HOME » NEWS » Sports » CRICKET DELHI CAPITALS CREATE UNIQUE RECORD IN IPL HISTORY ZP

IPL ಇತಿಹಾಸದಲ್ಲೇ ವಿಶಿಷ್ಟ ದಾಖಲೆ ಬರೆದಿದ್ದ ಡೆಲ್ಲಿ ಕ್ಯಾಪಿಟಲ್ಸ್..!

ರಿಷಭ್ ಪಂತ್ (ನಾಯಕ), ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಅವೇಶ್ ಖಾನ್, ಅಕ್ಸರ್ ಪಟೇಲ್, ಇಶಾಂತ್ ಶರ್ಮಾ, ಕಗಿಸೊ ರಬಾಡ, ಪೃಥ್ವಿ ಶಾ, ಆರ್ ಅಶ್ವಿನ್,

news18-kannada
Updated:April 2, 2021, 10:31 PM IST
IPL ಇತಿಹಾಸದಲ್ಲೇ ವಿಶಿಷ್ಟ ದಾಖಲೆ ಬರೆದಿದ್ದ ಡೆಲ್ಲಿ ಕ್ಯಾಪಿಟಲ್ಸ್..!
Delhi capitals
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ 13 ವರ್ಷಗಳು ಕಳೆದಿವೆ. ಈ ಹದಿಮೂರು ಆವೃತ್ತಿಗಳಲ್ಲಿ ಕಪ್ ಗೆಲ್ಲದೇ ಉಳಿದಿರುವ ಮೂರು ತಂಡಗಳೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು. ಅದರಲ್ಲೂ 12 ಸೀಸನ್​ಗಳ ಬಳಿಕ ಫೈನಲ್ ಪ್ರವೇಶಿಸಿದ ಏಕೈಕ ತಂಡವೆಂದರೆ ಅದು ಡೆಲ್ಲಿ ಕ್ಯಾಪಿಟಲ್ಸ್​. ಕಳೆದ ಬಾರಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್​ನಲ್ಲಿ ಅಪರೂಪದ ದಾಖಲೆಯನ್ನು ಬರೆದಿತ್ತು.

ಹೌದು, ಇಂಡಿಯನ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲಿ ಅಂಕ ಪಟ್ಟಿಯ ಎಲ್ಲಾ ಶ್ರೇಯಾಂಕವನ್ನು ಅಲಂಕರಿಸಿದ ಏಕೈಕ ತಂಡ ಎಂಬ ದಾಖಲೆ ಡೆಲ್ಲಿ ಹೆಸರಿನಲ್ಲಿದೆ. 2008 ರ ಚೊಚ್ಚಲ ಐಪಿಎಲ್​ನಲ್ಲಿ 4ನೇ ಸ್ಥಾನ ಪಡೆದಿದ್ದ ಡೆಲ್ಲಿ, 2009 ರಲ್ಲಿ 1ನೇ ಅಲಂಕರಿಸಿತ್ತು. 2010 ರಲ್ಲಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದೊಂದಿಗೆ ಟೂರ್ನಿ ಅಂತ್ಯಗೊಳಿಸಿದರೆ, 2011 ರಲ್ಲಿ 10ನೇ ಅಲಂಕರಿಸಿತ್ತು. 2012 ರಲ್ಲಿ ಮತ್ತೆ 4ನೇ ಸ್ಥಾನ ಪಡೆದ ಡೆಲ್ಲಿ ತಂಡ, 2013 ರಲ್ಲಿ 9ನೇ ಸ್ಥಾನದೊಂದಿಗೆ ವಿದಾಯ ಹೇಳಿತ್ತು. ಇನ್ನು 2014 ರಲ್ಲಿ 8ನೇ ಸ್ಥಾನ ಪಡೆದರೆ, 2015 ರಲ್ಲಿ 7ನೇ ಸ್ಥಾನಗಳಿಸಲಷ್ಟೇ ಶಕ್ತರಾದರು.

2016 ಮತ್ತು 2017 ರಲ್ಲಿ 6ನೇ ಸ್ಥಾನ ಪಡೆದ ಡೆಲ್ಲಿ ತಂಡವು 2018 ರಲ್ಲಿ 8ನೇ ಸ್ಥಾನದೊಂದಿಗೆ ಟೂರ್ನಿಯನ್ನು ಮುಗಿಸಿತ್ತು. 2019 ರಲ್ಲಿ 3ನೇ ಸ್ಥಾನದೊಂದಿಗೆ ಪ್ಲೇ ಆಫ್ ಆಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 2020 ರ ಐಪಿಎಲ್​ನಲ್ಲಿ 2ನೇ ಸ್ಥಾನ ಅಲಂಕರಿಸುವ ಮೂಲಕ ಲೀಗ್ ಹಂತದ ಪಂದ್ಯಗಳನ್ನು ಮುಗಿಸಿತ್ತು. ಅಂದಹಾಗೆ 2011-2013 ರ ನಡುವಿನ ಐಪಿಎಲ್​ನಲ್ಲಿ 10 ತಂಡಗಳು ಭಾಗವಹಿಸಿದ್ದವು. ಈ ವೇಳೆ ಡೆಲ್ಲಿ ತಂಡವು 9ನೇ ಹಾಗೂ 10ನೇ ಸ್ಥಾನ ಪಡೆದುಕೊಂಡಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅಂಕಪಟ್ಟಿಯ ಎಲ್ಲಾ ಶ್ರೇಯಾಂಕದಲ್ಲೂ ಸ್ಥಾನ ಪಡೆದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಡೆಲ್ಲಿ ಕ್ಯಾಪಿಟಲ್ಸ್ ಹೆಸರಿನಲ್ಲಿದೆ.

ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀಗಿದೆ​: ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಅವೇಶ್ ಖಾನ್, ಅಕ್ಸರ್ ಪಟೇಲ್, ಇಶಾಂತ್ ಶರ್ಮಾ, ಕಗಿಸೊ ರಬಾಡ, ಪೃಥ್ವಿ ಶಾ, ಆರ್ ಅಶ್ವಿನ್, ರಿಷಭ್ ಪಂತ್ (ನಾಯಕ), ಶಿಖರ್ ಧವನ್, ಲಲಿತ್ ಯಾದವ್, ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಸ್ಟೀವ್ ಸ್ಮಿತ್, ಉಮೇಶ್ ಯಾದವ್ , ರಿಪಾಲ್ ಪಟೇಲ್, ಲುಕ್ಮನ್ ಹುಸೇನ್ ಮೆರಿವಾಲಾ, ಎಂ ಸಿದ್ಧಾರ್ಥ್, ಟಾಮ್ ಕುರ್ರನ್, ಸ್ಯಾಮ್ ಬಿಲ್ಲಿಂಗ್ಸ್
Published by: zahir
First published: April 2, 2021, 10:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories