ಕ್ರೀಡೆ

  • associate partner
HOME » NEWS » Sports » CRICKET DEVDUTT PADIKKAL ULTIMATE GOAL IS TO PLAY TEST CRICKET FOR INDIA ZP

Devdutt Padikkal: ಟೆಸ್ಟ್ ಆಡುವುದೇ ನನ್ನ ಗುರಿ: ದೇವದತ್ ಪಡಿಕ್ಕಲ್

ಆರ್​ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದ್ದರು. 5 ಅರ್ಧಶತಕಗಳನ್ನು ಬಾರಿಸಿದ ಯುವ ಆಟಗಾರ ಕೊಹ್ಲಿ ಪಡೆ ಪ್ಲೇ ಆಫ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

news18-kannada
Updated:November 13, 2020, 9:50 PM IST
Devdutt Padikkal: ಟೆಸ್ಟ್ ಆಡುವುದೇ ನನ್ನ ಗುರಿ: ದೇವದತ್ ಪಡಿಕ್ಕಲ್
ದೇವದತ್ ಪಡಿಕ್ಕಲ್
  • Share this:
ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಬ್ಯಾಟ್ಸ್​ಮನ್ ಮುಂದೊಮ್ಮೆ ಟೀಮ್ ಇಂಡಿಯಾ ಪರ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಪಡಿಕ್ಕಲ್, ಒಬ್ಬ ಕ್ರಿಕೆಟರ್​ನನ್ನು ಪರಿಪೂರ್ಣ ಆಟಗಾರ ಎಂದು ವ್ಯಾಖ್ಯಾನಿಸುವುದು ಟೆಸ್ಟ್​ ಕ್ರಿಕೆಟ್​ನ ಪ್ರದರ್ಶನ. ಎಲ್ಲರ ಗುರಿ ಕೂಡ ಅದೇ ಆಗಿರುತ್ತದೆ. ನಾನು ಕೂಡ ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡುವುದನ್ನು ಎದುರು ನೋಡುತ್ತಿದ್ದೇನೆ. ಅದುವೇ ನನ್ನ ಅಂತಿಮ ಗುರಿ ಎಂದು ಹೇಳಿದರು.

ಆರ್​ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಉತ್ತಮ ಆರಂಭ ಒದಗಿಸಿದ್ದರು. 5 ಅರ್ಧಶತಕಗಳನ್ನು ಬಾರಿಸಿದ ಯುವ ಆಟಗಾರ ಕೊಹ್ಲಿ ಪಡೆ ಪ್ಲೇ ಆಫ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅಷ್ಟೇ ಅಲ್ಲದೆ 2008ರ ಚೊಚ್ಚಲ ಐಪಿಎಲ್​ನಲ್ಲಿ ಶಿಖರ್‌ ಧವನ್‌ 4 ಅರ್ಧಶತಕ ಸಿಡಿಸಿದ ದಾಖಲೆ ಹಾಗೂ 2015 ರಲ್ಲಿ ಶ್ರೇಯಸ್ ಅಯ್ಯರ್ 14 ಪಂದ್ಯಗಳಿಂದ 33.8ರ ಸರಾಸರಿಯಲ್ಲಿ 439 ರನ್ ಕಲೆಹಾಕಿದ್ದ ರೆಕಾರ್ಡ್​ನ್ನು  ಪಡಿಕ್ಕಲ್ ತಮ್ಮ ಹೆಸರಿಗೆ ಮುಡಿಗೇರಿಸಿಕೊಂಡಿದ್ದಾರೆ. ಚೊಚ್ಚಲ ಟೂರ್ನಿಯಲ್ಲಿ 379 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 473 ರನ್ ಕಲೆಹಾಕಿ, ಆಡಿದ ಮೊದಲ ಟೂರ್ನಿಯಲ್ಲೇ ಅತಿ ಹೆಚ್ಚು ರನ್‌ ಸಿಡಿಸಿದ ಭಾರತೀಯ ಆಟಗಾರ ಎನಿಸಿಕೊಂಡರು.

ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..!
Published by: zahir
First published: November 13, 2020, 9:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading