Deodhar Trophy: 29 ಎಸೆತಗಳಲ್ಲಿ ಸೂರ್ಯಕುಮಾರ್ ಸಿಡಿಸಿದ ರನ್ ಅಷ್ಟಿಟ್ಟಲ್ಲ; ಫೈನಲ್​​ಗೆ ಭಾರತ ಸಿ

232 ರನ್​ಗಳ ಬೃಹತ್ ಗೆಲುವಿನೊಂದಿಗೆ ಭಾರತ ಸಿ ಫೈನಲ್​ಗೆ ಲಗ್ಗೆಯಿಟ್ಟಿದ್ದು, ಸೋಮವಾರ ಪಾರ್ಥಿವ್ ಪಟೇಲ್ ನೇತೃತ್ವದ ಭಾರತ ಬಿ ವಿರುದ್ಧ ಪ್ರಶಸ್ತಿಗಾಗಿ ಹೋರಟ ನಡೆಸಲಿದೆ.

Vinay Bhat | news18-kannada
Updated:November 2, 2019, 8:14 AM IST
Deodhar Trophy: 29 ಎಸೆತಗಳಲ್ಲಿ ಸೂರ್ಯಕುಮಾರ್ ಸಿಡಿಸಿದ ರನ್ ಅಷ್ಟಿಟ್ಟಲ್ಲ; ಫೈನಲ್​​ಗೆ ಭಾರತ ಸಿ
ಏಕದಿನ ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಿದರೆ ಅಚ್ಚರಿಯಿಲ್ಲ. ಕೇದರ್ ಜಾಧವ್ ಕೈಬಿಟ್ಟು ಸೂರ್ಯಕುಮಾರ್ ಆಯ್ಕೆ ಆಗುವ ಅಂದಾಜಿದೆ.
  • Share this:
ಬೆಂಗಳೂರು (ನ. 02): 48ನೇ ದೇವಧರ್ ಟ್ರೋಫಿ ಏಕದಿನ ಟೂರ್ನಮೆಂಟ್​ನಲ್ಲಿ ಭಾರತ ಎ ತಂಡದ ವಿರುದ್ಧ ಬೃಹತ್ ಅಂತರದ ಗೆಲುವು ಸಾಧಿಸಿ ಭಾರತ ಸಿ ಫೈನಲ್​ಗೆ ಲಗ್ಗೆಯಿಟ್ಟಿದೆ.

ಮಯಾಂಕ್ ಅಗರ್ವಾಲ್ ಹಾಗೂ ಶುಭ್ಮನ್ ಗಿಲ್ ಶತಕದ ಜೊತೆ ಸೂರ್ಯಕುಮಾರ್ ಸಿಡಿಸಿಲಬ್ಬರದ ಬ್ಯಾಟಿಂಗ್ ಮತ್ತು ಜಲಜ್ ಸಕ್ಸೇನಾ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಭಾರತ ಸಿ ತಂಡ 232 ರನ್​ಗಳ ಗೆಲುವು ದಾಖಲಿಸಿತು.

 


ಬಾಂಗ್ಲಾ ವಿರುದ್ಧ ಟಿ20 ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ..!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಸಿ ತಂಡ ಅಂದುಕೊಂಡಂತೆ ಬೊಂಬಾಟ್ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಮಯಾಂಕ್ ಅಗರ್ವಾಲ್ ಹಾಗೂ ನಾಯಕ ಶುಭ್ಮನ್ ಗಿಲ್ ಅದ್ಭುತ ಆಟ ಪ್ರದರ್ಶಿಸಿದರು. ಭಾರತ ಎ ಬೌಲರ್​ಗಳ ಬೆವರಿಳಿಸಿದ ಈ ಜೋಡಿ ಶತಕ ಸಿಡಿಸಿ ಸಂಭ್ರಮಿಸಿ ದ್ವಿಶತಕದ ಜೊತೆಯಾಟ ಆಡಿತು.

ಮೊದಲ ವಿಕೆಟ್​ಗೆನೆ ಈ ಜೋಡಿ 226 ರನ್​ಗಳ ಅಮೋಘ ಜೊತೆಯಾಟ ಆಡಿದರು. ಅಗರ್ವಾಲ್ 111 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್ ಬಾರಿಸಿ 120 ರನ್ ಗಳಿಸಿದರೆ, ಗಿಲ್ 142 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್ ಬಾರಿಸಿ 143 ರನ್ ಕಲೆಹಾಕಿದರು. ಕೊನೆಯಲ್ಲಿ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ ಚೆಂಡನ್ನು ಬೌಂಡರಿ- ಸಿಕ್ಸರ್​​ಗೆ ಅಟ್ಟಿದರು.

ಸ್ಫೋಟಕ ಆಟವಾಡಿದ ಯಾದವ್ ಕೇವಲ 29 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯ 72 ರನ್ ಚಚ್ಚಿದರು. ಈ ಮೂಲಕ ಭಾರತ ಸಿ ತಂಡ 50 ಓವರ್​ಗೆ 3 ವಿಕೆಟ್ ಕಳೆದುಕೊಂಡು 366 ರನ್ ಕಲೆಹಾಕಿತು.

367 ರನ್​ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತ ಎ ಜಲಜ್ ಸಕ್ಸೇನಾ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿದ ವಿಹಾರಿ ಪಡೆ 29.5 ಓವರ್​ನಲ್ಲಿ 134 ರನ್​ಗಳಿಗೆ ಆಲೌಟ್ ಆಯಿತು. ತಂಡದ ಪರ ದೇವದತ್ ಪಡಿಕ್ಕಲ್ 31 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ಸಕ್ಸೇನಾ 9.5 ಓವರ್​ಗೆ 41 ರನ್ ನೀಡಿ 7 ವಿಕೆಟ್ ಕಿತ್ತರು.

KPL Match Fixing: ಮೈದಾನದಿಂದಲೇ ಬ್ಯಾಟ್ಸ್​ಮನ್​ಗಳು ನೀಡುತ್ತಿದ್ದರು ಬುಕ್ಕಿಗಳಿಗೆ ಸನ್ನೆ..! ಸ್ಪೋಟಕ ಮಾಹಿತಿ ಬಹಿರಂಗ

232 ರನ್​ಗಳ ಬೃಹತ್ ಗೆಲುವಿನೊಂದಿಗೆ ಭಾರತ ಸಿ ಫೈನಲ್​ಗೆ ಲಗ್ಗೆಯಿಟ್ಟಿದ್ದು, ಸೋಮವಾರ ಪಾರ್ಥಿವ್ ಪಟೇಲ್ ನೇತೃತ್ವದ ಭಾರತ ಬಿ ವಿರುದ್ಧ ಪ್ರಶಸ್ತಿಗಾಗಿ ಹೋರಟ ನಡೆಸಲಿದೆ. ಇದಕ್ಕೂ ಮೊದಲು ಶನಿವಾರ ಭಾರತ ಬಿ ಹಾಗೂ ಭಾರತ ಸಿ ತಂಡ ಮುಖಾಮುಖಿ ಆಗಲಿದೆ.

First published: November 2, 2019, 8:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading