಡುತ್ತಿರುವ ತಪ್ಪು ತೀರ್ಪಿನ ಬಗ್ಗೆ ಮೊದಲು ಕ್ರಮ ಕೈಗೊಳ್ಳಿ ಎಂದು ಐಸಿಸಿಗೆ ತಿಳಿಸಿದ್ದಾರೆ.

 



ಗುರುವಾರ ನಡೆದ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆಟಗಾರರಿಗೆ ನ್ಯೂಜಿಲೆಂಡ್ ಮೂಲದ ಅಂಪೈರ್ ಕ್ರಿಸ್ ಗ್ಯಾಫನಿ ಬೆಂಬಿಡದೆ ಕಾಡಿದ್ದರು. ಅನೇಕ ತಪ್ಪು ಎಲ್ಬಿಡಬ್ಲ್ಯೂ ಎಂದು ತೀರ್ಪು ನೀಡಿ ಕೆಟ್ಟ ತೀರ್ಮಾನವನ್ನು ತೆಗೆದುಕೊಂಡಿದ್ದರು. ಇಷ್ಟೇ ಅಲ್ಲದೆ ವೆಸ್ಟ್​ ಇಂಡೀಸ್ ಬ್ಯಾಟಿಂಗ್​ನ ಐದನೇ ಓವರ್​ನ ಮಿಚೆಲ್ ಸ್ಟಾರ್ಕ್​​ ಅವರ ನಾಲ್ಕನೇ ಎಸೆತ ನೋ ಬಾಲ್ ಹಾಕಿದ್ದರು. ಕ್ರೀಸ್​ನಿಂದ ಮಾರುದ್ದ ಹೆಜ್ಜೆ ಇಟ್ಟು ಚೆಂಡನ್ನು ಎಸೆದಿದ್ದರು. ಆದರೆ, ಅಂಪೈರ್ ಇದನ್ನು ಗಮನಿಸಿರಲಿಲ್ಲ. ಪರಿಣಾಮ ಮರು ಎಸೆತದಲ್ಲೇ ಗೇಲ್ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದಿದ್ದರು. ಅಂಪೈರ್ ನಾಲ್ಕನೇ ಎಸೆತವನ್ನು ನೋ ಬಾಲ್ ಕೊಟ್ಟಿದ್ದರೆ ಐದನೇ ಎಸೆತದಲ್ಲಿ ಗೇಲ್​ಗೆ ಫ್ರೀ ಹಿಟ್ ಸಿಗುತ್ತಿತ್ತು. ಆದರೆ, ಅಂಪೈರ್ ಕೆಟ್ಟ ತೀರ್ಪು ಕೊನೆಗೂ ಗೇಲ್ ವಿಕೆಟ್ ಕಬಳಿಸಿತ್ತು. ಅಲ್ಲದೆ ವೆಸ್ಟ್ ಇಂಡೀಸ್ ಸೋಲಿಗೆ ಇದು ಪ್ರಮುಖ ಕಾರಣವಾಗಿತ್ತು.

 



ಅಂಪೈರ್ ಅವರ ಕೆಟ್ಟ ಪ್ರದರ್ಶನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದ್ದವು. ಆದರೆ, ಐಸಿಸಿ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಧೋನಿ ಬಲಿದಾನ್​ ಚಿಹ್ನೆ ಇರುವ ಗ್ಲೌಸ್​ ಧರಿಸಿದ ಬಗ್ಗೆ ಮಾತನಾಡಿತ್ತು. ಇದರಿಂದ ರೊಚ್ಚಿಗೆದ್ದ ಧೋನಿ ಅಭಿಮಾನಿಗಳು ಮೊದಲು ಅಂಪೈರ್​ರ ಪ್ರದರ್ಶನದ ಬಗ್ಗೆ ಕ್ರಮಕೈಗೊಳ್ಳು ಎಂದು ಐಸಿಸಿಗೆ ತಾಕೀತು ಮಾಡಿದ್ದಾರೆ.

 























Youtube Video
First published: June 7, 2019, 3:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories