T20 World Cup| ಹೆಚ್ಚುವರಿ ಸ್ಪಿನ್ನರ್​-ವೇಗದ ಬೌಲರ್​ ಆಡಿಸುವ ಬಗ್ಗೆ ಡ್ಯೂ ಫ್ಯಾಕ್ಟರ್ ನಿರ್ಧರಿಸುತ್ತದೆ: ರವಿ ಶಾಸ್ತ್ರಿ

ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನೂ ಸಂಜೆ ವೇಳೆಯೇ ಆಡಲಿದೆ. ಈ ವೇಳೆ ಇಬ್ಬನಿ ಪ್ರಮುಖ ಪಾತ್ರ ವಹಿಸಲಿದೆ. ಇಬ್ಬನಿ ಹೆಚ್ಚಿರುವ ಸಂದರ್ಭದಲ್ಲಿ ಸ್ಪಿನ್ ಬೌಲರ್​ಗಳು ಬಾಲ್ ಮೇಲೆ ಹಿಡಿತ ಸಾಧಿಸುವುದು ಕಷ್ಟ. ಹೀಗಾಗಿ ಟಾಸ್​ ನಂತರ ಹೆಚ್ಚುವರಿ ಬೌಲರ್​ ಬಗ್ಗೆ ನಿರ್ಧರಿಸಲಾಗುವುದು ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.

ರವಿಶಾಸ್ತ್ರಿ

ರವಿಶಾಸ್ತ್ರಿ

  • Share this:
    ಭಾರತ ತಂಡ ಈ ಭಾರಿ ಟಿ20 ವಶ್ವಕಪ್​ (T20 World Cup 2021 ) ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಬಲಿಷ್ಠ ತಂಡವನ್ನೂ ರೂಪಿಸಿದೆ. ಅಕ್ಟೋಬರ್​ 24 ರಂದು ಪಾಕಿಸ್ತಾನದ ವಿರುದ್ಧ ಮೊದಲ ಟಿ20 ಪಂದ್ಯ ಆಡುವ ಮೂಲಕ ಭಾರತ ವಿಶ್ವಕಪ್ ಟಿ20 ಅಭಿಯಾನವನ್ನು ಆರಂಭಿಸಲಿದೆ. ಆದರೆ, ಪಾಕ್ (India Vs Pakistan) ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಹೆಚ್ಚುವರಿ ಸೀಮರ್ ಅಥವಾ ಸ್ಪಿನ್ನರ್ ಜೊತೆ ಹೋಗುವುದೇ ಎಂಬ ಕುರಿತು ಈಗಾಗಲೇ ಚರ್ಚೆಗಳು ಶುರುವಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಟೀಂ ಇಂಡಿಯಾ ಕೋಚ್​ ರವಿ ಶಾಸ್ತ್ರಿ (Ravi Shastri), "ಟೀಂ ಇಂಡಿಯಾ ಪಾಕ್ ವಿರುದ್ಧ ಹೆಚ್ಚುವರಿ ಸೀಮರ್ ಅಥವಾ ಸ್ಪಿನ್ ಬೌಲರ್​ ಜೊತೆ ಕಣಕ್ಕಿಳಿಯುವ ವಿಚಾರವನ್ನು ಡ್ಯೂ ಫ್ಯಾಕ್ಟರ್​ (Dew Factor) ನಿರ್ಧರಿಸುತ್ತದೆ" ಎಂದು ತಿಳಿಸಿದ್ದಾರೆ.

    ರವಿ ಶಾಸ್ತ್ರಿ ವಿಶ್ವಕಪ್​ ನಂತರ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಹೀಗಾಗಿ ಇದು ಅವರ ಕೊನೆಯ ಮತ್ತು ಮಹತ್ವದ ವಿಶ್ವಕಪ್ ಟೂರ್ನಿ. ಹೀಗಾಗಿ ಈ ಟೂರ್ನಿಯಲ್ಲಿ ಪ್ರಶಸ್ತಿಯೊಂದಿಗೆ ವಿದಾಯ ಹೇಳಬೇಕಾದ ಅನಿವಾರ್ಯತೆ ರವಿ ಶಾಸ್ತ್ರಿಗೂ ಇದೆ. ಈ ಬಗ್ಗೆಯೂ ಮಾತನಾಡಿರುವ ರವಿ ಶಾಸ್ತ್ರಿ, "ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ಎರಡು ಮಹತ್ವದ ತರಬೇತಿ ಪಂದ್ಯಗಳನ್ನು ಆಡಲಿದ್ದು, ಆಟಗಾರರ ಫಾರ್ಮ್ ಅನ್ನು ಅರ್ಥ ಮಾಡಿಕೊಳ್ಳಲು ಮತ್ತು ಅವರ ಲಯಕ್ಕೆ ಅನುಗುಣವಾಗಿ ತಂಡವನ್ನು ಆಯ್ಕೆ ಮಾಡಲು ಸಹಕಾರಿಯಾಗಿರುತ್ತದೆ" ಎಂದು ತಿಳಿಸಿದ್ದಾರೆ.

    ಪಂದ್ಯದ ರಣತಂತ್ರವನ್ನು ವಿವರಿಸಿದ ರವಿ ಶಾಸ್ತ್ರಿ:

    ಪಾಕಿಸ್ತಾನದ ವಿರುದ್ಧ ವಿಶ್ವಕಪ್​ ಪಂದ್ಯಗಳಲ್ಲಿ ಈವರೆಗೆ ಭಾರತ ಸೋಲನುಭವಿಸಿಲ್ಲ. ಈ ಬಾರಿಯೂ ಪಾಕ್ ವಿರುದ್ಧ ಗೆಲುವು ಸಾಧಿಸಲು ಭಾರತ ಸಾಕಷ್ಟು ರಣತಂತ್ರಗಳನ್ನು ಹೆಣೆದಿದೆ. ಈ ಬಗ್ಗೆಯೂ ಸ್ಟಾರ್​ ಸ್ಪೋರ್ಟ್ಸ್​ ಕಾರ್ಯಕ್ರಮದಲ್ಲಿ ಮಾಜಿ ಆಟಗಾರ ದೀಪ್​ದಾಸ್​ ಗುಪ್ತಾ ಪ್ರಶ್ನೆಗೆ ಉತ್ತರಿಸಿರುವ ರವಿ ಶಾಸ್ತ್ರಿ, "ಪಂದ್ಯ ಆರಂಭಕ್ಕೂ ಮುನ್ನ ಎರಡನೇ ಇನ್ನಿಂಗ್ಸ್​ನಲ್ಲಿ ಅಂಗಳದಲ್ಲಿ ಇಬ್ಬನಿ ಇರಲಿದೆಯೆ? ಎಂಬ ಕುರಿತು ಚಿಂತನೆ ನಡೆಸಲಾಗುವುದು. ಇದನ್ನು ಆಧರಿಸಿ ಟಾಸ್​ ಗೆದ್ದು ಬ್ಯಾಟಿಂಗ್/ಬೌಲಿಂಗ್ ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಲಾಗುವುದು.

    ಇದನ್ನೂ ಓದಿ; OMN vs BAN, T20 WC 2021: ಈ ಪಂದ್ಯವನ್ನೂ ಸೋತರೆ ಬಾಂಗ್ಲಾ ಟೂರ್ನಿಯಿಂದ ಔಟ್; ಗೆದ್ದ ಹುಮ್ಮಸ್ಸಿನಲ್ಲಿ ಓಮನ್!

    ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನೂ ಸಂಜೆ ವೇಳೆಯೇ ಆಡಲಿದೆ. ಈ ವೇಳೆ ಇಬ್ಬನಿ ಪ್ರಮುಖ ಪಾತ್ರ ವಹಿಸಲಿದೆ. ಇಬ್ಬನಿ ಹೆಚ್ಚಿರುವ ಸಂದರ್ಭದಲ್ಲಿ ಸ್ಪಿನ್ ಬೌಲರ್​ಗಳು ಬಾಲ್ ಮೇಲೆ ಹಿಡಿತ ಸಾಧಿಸುವುದು ಕಷ್ಟ. ಹೀಗಾಗಿ ಬ್ಯಾಟ್ಸ್​ಮನ್​ಗಳಿಗೆ ಬ್ಯಾಟಿಂಗ್ ಸುಲಭವಾಗುತ್ತದೆ. ಹೀಗಾಗಿ ಟಾಸ್​ ನಂತರ ಹೆಚ್ಚುವರಿ ಬೌಲರ್​ ಬಗ್ಗೆ ನಿರ್ಧರಿಸಲಾಗುವುದು" ಎಂದು ತಿಳಿಸಿದ್ಧಾರೆ.

    ಐಪಿಎಲ್ ಅನುಭವ ಸಹಾಯಕ್ಕೆ ಬರಲಿದೆ: ಶಾಸ್ತ್ರಿ

    "ಭಾರತೀಯ ಆಟಗಾರರಿಗೆ ಐಪಿಎಲ್ ಸೂಕ್ತ ಪೂರ್ವಸಿದ್ಧತಾ ಟೂರ್ನಿಯಾಗಿದೆ. ಪ್ರಸ್ತುತ ತಂಡದಲ್ಲಿರುವ ಎಲ್ಲರೂ ಹಲವು ಫ್ರಾಂಚೈಸಿಗಳಿಗಾಗಿ ಇದೇ ಅಂಗಳದಲ್ಲಿ ಆಟವಾಡಿದ ಅನುಭವ ಹೊಂದಿದ್ದಾರೆ. ಕಳೆದ ಒಂದು ತಿಂಗಳು ಯುಎಇ ಯಲ್ಲಿ ಭಾರತೀಯ ಆಟಗಾರರು ಬೆವರಿಳಿಸಿದ್ದು ಆ ಅನುಭವ ಇಲ್ಲಿ ಅವರ ಕೈ ಹಿಡಿಯಲಿದೆ. ಹಾಗಾಗಿ ಅವರಿಗೆ ಪಸ್ತುತ ಹೆಚ್ಚು ತಯಾರಿ ಬೇಕು ಎಂದು ನಾನು ಭಾವಿಸುವುದಿಲ್ಲ. ಇನ್ನೂ ಅಭ್ಯಾಸ ಪಂದ್ಯಗಳಿಂದ ತಂಡದಲ್ಲಿ ಪ್ರತಿಯೊಬ್ಬರೂ ಉತ್ತಮ ಪ್ರದರ್ಶನ ನೀಡಿದ್ದಾರೆ. 

    ಇದನ್ನೂ ಓದಿ: T20 World Cup 2021| 'ನಾನು 3ನೇ ಸ್ಥಾನದಲ್ಲೇ ಆಡುತ್ತೇನೆ ಕೆ.ಎಲ್. ರಾಹುಲ್ ಇನ್ನಿಂಗ್ಸ್​ ಆರಂಭಿಸಲಿದ್ದಾರೆ'; ವಿರಾಟ್ ಕೊಹ್ಲಿ

    ಭಾರತದ ಪ್ರತಿಯೊಬ್ಬ ಆಟಗಾರನಿಗೂ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಅವಕಾಶ ಲಭಿಸಿದೆ. ಇಲ್ಲಿ ಆಟಗಾರರು ನೀಡುವ ಪ್ರದರ್ಶನದ ಆಧಾರದ ಮೇಲೆ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡಲಾಗುವುದು" ಎಂದು ರವಿ ಶಾಸ್ತ್ರ ತಿಳಿಸಿದ್ದಾರೆ.
    Published by:MAshok Kumar
    First published: