ವಿಶ್ವಕಪ್ ಆರಂಭವಾಗಿ ಇಷ್ಟು ದಿನ ಕಳೆದರು ಭಾರತಕ್ಕೆ ಒಂದೇ ಒಂದು ಪಂದ್ಯವಿಲ್ಲ; ಯಾಕೆ ಗೊತ್ತಾ?

India vs South Africa: ಜೂ. 5ರಂದು ದ. ಆಫ್ರಿಕಾಕ್ಕೆ ಮೂರನೇ ಪಂದ್ಯವಾದರೆ ಭಾರತಕ್ಕೆ ಮೊದಲನೇ ಪಂದ್ಯ. ಇಷ್ಟು ದಿನ ಕಳೆದು ಭಾರತಕ್ಕೆ ಪಂದ್ಯ ಆಯೋಜನೆ ಮಾಡಿರುವ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದರು. ಸದ್ಯ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಟೀಂ ಇಂಡಿಯಾ ಆಟಗಾರರು

ಟೀಂ ಇಂಡಿಯಾ ಆಟಗಾರರು

  • News18
  • Last Updated :
  • Share this:
ಬೆಂಗಳೂರು (ಜೂ. 03): 12ನೇ ಆವೃತ್ತಿಯ ವಿಶ್ವಕಪ್ ಆರಂಭವಾಗಿ ಅದಾಗಲೆ ಐದು ದಿನಗಳು ಕಳೆದಿವೆ, ಆರನೇ ಪಂದ್ಯ ನಡೆಯುತ್ತಿದೆ. ಕೆಲವು ತಂಡಗಳು ಎರಡೆರಡು ಪಂದ್ಯಗಳನ್ನು ಆಡಿ ಮುಗಿಸಿವೆ. ಆದರೆ ಟೀಂ ಇಂಡಿಯಾ ಮಾತ್ರ ಈವರೆಗೆ ಒಂದು ಪಂದ್ಯವನ್ನೂ ಆಡಲಿಲ್ಲ. ಜೂನ್ 5ಕ್ಕೆ ಅಂದರೆ ವಿಶ್ವಕಪ್ ಆರಂಭವಾಗಿ ಒಂದು ವಾರ ಕಳೆದ ನಂತರ ಬಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

ದಕ್ಷಿಣ ಆಫ್ರಿಕಾಕ್ಕೆ ಇದು ಮೂರನೇ ಪಂದ್ಯವಾದರೆ ಭಾರತಕ್ಕೆ ಇದು ಮೊದಲ ಪಂದ್ಯ. ಹೀಗಾಗಿ ಇಷ್ಟು ದಿನ ಕಳೆದು ಭಾರತಕ್ಕೆ ಪಂದ್ಯ ಆಯೋಜನೆ ಮಾಡಿರುವ ಬಗ್ಗೆ ಅನೇಕರು ಪ್ರಶ್ನೆ ಕೂಡ ಮಾಡಿದ್ದರು. ಸದ್ಯ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಟೀಂ ಇಂಡಿಯಾ ಆಟಗಾರರು ಸುಮಾರು ಒಂದೂವರೆ ತಿಂಗಳುಗಳ ಕಾಲ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದರು. ಐಪಿಎಲ್ ಮುಗಿದ ಬೆನ್ನಲ್ಲೆ ವಿಶ್ವಕಪ್​ಗಾಗಿ ಇಂಗ್ಲೆಂಡ್​ಗೆ ತೆರಳಬೇಕಾಗಿತ್ತು. ಹೀಗಾಗಿ ಲೋಧ ಸಮಿತಿ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಮನಗಂಡು 15 ದಿನಗಳ ಕಾಲ ವಿರಾಮ ನೀಡಿತ್ತು.

ಇದನ್ನೂ ಓದಿ: Cricket World Cup 2019, ENG vs PAK: ಬ್ಯಾಟಿಂಗ್​ನಲ್ಲಿ ಪಾಕ್ ಭರ್ಜರಿ ಕಮ್​​ಬ್ಯಾಕ್; ಇಂಗ್ಲೆಂಡ್​ಗೆ 349 ಟಾರ್ಗೆಟ್

ಇದರ ಅನ್ವಯ ಭಾರತ ವಿಶ್ವಕಪ್​ನಲ್ಲಿ ತನ್ನ ಮೊದಲ ಪಂದ್ಯವನ್ನು ಜೂನ್ 2ಕ್ಕೆ ಆಡಬೇಕಿತ್ತು. ಆದರೆ, ಬಿಸಿಸಿಐ ಭಾರತೀಯ ಆಟಗಾರರಿಗೆ ಇನ್ನುಂದಿಷ್ಟು ದಿನಗಳ ಕಾಲ ವಿಶ್ರಾಂತಿ ಬೇಕು ಎಂದು ಐಸಿಸಿ ಬಳಿ ಮನವಿ ಮಾಡಿತ್ತು. ಹೀಗಾಗಿ ಅಂತಿಮವಾಗಿ ಐಸಿಸಿ ಟೀಂ ಇಂಡಿಯಾ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 5ಕ್ಕೆ ಆಯೋಜಿಸಿದೆಯಂತೆ.

ಸದ್ಯ ಟೀಂ ಇಂಡಿಯಾ ಆಟಗಾರರು ವಿಶ್ರಾಂತಿಯಿಂದ ಹೊರಬಂದು ಮೈದಾನದಲ್ಲಿ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ಸತತ ಎರಡು ಪಂದ್ಯ ಸೋತಿರುವ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಜೂನ್ 5 ರಂದು ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ: AB de Villiers: ಸತತ ಎರಡು ಸೋಲು; ನಿವೃತ್ತ ಆಟಗಾರನನ್ನು ಮತ್ತೆ ಕರೆಸಲಿದೆ ದಕ್ಷಿಣ ಆಫ್ರಿಕಾ?

First published: