ಅಂದು ಧೋನಿ ಕೈಗೊಂಡ ನಿರ್ಧಾರವನ್ನು ಮರೆತ ಕ್ಯಾಪ್ಟನ್ ಕೊಹ್ಲಿ..!

#ThankYouMSD: ಅಷ್ಟೇ ಅಲ್ಲದೆ ಇಂತಹದೊಂದು ಸನ್ನಿವೇಶ 2011ರ ವಿಶ್ವಕಪ್​ ಸಂದರ್ಭದಲ್ಲೂ ತಲೆದೂರಿತ್ತು. ಮುಂಬೈನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಸೆಹವಾಗ್ ಶೂನ್ಯಕ್ಕೆ ನಿರ್ಗಮಿಸಿದರೆ, ಸಚಿನ್ 18 ರನ್​ಗೆ ವಿಕೆಟ್ ಒಪ್ಪಿಸಿದ್ದರು.

news18
Updated:July 11, 2019, 7:02 PM IST
ಅಂದು ಧೋನಿ ಕೈಗೊಂಡ ನಿರ್ಧಾರವನ್ನು ಮರೆತ ಕ್ಯಾಪ್ಟನ್ ಕೊಹ್ಲಿ..!
Dhoni-Kohli
 • News18
 • Last Updated: July 11, 2019, 7:02 PM IST
 • Share this:
ವಿಶ್ವಕಪ್​ ಟೂರ್ನಿಯಿಂದ ಹೊರ ಬಿದ್ದ ಟೀಂ ಇಂಡಿಯಾದ ಸೆಮಿಫೈನಲ್ ಸೋಲನ್ನು ವಿಶ್ಲೇಷಿಸಲಾಗುತ್ತಿದೆ. ನ್ಯೂಜಿಲೆಂಡ್ ನೀಡಿದ 240 ರನ್​ಗಳ ಸಾಧಾರಣ ಸವಾಲನ್ನು ಬೆನ್ನತ್ತುವಲ್ಲಿ ಮುಗ್ಗರಿಸಿದ ಕಾರಣಗಳನ್ನು ಹುಡುಕಲಾಗುತ್ತಿದೆ. ಅಂತೆಯೇ ಟೀಂ ಇಂಡಿಯಾ 18 ರನ್​ಗಳ ಸೋಲಿಗೆ ಪ್ರಮುಖ ಕಾರಣ ತಂಡದ ನಿರ್ಧಾರ ಎಂದು ಅಭಿಪ್ರಾಯ ಪಟ್ಟಿದ್ದಾರೆ ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್.

ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ವಿಕೆಟ್ ಬೀಳುತ್ತಿದ್ದಂತೆ ಅನುಭವಿ ಆಟಗಾರರು ಕ್ರೀಸ್​ನಲ್ಲಿರಬೇಕಿತ್ತು. ಆದರೆ ಟೀಂ ಇಂಡಿಯಾ ತಂತ್ರಗಾರಿಕೆಯಲ್ಲಿ ಬಹುದೊಡ್ಡ ತಪ್ಪು ಮಾಡಿತು. ಇಲ್ಲಿ ದಿನೇಶ್ ಕಾರ್ತಿಕ್​ಗಿಂತ ಮೊದಲು ಧೋನಿಯನ್ನು ಬ್ಯಾಟಿಂಗ್​ಗೆ ಕಳುಹಿಸಬೇಕಿತ್ತು. ಏಕೆಂದರೆ ಮಹೇಂದ್ರ ಸಿಂಗ್ ಧೋನಿಗೆ 350 ಏಕದಿನ ಪಂದ್ಯಗಳ ಅನುಭವವಿದೆ. ಒತ್ತಡದ ಸಂದರ್ಭವನ್ನು ಹೇಗೆ ನಿಭಾಯಿಸಬೇಕೆಂಬುದು ಅವರಿಗೆ ತಿಳಿದಿರುವುದು ಭಾರತಕ್ಕೆ ನೆರವಾಗುತ್ತಿತ್ತು ಎಂದು ಲಕ್ಷ್ಮಣ್ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಇಂತಹದೊಂದು ಸನ್ನಿವೇಶ 2011ರ ವಿಶ್ವಕಪ್​ ಸಂದರ್ಭದಲ್ಲೂ ತಲೆದೂರಿತ್ತು. ಮುಂಬೈನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಸೆಹವಾಗ್ ಶೂನ್ಯಕ್ಕೆ ನಿರ್ಗಮಿಸಿದರೆ, ಸಚಿನ್ 18 ರನ್​ಗೆ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಯುವ ಆಟಗಾರ ಕೊಹ್ಲಿ 35 ರನ್​ಗಳಿಸಿ ಔಟಾಗಿದ್ದರು. ಒಂದೆಡೆ ಗೌತಮ್ ಗಂಭೀರ್ ಮಾತ್ರ ಚೆನ್ನಾಗಿ ಬ್ಯಾಟ್ ಮಾಡಿದ್ದರು. ಚೇಸಿಂಗ್​ನಲ್ಲಿ 114 ರನ್​ಗಳಾಗುವಷ್ಟರಲ್ಲಿ ಭಾರತ 3 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಯುವರಾಜ್​ ಸಿಂಗ್ ಅವರಿಗಿಂತಲೂ ಮೊದಲು ಧೋನಿ ಕ್ರೀಸ್​ಗೆ ಆಗಮಿಸಿದ್ದರು. ಈ ಮೂಲಕ ಒತ್ತಡವನ್ನು ನಿಭಾಯಿಸಿದ್ದರು. ಪರಿಣಾಮ ಧೋನಿ-ಯುವರಾಜ್​ ಸಿಂಗ್​ ತಂಡವನ್ನು ಗುರಿಮುಟ್ಟಿಸಲು ಯಶಸ್ವಿಯಾಗಿದ್ದರು ಎಂಬುದನ್ನು ಲಕ್ಷ್ಮಣ್ ನೆನಪಿಸಿದರು.

ಇದು ಟೀಂ ಇಂಡಿಯಾ ರಣತಂತ್ರದಲ್ಲಿ ಮಾಡಿದ ದೊಡ್ಡ ಪ್ರಮಾದ ಎಂದಿರುವ ಲಕ್ಷ್ಮಣ್,  ಬ್ಯಾಟಿಂಗ್ ಕ್ರಮಾಂಕದಲ್ಲಿ ಎಡವಟ್ಟಿನಿಂದ ನಿರ್ಣಾಯಕ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆ ಜಯಗಳಿಸಲು ಸಾಧ್ಯವಾಯಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,203,280

   
 • Total Confirmed

  1,677,298

  +73,646
 • Cured/Discharged

  372,439

   
 • Total DEATHS

  101,579

  +5,887
Data Source: Johns Hopkins University, U.S. (www.jhu.edu)
Hospitals & Testing centres