ಕ್ರೀಡೆ

  • associate partner
HOME » NEWS » Sports » CRICKET DELHI NURSE APPROACHED INDIA PLAYER FOR IPL INSIDE INFORMATION ZP

IPL ತಂಡದ ಆಂತರಿಕ ಮಾಹಿತಿ ಪಡೆಯಲು ಯತ್ನಿಸಿದ್ದ ನರ್ಸ್..!

ಕ್ರಿಕೆಟಿಗನಿಗೂ ನರ್ಸ್​ಗೂ ಮೂರು ವರ್ಷಗಳ ಹಿಂದೆ ಆನ್​ಲೈನ್ ಮೂಲಕ ಪರಿಚಯವಾಗಿತ್ತು. ಈ ವೇಳೆ ನಾನು ದೆಹಲಿ ಮೂಲದ ವೈದ್ಯೆ ಎಂದು ಹೇಳಿಕೊಂಡಿದ್ದರು. ಅಲ್ಲದೆ ಖಾಸಗಿ ಆಸ್ಪತ್ರೆಯನ್ನೂ ಸಹ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಳು.

news18-kannada
Updated:January 5, 2021, 9:59 PM IST
IPL ತಂಡದ ಆಂತರಿಕ ಮಾಹಿತಿ ಪಡೆಯಲು ಯತ್ನಿಸಿದ್ದ ನರ್ಸ್..!
IPL 2021
  • Share this:
ಇಂಡಿಯನ್ ಪ್ರೀಮಿಯರ್‌ ಲೀಗ್‌ ವಿಶ್ವದ ಅತ್ಯಂತ ಶ್ರೀಮಂತ ಟಿ20 ಕ್ರಿಕೆಟ್‌ ಲೀಗ್‌. ಹಲವಾರು ಯುವ ಕ್ರಿಕೆಟಿಗರ ಐಪಿಎಲ್ ಉತ್ತಮ ವೇದಿಕೆ. ಹಲವು ಆಟಗಾರರ ಭವಿಷ್ಯವನ್ನೇ ಈ ಲೀಗ್ ಬದಲಿಸಿದೆ. ಆದರೆ, ಐಪಿಎಲ್‌ಗೂ ಮ್ಯಾಚ್‌ ಫಿಕ್ಸಿಂಗ್‌, ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ನಂತಹ ಭೂತ ಆಗಿಂದ್ದಾಗೆ ಕಾಡುತ್ತಲೇ ಇದೆ.

ಐಪಿಎಲ್ ಸೀಸನ್ 13 ವೇಳೆಯೂ ಮ್ಯಾಚ್ ಫಿಕ್ಸಿಂಗ್ ಸಲುವಾಗಿ ಪ್ರಯತ್ನ ನಡೆಸಿದ್ದರು. ಅಷ್ಟೇ ಅಲ್ಲದೆ ಮೋಸದಾಟ ಸಲುವಾಗಿ ಅನಾಮಿಕರೊಬ್ಬರು ತಮ್ಮನ್ನು ಸಂಪರ್ಕಿಸಿದ್ದರು ಆಟಗಾರನೊಬ್ಬ ಐಪಿಎಲ್‌ ಭ್ರಷ್ಟಾಚಾರ ತಡೆ ವಿಭಾಗದ ಅಧಿಕಾರಿಗಳ ಗಮನಕ್ಕೂ ತಂದಿದ್ದರು ಎಂದು ಕಳೆದ ವರ್ಷ ವರದಿಯಾಗಿತ್ತು. ಇದೀಗ ಅದಕ್ಕೆ ಪುಷ್ಠಿ ನೀಡುವಂತಹ ಮತ್ತೊಂದು ವಿಚಾರ ಬಹಿರಂಗವಾಗಿದೆ.

ಹೌದು, ಐಪಿಎಲ್ 2020 ವೇಳೆ ತಂಡಗಳ ಆಂತರಿಕ ಮಾಹಿತಿಯನ್ನು ಪಡೆಯಲು ಯತ್ನಿಸಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ. ಡೆಲ್ಲಿ ಮೂಲದ ನರ್ಸ್​ ಒಬ್ಬರು ಭಾರತೀಯ ಕ್ರಿಕೆಟಿಗನನ್ನು ಸಂಪರ್ಕಿಸಿ ಐಪಿಎಲ್ ತಂಡದ ಗೌಪ್ಯ ಮಾಹಿತಿಯನ್ನು ಪಡೆಯಲು ಬಯಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

ಭಾರತೀಯ ಕ್ರಿಕೆಟಿಗನನ್ನು ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕಿಸಿದ ಹಲವು ಮಾಹಿತಿಗಳನ್ನು ಕೇಳಿದ್ದರು. ಆದರೆ ಇದಕ್ಕೆ ಪೂರಕವಾಗಿ ಸ್ಪಂದಿಸದ ಕಾರಣ ಮೆಸೇಜ್​ಗಳನ್ನು ಅಳಿಸಿದ್ದಾರೆ.

ಸೆಪ್ಟೆಂಬರ್ 30ರಂದು ಐಪಿಎಲ್ ಟೂರ್ನಿಯ ಮಧ್ಯಭಾಗದಲ್ಲಿ ಈ ಬೆಳವಣಿಗೆ ನಡೆದಿದ್ದು, ದೆಹಲಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಎಂದು ತಿಳಿಸಿ ಮಾಹಿತಿಗಳನ್ನು ಕಲೆಹಾಕುವ ಪ್ರಯತ್ನ ಮಾಡಿದ್ದರು. ಆದರೆ ಕ್ರಿಕೆಟಿಗನ ಕಡೆಯಿಂದ ಯಾವುದೇ ಸೂಕ್ತ ಸ್ಪಂದನೆ ಸಿಗದ ಕಾರಣ ಚಾಟಿಂಗ್ ನಿಲ್ಲಿಸಿದ್ದರು.

ಇನ್ನು ನರ್ಸ್​ ಚಾಟ್ ಮಾಡಿದ್ದು, ಎರಡು ವರ್ಷಗಳ ಹಿಂದೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಆಟಗಾರನನ್ನು. ಈ ವಿಚಾರವನ್ನು ಬಿಸಿಸಿಐ ಭ್ರಷ್ಟಚಾರ ನಿಗ್ರಹ ಘಟಕಕ್ಕೆ ವರದಿ ಮಾಡುವ ಮೂಲಕ ಮೋಸದಾಟಕ್ಕೆ ಸಿಲುಕು ಅಪಾಯದಿಂದ ತಪ್ಪಿಸಿಕೊಂಡರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕ್ರಿಕೆಟಿಗನಿಗೂ ನರ್ಸ್​ಗೂ ಮೂರು ವರ್ಷಗಳ ಹಿಂದೆ ಆನ್​ಲೈನ್ ಮೂಲಕ ಪರಿಚಯವಾಗಿತ್ತು. ಈ ವೇಳೆ ನಾನು ದೆಹಲಿ ಮೂಲದ ವೈದ್ಯೆ ಎಂದು ಹೇಳಿಕೊಂಡಿದ್ದರು. ಅಲ್ಲದೆ ಖಾಸಗಿ ಆಸ್ಪತ್ರೆಯನ್ನೂ ಸಹ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಳು. ಕೊರೋನಾ ಕಾರಣದಿಂದ ವೈರಸ್​ನಿಂದ ತೆಗೆದುಕೊಳ್ಳಬೇಕಾದ ಮುನ್ನಚ್ಚೆರಿಕಾ ಕ್ರಮಗಳ ಬಗ್ಗೆ ಆಕೆಯಿಂದ ಮಾಹಿತಿ ಪಡೆದುಕೊಂಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
Youtube Video

ಈ ವರದಿ ಬಗ್ಗೆ ಬಿಸಿಸಿಐ ಭ್ರಷ್ಟಾಚಾರ ವಿರೋಧಿ ಘಟಕದ ಮುಖ್ಯಸ್ಥ ಅಜಿತ್ ಸಿಂಗ್ ಸಹ ಖಚಿತಪಡಿಸಿದ್ದು, ಈ ಪ್ರಕರಣ ಈಗ ಅಂತ್ಯವಾಗಿದೆ ಎಂದಿದ್ದಾರೆ. ಮಾಹಿತಿ ಕಲೆಹಾಕಲು ಯತ್ನಿಸಿರುವ ಘಟನೆ ಬಗ್ಗೆ ಆಟಗಾರ ಐಪಿಎಲ್ ಸಂದರ್ಭದಲ್ಲಿಯೇ ಮಾಹಿತಿ ನೀಡಿದ್ದರು. ಹೀಗಾಗಿ ನಾವು ಪ್ರಕರಣವನ್ನು ತನಿಖೆ ನಡೆಸಿದ್ದೇವೆ. ಆದರೆ ವಿವರ ಕಲೆಹಾಕಲು ಯತ್ನಿಸಿದ ಮಹಿಳೆಯನ್ನು ವಿಚಾರಣೆ ನಡೆಸಲಾಗಿದ್ದು, ಆಕೆಯಿಂದ ಹೆಚ್ಚಿನ ಮಾಹಿತಿ ದೊರೆತಿಲ್ಲ. ಹೀಗಾಗಿ ಪ್ರಕರಣವನ್ನು ಅಂತ್ಯಗೊಳಿಸಲಾಗಿದೆ ಎಂದಿದ್ದಾರೆ.
Published by: zahir
First published: January 5, 2021, 9:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories