ವಿಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ; ಅಯ್ಯರ್, ರಾಹುಲ್​ಗೆ ಚಾನ್ಸ್; ಧೋನಿ, ಪಾಂಡ್ಯ ಇಲ್ಲ

ವಿರಾಟ್ ಕೊಹ್ಲಿಯೇ ನೇತೃತ್ವ ವಹಿಸುವ ಮೂರೂ ತಂಡಗಳಲ್ಲೂ ಕರ್ನಾಟಕದ ಕೆ.ಎಲ್. ರಾಹುಲ್ ಸ್ಥಾನ ಪಡೆದಿದ್ದಾರೆ. ಹಾಗೆಯೇ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಅವರೂ ಕೂಡ ಟೆಸ್ಟ್, ಏಕದಿನ ಮತ್ತು ಟಿ20 ತಂಡಗಳಲ್ಲಿ ಆಯ್ಕೆಯಾಗಿದ್ಧಾರೆ.

ಕೇವಲ 2 ಇಂಚಿನ ಅಂತರದಲ್ಲಿ ರನೌಟ್ ಆಯಿತು. ನಾನು ಡೈವ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಧೋನಿ ಹೇಳಿದ್ದಾರೆ.

ಕೇವಲ 2 ಇಂಚಿನ ಅಂತರದಲ್ಲಿ ರನೌಟ್ ಆಯಿತು. ನಾನು ಡೈವ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಧೋನಿ ಹೇಳಿದ್ದಾರೆ.

  • News18
  • Last Updated :
  • Share this:
ಮುಂಬೈ(ಜುಲೈ 21): ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡಗಳನ್ನ ಪ್ರಕಟಿಸಲಾಗಿದೆ. ಟೆಸ್ಟ್, ಓಡಿಐ ಮತ್ತು ಟಿ20 ತಂಡಗಳನ್ನು ಆಯ್ಕೆ ಮಾಡಲಾಗಿದೆ. ತಂಡದ ಆಯ್ಕೆಗೆ ಮೂರು ತಿಂಗಳು ಅಲಭ್ಯರಾಗಿರುವುದಾಗಿ ಹೇಳಿದ್ದ ಎಂಎಸ್ ಧೋನಿ ಅವರನ್ನು ನಿರೀಕ್ಷೆಯಂತೆ ತಂಡದಿಂದ ಕೈಬಿಡಲಾಗಿದೆ. ಧೋನಿ ಬದಲು ರಿಷಬ್ ಪಂತ್ ಅವರು ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಟೆಸ್ಟ್ ತಂಡದಲ್ಲಿ ವೃದ್ಧಿಮಾನ್ ಸಾಹಾ ಮತ್ತು ರಿಷಭ್ ಪಂತ್ ಇಬ್ಬರೂ ವಿಕೆಟ್​ಕೀಪರ್​ಗಳಿದ್ದಾರೆ. ವಿಶ್ವಕಪ್​ನಲ್ಲಿ ಆಡಿದ್ದ ದಿನೇಶ್ ಕಾರ್ತಿಕ್ ಅವರನ್ನು ಕೈಬಿಡಲಾಗಿದೆ.

ವಿರಾಟ್ ಕೊಹ್ಲಿಯೇ ನೇತೃತ್ವ ವಹಿಸುವ ಮೂರೂ ತಂಡಗಳಲ್ಲೂ ಕರ್ನಾಟಕದ ಕೆ.ಎಲ್. ರಾಹುಲ್ ಸ್ಥಾನ ಪಡೆದಿದ್ದಾರೆ. ಹಾಗೆಯೇ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಅವರೂ ಕೂಡ ಟೆಸ್ಟ್, ಏಕದಿನ ಮತ್ತು ಟಿ20 ತಂಡಗಳಲ್ಲಿ ಆಯ್ಕೆಯಾಗಿದ್ಧಾರೆ.

ಇದನ್ನೂ ಓದಿ: ಭಾರತ ಜೂನಿಯರ್ ತಂಡವನ್ನು ಪ್ರತಿನಿಧಿಸುತ್ತಿರುವ ರಾಯಚೂರಿನ ಯುವಕ

ಕೆಎಲ್ ರಾಹುಲ್ ಬಿಟ್ಟರೆ ಮಯಂಕ್ ಅಗರ್ವಾಲ್ ಮತ್ತು ಮನೀಶ್ ಪಾಂಡೆ ಅವರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ವಿಶ್ವಕಪ್​ನಲ್ಲಿ ಭಾರತ ತಂಡದಲ್ಲಿದ್ದ ಆಲ್​ರೌಂಡರ್ ವಿಜಯ್ ಶಂಕರ್ ಅವರಿಗೆ ಗಾಯದ ಸಮಸ್ಯೆ ಇರುವುದರಿಂದ ಅವರನ್ನು ಡ್ರಾಪ್ ಮಾಡಲಾಗಿದೆ. ವೇಗದ ಬೌಲರ್ ನವದೀಪ್ ಸೈನಿ ಮತ್ತು ಖಲೀಲ್ ಅಹ್ಮದ್ ಅವರು ಚುಟುಕು ಕ್ರಿಕೆಟ್​ನಲ್ಲಿ ಆಡಲಿದ್ದಾರೆ. ಹಳೆಯ ಬೌಲಿಂಗ್ ಹುಲಿ ಇಶಾಂತ್ ಶರ್ಮಾ ಅವರನ್ನು ಟೆಸ್ಟ್ ತಂಡಕ್ಕೆ ಆರಿಸಲಾಗಿದೆ.

ಪಂದ್ಯಗಳ ವೇಳಾಪಟ್ಟಿ:
ವಿಂಡೀಸ್ ಪ್ರವಾಸದಲ್ಲಿ ಆತಿಥೇಯರ ವಿರುದ್ಧ ಭಾರತ ಆ. 3ರಿಂದ 6ರವರೆಗೆ 3 ಟಿ20 ಪಂದ್ಯಗಳನ್ನ ಆಡಲಿದೆ. ಆ. 8ರಿಂದ 14ರವರೆಗೆ ಮೂರು ಏಕದಿನ ಪಂದ್ಯಗಳನ್ನ ಆಡಲಿದೆ. ಆ. 22 ಮತ್ತು 30ರಿಂದ ಎರಡು ಟೆಸ್ಟ್ ಪಂದ್ಯಗಳನ್ನ ಆಡಲಿದೆ.

ಟೆಸ್ ತಂಡ:
ವಿರಾಟ್ ಕೊಹ್ಲಿ(ನಾಯಕ), ಮಯಂಕ್ ಅಗರವಾಲ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಗಗನ ಹನುಮ ವಿಹಾರಿ, ರೋಹಿತ್ ಶರ್ಮಾ, ರಿಷಭ್ ಪಂತ್, ವೃದ್ಧಿಮಾನ್ ಸಾಹಾ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ಉಮೇಶ್ ಯಾದವ್.

ಇದನ್ನೂ ಓದಿ: ವಿಂಡೀಸ್ ಪ್ರವಾಸದಿಂದ ದೂರ ಸರಿದ ಧೋನಿ: ಏನು ಮಾಡ್ತಿದ್ದಾರೆ ಗೊತ್ತಾ?

ಏಕದಿನ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯುಜವೇಂದ್ರ ಚಹಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ನವದೀಪ್ ಸೈನಿ.

ಟಿ20 ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್, ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್ ಚಹಾರ್, ನವದೀಪ್ ಸೈನಿ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published: