IPL 2020: ರಾಜಸ್ಥಾನ್ ರಾಯಲ್ಸ್​ ತಂಡದ ಸ್ಟಾರ್ ಆಟಗಾರನ ಖರೀದಿಗೆ ಮುಂದಾದ ಡೆಲ್ಲಿ

ಡೆಲ್ಲಿ ಕ್ಯಾಪಿಟಲ್ಸ್‌ ಜೆಎಸ್‌ಡಬ್ಲ್ಯು ಸಮೂಹದ ಮಾಲೀಕತ್ವದಲ್ಲಿದ್ದು, ಕಳೆದ ಆವೃತ್ತಿಯಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದಿಂದ ಶಿಖರ್‌ ಧವನ್‌ ಅವರನ್ನು ಖರೀದಿ ಮಾಡಿತ್ತು.

Vinay Bhat | news18
Updated:August 13, 2019, 10:46 AM IST
IPL 2020: ರಾಜಸ್ಥಾನ್ ರಾಯಲ್ಸ್​ ತಂಡದ ಸ್ಟಾರ್ ಆಟಗಾರನ ಖರೀದಿಗೆ ಮುಂದಾದ ಡೆಲ್ಲಿ
ಡೆಲ್ಲಿ ಕ್ಯಾಪಿಟಲ್ಸ್​ ತಂಡ
  • News18
  • Last Updated: August 13, 2019, 10:46 AM IST
  • Share this:
ಬೆಂಗಳೂರು (ಆ. 13): ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಕೆಲ ತಂಡಗಳ ಫ್ರಾಂಚೈಸಿಗಳು ಈಗಿನಿಂದಲೆ ಕೆಲಸ ಶುರು ಮಾಡಿವೆ.

ಮಾಹಿತಿಯ ಪ್ರಕಾರ ರಾಜಸ್ಥಾನ್‌ ರಾಯಲ್ಸ್‌ ತಂಡದ ಮಾಜಿ ನಾಯಕ ಹಾಗೂ ಸ್ಟಾರ್‌ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಅವರನ್ನು 2020ರ ಐಪಿಎಲ್‌ ಟೂರ್ನಿಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ರಾಯಲ್ಸ್‌ ಫ್ರಾಂಚೈಸಿ ಜೊತೆಗೆ ಮಾತುಕತೆಯಲ್ಲಿ ತೊಡಗಿದೆ.

Delhi Capitals in talks with Rajasthan Royals to seal Ajinkya Rahane deal
ಅಜಿಂಕ್ಯ ರಹಾನೆ


'ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಹಾನೆ ಅವರನ್ನು ತೆಗೆದುಕೊಳ್ಳುವ ಸಲುವಾಗಿ ಮಾತುಕತೆ ಚಾಲ್ತಿಯಲ್ಲಿದೆ. ಆದರೆ, ಈ ವಿಚಾರವಾಗಿ ಸದ್ಯಕ್ಕೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ರಹಾನೆ ರಾಯಲ್ಸ್‌ ತಂಡದ ಪ್ರಮುಖ ಆಟಗಾರ. ಮಾತುಕತೆ ನಡೆಯುತ್ತಿರುವುದು ನಿಜ' ಎಂದು ಡೆಲ್ಲಿ ತಂಡದ ಆಪ್ತರಿಂದ ತಿಳಿದುಬಂದಿದೆ.

ಏಕದಿನದಲ್ಲಿ ಕೊಹ್ಲಿ ಒಟ್ಟು ಎಷ್ಟು ಶತಕ ಸಿಡಿಸಬಹುದು?; ಮಾಜಿ ಆಟಗಾರ ಕೊಟ್ಟ ಉತ್ತರ ನೀವೆ ಕೇಳಿ

ಡೆಲ್ಲಿ ಕ್ಯಾಪಿಟಲ್ಸ್‌ ಜೆಎಸ್‌ಡಬ್ಲ್ಯು ಸಮೂಹದ ಮಾಲೀಕತ್ವದಲ್ಲಿದ್ದು, ಕಳೆದ ಆವೃತ್ತಿಯಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದಿಂದ ಶಿಖರ್‌ ಧವನ್‌ ಅವರನ್ನು ಖರೀದಿ ಮಾಡಿತ್ತು. ಕಳೆದ ಆವೃತ್ತಿಯಲ್ಲಿ ಹೊಸ ಹೆಸರು ನಾಮಕರಣ ಮಾಡಿ ಹುರುಪಿನಿಂದ ಕಣಕ್ಕೆ ಇಳಿದ ಡೆಲ್ಲಿ 20012ರ ಬಳಿಕ ಮೊದಲ ಬಾರಿಗೆ ಪ್ಲೇ ಆಫ್​ಗೆ ಲಗ್ಗೆಯಿಟ್ಟಿತ್ತು. ಈ ಬಾರಿ ಕಪ್ ಗೆಲ್ಲುವ ಕನಸು ತೊಟ್ಟಿರುವ ಡೆಲ್ಲಿ ಪ್ರಮುಖ ಆಟಗಾರರನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳುವ ಅಂದಾಜಿನಲ್ಲಿದೆ.

ಐಪಿಎಲ್ ಮೊದಲ ಹಾಗೂ ಎರಡನೇ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿದ್ದ ರಹಾನೆ,  2011ರಲ್ಲಿ ರಾಜಸ್ಥಾನ್‌ ರಾಯಲ್ಸ್​ ತಂಡ ಸೇರಿದ್ದರು. ಆ ಬಳಿಕ ಆರ್​ಆರ್​ ಪರವೇ ರಹಾನೆ ಆಡುತ್ತಿದ್ದಾರೆ. ಐಪಿಎಲ್​ನಲ್ಲಿ ಒಟ್ಟು 140 ಪಂದ್ಯಗಳನ್ನು ರಹಾನೆ ಆಡಿದ್ದು 3820 ರನ್ ಕಲೆಹಾಕಿದ್ದಾರೆ. ಇದರಲ್ಲಿ 2 ಶತಕ ಹಾಗೂ 27 ಅರ್ಧಶತಕ ಸೇರಿವೆ. 105 ಗರಿಷ್ಠ ಇವರು ಬಾರಿಸಿದ ಗರಿಷ್ಠ ಸ್ಕೋರ್ ಆಗಿದೆ.
Loading...

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...