IPL: ಡೆಲ್ಲಿ ಕ್ಯಾಪಿಟಲ್ಸ್​ಗೆ ನಾಯಕನ ಹೆಸರು ಘೋಷಣೆ ಮಾಡಿದ ಫ್ರಾಂಚೈಸಿ; ಯಾರು ಗೊತ್ತಾ ಕ್ಯಾಪ್ಟನ್?

ರಹಾನೆ, ಧವನ್, ಅಶ್ವಿನ್, ಪಂತ್ ರಂತಹ ಸ್ಟಾರ್ ಆಟಗಾರರಿರುವ ತಂಡವನ್ನು 2020ರ ಐಪಿಎಲ್​ನಲ್ಲಿ ಯಾರು ಮುನ್ನಡೆಸಲಿದ್ದಾರೆ ಎಂಬ ಮಾಹಿತಿಯನ್ನು ಡೆಲ್ಲಿ ಫ್ರಾಂಚೈಸಿ ನೀಡಿದೆ.

Vinay Bhat | news18-kannada
Updated:November 19, 2019, 11:03 AM IST
IPL: ಡೆಲ್ಲಿ ಕ್ಯಾಪಿಟಲ್ಸ್​ಗೆ ನಾಯಕನ ಹೆಸರು ಘೋಷಣೆ ಮಾಡಿದ ಫ್ರಾಂಚೈಸಿ; ಯಾರು ಗೊತ್ತಾ ಕ್ಯಾಪ್ಟನ್?
ಡೆಲ್ಲಿ ಕ್ಯಾಪಿಟಲ್ಸ್
  • Share this:
ಬೆಂಗಳೂರು (ನ. 19): ಐಪಿಎಲ್ 13ನೇ ಆವೃತ್ತಿಗಾಗಿ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ಸಿದ್ಧತೆ ಮಾಡುತ್ತಿದೆ. ಈಗಾಗಲೇ ತನ್ನಲ್ಲಿ ಉಳಿಸಿಕೊಂಡ ಹಾಗೂ ರಿಲೀಸ್ ಮಾಡಿದ ಆಟಗಾರರ ಬಗ್ಗೆ ಎಲ್ಲಾ ತಂಡ ಮಾಹಿತಿ ನೀಡಿದ್ದಾಗಿದೆ. ಡಿಸೆಂಬರ್ 19 ರಂದು ನಡೆಯಲಿರುವ ಹರಾಜು ಪ್ರಕ್ರಿಯೆಯತ್ತ ಎಲ್ಲಾ ಫ್ರಾಂಚೈಸಿ ಚಿತ್ತ ನೆಟ್ಟಿದೆ.

ಈ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹರಾಜಿಗೂ ಮುನ್ನವೇ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ರವಿಚಂದ್ರನ್ ಅಶ್ವಿನ್ ಹಾಗೂ ಅಜಿಂಕ್ಯಾ ರಹಾನೆಯನ್ನು ಈಗಾಗಲೇ ತನ್ನ ತಂಡಕ್ಕೆ ಸೇರಿಸಿಕೊಂಡಿರುವ ಡೆಲ್ಲಿಗೆ ಆನೆ ಬಲ ಬಂದಂತಾಗಿದೆ.

ಡೆಲ್ಲಿ ಬಳಿ 27.85 ಕೋಟಿ ರೂ ಬಾಕಿ ಉಳಿದಿದೆ. ಹೀಗಾಗಿ ಹರಾಜಿನಲ್ಲಿ ಪ್ರಮುಖ ಸ್ಟಾರ್ ಆಟಗಾರರನ್ನು ಖರೀದಿ ಮಾಡುವ ಅಂದಾಜಿದೆ.

 ತನ್ನನ್ನು ಕೈಬಿಟ್ಟ ಕೆಕೆಆರ್​ಗೆ ಸ್ಫೋಟಕ ಉತ್ತರ ನೀಡಿದ ಲಿನ್; 30 ಎಸೆತಗಳಲ್ಲಿ ಸಿಡಿಸಿದ ರನ್ ಎಷ್ಟು ಗೊತ್ತಾ?

ಈ ನಡುವೆ ಡೆಲ್ಲಿ ಫ್ರಾಂಚೈಸಿ 2020ರ ಐಪಿಎಲ್​ನಲ್ಲಿ ತಮ್ಮ ತಂಡವನ್ನು ಮುನ್ನಡೆಸಲಿರುವ ನಾಯಕನ ಹೆಸರನ್ನು ಘೋಷಣೆ ಮಾಡಿದೆ. ರಹಾನೆ, ಧವನ್, ಅಶ್ವಿನ್, ಪಂತ್ ರಂತಹ ಸ್ಟಾರ್ ಆಟಗಾರರಿರುವ ತಂಡವನ್ನು ಶ್ರೇಯಸ್ ಐಯರ್ ಮುನ್ನಡೆಸಲಿದ್ದಾರೆ ಎಂದು ಡೆಲ್ಲಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹೇಳಿದೆ.

"ರಹಾನೆ ಹಾಗೂ ಅಶ್ವಿನ್​ರಂತಹ ಅನುಭವಿ ಆಟಗಾರರ ಜೊತೆ ಕಣಕ್ಕಿಳಿಯಲು ಉತ್ಸುಕನಾಗಿದ್ದೇನೆ. ಡೆಲ್ಲಿ ನಾಯಕನಾಗಿ 2020 ಐಪಿಎಲ್ ಅನ್ನು ಮುನ್ನಡೆಸಲಿರುವೆ. ಟ್ರೋಫಿ ಗೆಲ್ಲುವುದು ನಮ್ಮ ಉದ್ದೇಶ" ಎಂದು ಐಯರ್ ಹೇಳಿದ್ದಾರೆ. ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದ ಐಯರ್ ಕಳೆದ ಸೀಸನ್​ನಲ್ಲಿ ಕ್ವಾಲಿಫೈಯರ್ ವರೆಗೆ ಕೊಂಡೊಯ್ಯಿದಿದ್ದರು.

 ನಾವು ಟ್ರೋಫಿ ಗೆಲ್ಲಲು ಈ ಇಬ್ಬರನ್ನೇ ಅವಲಂಬಿಸಬಾರದು ಎಂದ ಆರ್​ಸಿಬಿ ಸ್ಟಾರ್ ಆಟಗಾರ

ಡೆಲ್ಲಿ ಬಿಡುಗಡೆ ಮಾಡಿದ ಆಟಗಾರರು: ಕ್ರಿಸ್ ಮೊರೀಸ್, ಕಾಲಿನ್ ಇನ್​ಗ್ರಾಂ, ಹನುಮಾ ವಿಹಾರಿ, ಅಂಕುಶ್ ಬಯಾನ್ಸ್, ಕಾಲಿನ್ ಮುನ್ರೋ, ಬಿ ಅಯ್ಯಪ್ಪ, ಮನ್​ಜೊತ್ ಕಲ್ರಾ, ಜಲಜ್ ಸಕ್ಸೆನಾ, ನಾಥು ಸಿಂಗ್.

ತನ್ನಲ್ಲೆ ಉಳಿಸಿಕೊಂಡ ಆಟಗಾರರು: ಶ್ರೇಯಸ್ ಐಯರ್, ಪೃಥ್ವಿ ಶಾ, ಶಿಖರ್ ಧವನ್, ರಿಷಭ್ ಪಂತ್, ಇಶಾಂತ್ ಶರ್ಮಾ, ಅಮಿತ್ ಮಿಶ್ರಾ, ಆವೇಶ್ ಖಾನ್, ಸಂದೀಪ್ ಲಾಮಿಚಾಮೆ, ಕಗಿಸೊ ರಬಾಡ, ಕೀಮೊ ಪಾಲ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಆರ್. ಅಶ್ವಿನ್, ಅಜಿಂಕ್ಯಾ ರಹಾನೆ.

First published:November 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading