42 ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸಿ ಬೌಲರ್ ದೀಪಕ್ ಚಹಾರ್ ಬಾರಿಸಿದ ರನ್ ಎಷ್ಟು ಗೊತ್ತಾ?

ದೀಪಕ್ ಚಹಾರ್ 42 ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸಿ ಅರ್ಧಶತಕ ಬಾರಿಸಿ ಅಜೇಯ 55 ರನ್ ಚಚ್ಚಿದರು. ಈ ಮೂಲಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಟಿ-20 ಟೂರ್ನಿಯಲ್ಲಿ ರಾಜಸ್ಥಾನ್ ಪರ ಒಂದೇ ಒಂದು ಫೋರ್ ಬಾರಿಸಿದೆ 7 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್​ಮನ್ ಚಹಾರ್​ ಎನಿಸಿಕೊಂಡರು.

Vinay Bhat | news18-kannada
Updated:November 28, 2019, 11:27 AM IST
42 ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸಿ ಬೌಲರ್ ದೀಪಕ್ ಚಹಾರ್ ಬಾರಿಸಿದ ರನ್ ಎಷ್ಟು ಗೊತ್ತಾ?
ದೀಪಕ್ ಚಹರ್
  • Share this:
ಸೂರತ್ (ನ. 28): ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಟೂರ್ನಿಯಲ್ಲಿ ರಾಜಸ್ಥಾನ್ ತಂಡ ಸೆಮಿ ಫೈನಲ್​ಗೆ ಲಗ್ಗೆಯಿಟ್ಟಿದೆ. ನಿನ್ನೆ ನಡೆದ ಸೂಪರ್ ಲೀಗ್​ನ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ನಾಯಕ ದೀಪಕ್ ಚಹಾರ್​ರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್​ಗಳ ನೆರವಿನಿಂದ ರಾಜಸ್ಥಾನ್ 2 ರನ್​ಗಳ ರೋಚಕ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್ ಶುರು ಮಾಡಿದ ರಾಜಸ್ಥಾನ್ 50 ರನ್ ಆಗುವ ಹೊತ್ತಿಗೆನೆ ತನ್ನ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮನಂದರ್ ಸಿಂಗ್(0), ಅಂಕಿತ್ ಲಂಬಾ(5), ಮಹಿಪಾಲ್ ಮುಮ್ರೂರ್(0) ಸೇರಿ ಪ್ರಮುಖ ಬ್ಯಾಟ್ಸ್​ಮನ್​ಗಳು ಆರಂಭದಲ್ಲೇ ಪೆವಿಲಿಯನ್ ಸೇರಿಕೊಂಡರು. ರಾಜೇಶ್ ಬಿಶೋನಿ 36 ರನ್ ಗಳಿಸಿ ನಿರ್ಗಮಿಸಿದರು.

Deepak Chahar smashes seven sixes in the Syed Mushtaq Ali Trophy game against Delhi
ದೀಪಕ್ ಚಹಾರ್


ಇಂತಹ ಕಠಿಣ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಿದ್ದು ದೀಪಕ್ ಚಹಾರ್. ನಾಯಕನ ಆಟವಾಡಿದ ಚಹಾರ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಒಂದುಕಡೆ ವಿಕೆಟ್ ಉರುಳುತ್ತಿದ್ದರೆ ಇತ್ತ ಚಹಾರ್ ಸಿಕ್ಸರ್​ಗಳ ಮಳೆ ಸುರಿಸುತ್ತಿದ್ದರು. ಕೊನೆಯವರೆಗೆ ಚಹಾರ್ ಹೋರಾಟ ನಡೆಸಿದ ಪರಿಣಾಮ ರಾಜಸ್ಥಾನ್ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿತು.

Syed Mushtaq Ali: ಪಂಬಾಬ್ ಪರ ಆಡಿ ಕರ್ನಾಟಕವನ್ನು ಸೆಮಿ ಫೈನಲ್​ಗೇರಿಸಿದ ಆರ್​ಸಿಬಿ ಆಟಗಾರ!

ದೀಪಕ್ ಚಹಾರ್ 42 ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸಿ ಅರ್ಧಶತಕ ಬಾರಿಸಿ ಅಜೇಯ 55 ರನ್ ಚಚ್ಚಿದರು. ಈ ಮೂಲಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಟಿ-20 ಟೂರ್ನಿಯಲ್ಲಿ ರಾಜಸ್ಥಾನ್ ಪರ ಒಂದೇ ಒಂದು ಫೋರ್ ಬಾರಿಸಿದೆ 7 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್​ಮನ್ ಚಹಾರ್​ ಎನಿಸಿಕೊಂಡರು.

 


134 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಡೆಲ್ಲಿಗೆ ರಾಜಸ್ಥಾನ್ ಬೌಲರ್​ಗಳು ಮಾರಕವಾಗಿ ಪರಿಣಮಿಸಿದರು. ರಾಜಸ್ಥಾನ್ ಬ್ಯಾಟ್ಸ್​ಮನ್​ಗಳು ರನ್ ಕದಿಯಲು ಎಷ್ಟೇ ಪ್ರಯತ್ನ ಪಟ್ಟರು ಬೌಲರ್​ಗಳು ಇದಕ್ಕೆ ಕಡಿವಾಣ ಹಾಕಿದರು. ಡೆಲ್ಲಿ ಪರ ರಿಷಭ್ ಪಂತ್ 27 ಎಸೆತಗಳಲ್ಲಿ 30 ರನ್ ಗಳಿಸಿದರಷ್ಟೆ.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ಕರ್ನಾಟಕದ ಟೀಂ ಇಂಡಿಯಾ ಆಟಗಾರನಿಗೆ ಸಿಸಿಬಿ ನೋಟಿಸ್!

ಲಲಿತ್ ಯಾದವ್ 30 ಹಾಗೂ ವರುಣ್ ಸೂದ್ ಅಜೇಯ 24 ರನ್ ಗಳಿಸಿದರು. ಆದರೆ, ಡೆಲ್ಲಿ ತಂಡ ಗೆಲುವು ಕಾಣುವಲ್ಲಿ ವಿಫಲವಾಯಿತು. 20 ಓವರ್​ಗೆ 9 ವಿಕೆಟ್ ಕಳೆದುಕೊಂಡು 131 ರನ್ ಗಳಿಸಲಷ್ಟೆ ಶಕ್ತವಾಗಿ 2 ರನ್​ಗಳಿಂದ ಸೋಲುಂಡಿತು.

ಇತ್ತ ರಾಜಸ್ಥಾನ್ ತಂಡ ದೀಪಕ್ ಚಹಾರ್​ರ ಅಮೋಘ ಬ್ಯಾಟಿಂಗ್ ಹಾಗೂ ಬೌಲರ್​ಗಳ ಸಂಘಟಿತ ಹೋರಾಟದ ನೆರವಿನಿಂದ ಸೆಮಿ ಫೈನಲ್​ಗೆ ಕಾಲಿಟ್ಟಿದೆ. ನ. 29 ರಂದು ಮೊದಲ ಸೆಮೀಸ್​ನಲ್ಲಿ ರಾಜಸ್ಥಾನ್ ತಂಡ ತಮಿಳುನಾಡು ವಿರುದ್ಧ ಕಾದಾಟ ನಡೆಸಲಿದೆ.

First published: November 28, 2019, 11:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading