ಖುಷಿಯಲ್ಲಿದೆ ಆರ್​ಸಿಬಿ; ಅಪ್ಪಟ ಕನ್ನಡಿಗ ದೇವದತ್ ಪಡಿಕ್ಕಲ್ ಎಂಬ ನವತಾರೆಯ ಉದಯ

ಕರ್ನಾಟಕದ ಆಟಗಾರರು ಹೆಚ್ಚಿಲ್ಲದಿದ್ದರೂ ಆರ್​ಸಿಬಿಗೆ ಮನದುಂಬಿ ಬೆಂಬಲಿಸುತ್ತಾ ಬಂದಿರುವ ಫ್ಯಾನ್ಸ್​ಗೆ ಈಗ ತಮ್ಮ ತಂಡವನ್ನು ಬೆಂಬಲಿಸಲು ಕನ್ನಡಿಗನೊಬ್ಬ ಪ್ರಮುಖ ಕಾರಣನಾಗಲಿರುವುದೂ ಗಮನಾರ್ಹ.

Vijayasarthy SN | news18
Updated:December 3, 2019, 10:41 AM IST
ಖುಷಿಯಲ್ಲಿದೆ ಆರ್​ಸಿಬಿ; ಅಪ್ಪಟ ಕನ್ನಡಿಗ ದೇವದತ್ ಪಡಿಕ್ಕಲ್ ಎಂಬ ನವತಾರೆಯ ಉದಯ
ಕರ್ನಾಟಕದ ಆಟಗಾರರು ಹೆಚ್ಚಿಲ್ಲದಿದ್ದರೂ ಆರ್​ಸಿಬಿಗೆ ಮನದುಂಬಿ ಬೆಂಬಲಿಸುತ್ತಾ ಬಂದಿರುವ ಫ್ಯಾನ್ಸ್​ಗೆ ಈಗ ತಮ್ಮ ತಂಡವನ್ನು ಬೆಂಬಲಿಸಲು ಕನ್ನಡಿಗನೊಬ್ಬ ಪ್ರಮುಖ ಕಾರಣನಾಗಲಿರುವುದೂ ಗಮನಾರ್ಹ.
  • News18
  • Last Updated: December 3, 2019, 10:41 AM IST
  • Share this:
ಬೆಂಗಳೂರು: ಈ ವರ್ಷದ ದೇಶೀಯ ಕ್ರಿಕೆಟ್ ಅನ್ನು ಅನುಸರಿಸುತ್ತಿರುವವರಿಗೆ ದೇವದತ್ ಪಡಿಕ್ಕಲ್ ಹೆಸರು ಚಿರಪರಿಚಿತವಾಗಿರುತ್ತದೆ. ಕರ್ನಾಟಕದ 19 ವರ್ಷದ ಯುವ ಪ್ರತಿಭೆ ಪಡಿಕ್ಕಲ್ ಅಕ್ಷರಶಃ ರನ್ ಮೆಷೀನ್ ಎನಿಸಿದ್ದಾರೆ. ರನ್​ಗಳ ಮೇಲೆ ರನ್​ಗಳು, ಶತಕಗಳ ಮೇಲೆ ಶತಕಗಳನ್ನು ಭಾರಿಸಿದ್ಧಾರೆ. ರನ್ ಗಳಿಸುವುದಷ್ಟೇ ಅಲ್ಲ, ಅವರ ಸ್ಟ್ರೈಕಿಂಗ್ ರೇಟ್ ಕೂಡ ಅದ್ಭುತವಾಗಿದೆ. ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿಗೆ ಅವರೇ ಸ್ಟಾರ್ ಆಗುವ ಮುನ್ಸೂಚನೆ ಕಾಣುತ್ತಿದೆ.

ಈ ವರ್ಷದ ವಿಜಯ್ ಹಜಾರೆ ಟ್ರೋಫಿ ಮತ್ತು ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗಳಲ್ಲಿ ಅವರೇ ಲೀಡಿಂಗ್ ಸ್ಕೋರರ್ ಆಗಿದ್ದಾರೆ. ಈ ವರ್ಷ ದೇಶೀಯ ಕ್ರಿಕೆಟ್​ನಲ್ಲಿ 1 ಸಾವಿರ ರನ್ ಗಳಿಸಿದ ಮೊದಲ ಬ್ಯಾಟುಗಾರ ಅವರಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ 11 ಇನ್ನಿಂಗ್ಸಲ್ಲಿ 609 ರನ್ ಗಳಿಸಿ ಪಟ್ಟಿಯಲ್ಲಿ ಅಗ್ರಜನೆನಿಸಿದ್ಧಾರೆ. ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲೂ ಅವರೇ ಟಾಪ್ಪರ್ ಆಗಿದ್ದಾರೆ.

ಇದನ್ನೂ ಓದಿ: ಹೊಸ ವಿಶ್ವ ದಾಖಲೆ: ಒಂದೂ ರನ್ ನೀಡದೆ ಆರು ವಿಕೆಟ್ ಉರುಳಿಸಿದ ಬೌಲರ್

ಕಳೆದ ವರ್ಷ ಭಾರತ ಅಂಡರ್-19 ತಂಡದ ಬಾಗಿಲು ತಟ್ಟುತ್ತಿದ್ದ ದೇವದತ್ ಈಗ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಖಾಯಂ ಸದಸ್ಯರಾಗಿದ್ದಾರೆ. ರಣಜಿ ತಂಡಕ್ಕೂ ಅವರು ಆಯ್ಕೆಯಾಗುವುದು ನಿಶ್ಚಿತವಾಗಿದೆ. ಶೀಘ್ರದಲ್ಲೇ ಅವರು ಟೀಮ್ ಇಂಡಿಯಾಗೆ ಸೇರುವ ಎಲ್ಲಾ ಸಾಧ್ಯತೆಗಳೂ ಗೋಚರಿಸುತ್ತಿವೆ.

ಕಳೆದ ವರ್ಷವೇ ಕೊಹ್ಲಿ ಗಮನ ಸೆಳೆದಿದ್ದರು:

ದೇವದತ್ ಪಡಿಕ್ಕಲ್ ಅವರ ಬೆಳವಣಿಗೆಯು ಕರ್ನಾಟಕ ಕ್ರಿಕೆಟ್ ವಲಯಕ್ಕಷ್ಟೇ ಅಲ್ಲ, ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೂ ಆಸಕ್ತಿಯ ವಿಚಾರವಾಗಿದೆ. ಕಳೆದ ಸೀಸನ್​ನಲ್ಲಿ ದೇವದತ್ ಅವರನ್ನು ಆರ್​ಸಿಬಿ ಖರೀದಿ ಮಾಡಿತ್ತು. ಆದರೆ, ಒಂದೂ ಪಂದ್ಯದಲ್ಲಿ ಆಡಿಸಲಿಲ್ಲ. ಪ್ರಚಂಡ ಬ್ಯಾಟುಗಾರರ ಪಡೆ ಇರುವ ಆರ್​ಸಿಬಿಯಲ್ಲಿ ಪಡಿಕ್ಕಲ್​ಗೆ ಆಡಲು ಅವಕಾಶ ಸಿಗದೇ ಹೋಗಿದ್ದು ಸಹಜವೇ. ಆದರೆ, ತಂಡದ ಅಭ್ಯಾಸ ಅವಧಿಗಳಲ್ಲಿ ಪಡಿಕ್ಕಲ್ ಅವರ ಆಟ ಮತ್ತು ಆ್ಯಟಿಟ್ಯೂಡ್ ಎರಡೂ ವಿರಾಟ್ ಕೊಹ್ಲಿ ಅವರಿಗೆ ಮೆಚ್ಚುಗೆ ಗಳಿಸಿತ್ತಂತೆ. ಕೊಹ್ಲಿ ನಿರೀಕ್ಷೆ ಮತ್ತು ಅಪೇಕ್ಷೆಗೆ ತಕ್ಕಂತೆ ಪಡಿಕ್ಕಲ್ ಈ ವರ್ಷ ಪ್ರಚಂಡ ಆಟವಾಡಿದ್ದಾರೆ. ಮುಂಬರುವ ಋತುವಿನಲ್ಲಿ ಆರ್​ಸಿಬಿಗೆ ಪಡಿಕ್ಕಲ್ ಅವರೇ ಟ್ರಂಪ್ ಕಾರ್ಡ್ ಆದರೆ ಅಚ್ಚರಿ ಇಲ್ಲ.

ಇದನ್ನೂ ಓದಿ: ಅಂಡರ್-19 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ರನ್ ಮೆಷಿನ್ ಪ್ರಿಯಂ ಗರ್ಗ್ ಕ್ಯಾಪ್ಟನ್; ದಾಖಲೆವೀರ ಜೈಸ್ವಾಲ್, ಕರ್ನಾಟಕ ಕುಡಿ ಶುಭಾಂಗ್​ಗೆ ಸ್ಥಾನಮನೀಶ್ ಪಾಂಡೆ ಸ್ಫೂರ್ತಿ:

ಅಪ್ಪಟ ಪ್ರತಿಭೆ ಎನಿಸಿರುವ ದೇವದತ್ ಪಡಿಕ್ಕಲ್ ಅವರಲ್ಲಿ ರಾಕ್ಷಸ ಬದಲಾವಣೆ ಬರಲು ಕಾರಣವಾಗಿದ್ದು ಅಕ್ಟೋಬರ್ ಆರಂಭದಲ್ಲಿ ಹೈದರಾಬಾದ್ ವಿರುದ್ಧ ನಡೆದ ಆ ಒಂದು ಪಂದ್ಯ. ವಿಜಯ್ ಹಜಾರೆ ಟ್ರೋಫಿಯ ಗ್ರೂಪ್ ಪಂದ್ಯದಲ್ಲಿ ಹೈದರಾಬಾದ್​ನ 198 ರನ್​ಗಳ ಅಲ್ಪಮೊತ್ತಕ್ಕೆ ಪ್ರತಿಯಾಗಿ ಕರ್ನಾಟಕ 177 ರನ್​ಗೆ ಆಲೌಟ್ ಆಯಿತು. ಪಡಿಕ್ಕಲ್ 104 ಬಾಲ್​ಗೆ 60 ರನ್ ಗಳಿಸಿ 8ನೆಯವರಾಗಿ ಔಟಾದರು. ಅಲ್ಪಮೊತ್ತದ ಗುರಿ ಇದ್ದ ಕಾರಣ ಪಡಿಕ್ಕಲ್ ತುಸು ನಿರ್ಲಕ್ಷ್ಯದಿಂದ ಬ್ಯಾಟಿಂಗ್ ಮಾಡಿದ್ದರು. ಅವರು ಆಲಸ್ಯದಿಂದ ಔಟಾಗದೇ ಇದ್ದಿದ್ದರೆ ಕರ್ನಾಟಕ ಸುಲಭವಾಗಿ ರನ್ ಚೇಸ್ ಮಾಡಲು ಸಾಧ್ಯವಿತ್ತು.

ಆ ಪಂದ್ಯದ ನಂತರ ದೇವದತ್ ಪಡಿಕ್ಕಲ್ ಅವರಿಗೆ ಒಂದಷ್ಟು ಅಮೂಲ್ಯ ಪಾಠ ಹೇಳಿಕೊಟ್ಟಿದ್ದು ಮನೀಶ್ ಪಾಂಡೆ. ಗುರಿ ಎಷ್ಟೇ ಸುಲಭವಿದ್ದರೂ ಹಗುರವಾಗಿ ತೆಗೆದುಕೊಳ್ಳದೇ ಗೆಲುವಿನ ದಡ ಮುಟ್ಟುವವರೆಗೂ ವಿಕೆಟ್ ಚೆಲ್ಲದೇ ಕ್ರೀಸ್​ನಲ್ಲಿರುವ ಹಪಾಹಪಿ ಇರಬೇಕು ಎಂದು ಪಡಿಕ್ಕಲ್​ಗೆ ಪಾಂಡೆ ಸಲಹೆ ಕೊಟ್ಟರಂತೆ. ಅಂದಿನಿಂದ ಪಡಿಕ್ಕಲ್ ಆಟದಲ್ಲಿ ಗಮನಾರ್ಹ ಬದಲಾವಣೆ ಆಗಿದೆ. ತಂಡವನ್ನು ಗೆಲ್ಲಿಸುವ ಕುದುರೆಯಾಗಿ ಮಾರ್ಪಾಡಾದರು.

ಇದನ್ನೂ ಓದಿ: ನೂತನ ಕ್ರಿಕೆಟ್ ಶಾಟ್​ಗೆ ಏನೆಂದು ಹೆಸರಿಡಬಹುದು?- ವಿಡಿಯೋ ವೈರಲ್

ಈ ಸೀಸನ್​ನಲ್ಲಿ ಹಲವು ಆಟಗಾರರನ್ನು ಕೈಬಿಟ್ಟ ಆರ್​ಸಿಬಿ ತಂಡವು ಕೊಹ್ಲಿ ಸಲಹೆ ಮೇರೆಗೆ ಪಡಿಕ್ಕಲ್ ಅವರನ್ನು ಉಳಿಸಿಕೊಂಡಿದೆ. ದೇಶೀಯ ಚುಟುಕು ಕ್ರಿಕೆಟ್​ನಲ್ಲಿ ಅವರು ಮಾಡಿರುವ ದಾಖಲೆಗಳನ್ನು ತಂಡದ ಮ್ಯಾನೇಜರ್​ಗಳು ಬಹಳ ಅಸ್ಥೆಯಿಂದ ಗಮನಿಸುತ್ತಿದ್ಧಾರೆ. ಮುಂಬರುವ ಐಪಿಎಲ್ ಋತುವಿನಷ್ಟರಲ್ಲಿ ಪಡಿಕ್ಕಲ್ ಅವರು ಸ್ಟಾರ್ ಆಟಗಾರನ ಹಂತಕ್ಕೇರುವುದರಲ್ಲಿ ಸಂಶಯವಿದ್ದಂತಿಲ್ಲ. ಕರ್ನಾಟಕದ ಆಟಗಾರರು ಹೆಚ್ಚಿಲ್ಲದಿದ್ದರೂ ಆರ್​ಸಿಬಿಗೆ ಮನದುಂಬಿ ಬೆಂಬಲಿಸುತ್ತಾ ಬಂದಿರುವ ಫ್ಯಾನ್ಸ್​ಗೆ ಈಗ ತಮ್ಮ ತಂಡವನ್ನು ಬೆಂಬಲಿಸಲು ಕನ್ನಡಿಗನೊಬ್ಬ ಪ್ರಮುಖ ಕಾರಣನಾಗಲಿರುವುದೂ ಕೂಡ ಗಮನಾರ್ಹವೇ.

ಹಾಗೆಯೇ, ಕೆಎಲ್ ರಾಹುಲ್, ಮನೀಶ್ ಪಾಂಡೆ, ಕರುಣ್ ನಾಯರ್, ಮಯಂಕ್ ಅಗರ್ವಾಲ್ ಅವರಂಥ ಘಟಾನುಘಟಿಗಳ ಸಾಲಿಗೆ ಈಗ ದೇವದತ್ ಕೂಡ ಸೇರ್ಪಡೆಯಾಗುತ್ತಿದ್ದಾರೆ. ಟೀಮ್ ಇಂಡಿಯಾಗೆ ಇವರು ಸೇರುವ ದಿನಗಳು ದಿನಗಳು ದೂರವಿಲ್ಲ. ಅದಕ್ಕೂ ಮುನ್ನ ಭಾರತ ಎ ತಂಡದ ಪರ ಕೆಲ ಸರಣಿಗಳನ್ನು ಆಡಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶ ಅವರಿಗೆ ಇದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading