• Home
  • »
  • News
  • »
  • sports
  • »
  • Deepak Chahar: ಮನಸ್ಸು ಕದ್ದವಳಿಗಾಗಿ ಮೈದಾನದಲ್ಲಿ ದೀಪಕ್ ಚಹರ್ ಹುಡುಕಾಟ, ವಿಡಿಯೋ ವೈರಲ್

Deepak Chahar: ಮನಸ್ಸು ಕದ್ದವಳಿಗಾಗಿ ಮೈದಾನದಲ್ಲಿ ದೀಪಕ್ ಚಹರ್ ಹುಡುಕಾಟ, ವಿಡಿಯೋ ವೈರಲ್

ನ್ಯೂಜಿಲ್ಯಾಂಡ್ ವಿರುದ್ಧ ನೆನ್ನೆ ಜೈಪುರದಲ್ಲಿ ನಡೆದ ಟಿ-ಟ್ವೆಂಟಿ ಪಂದ್ಯದಲ್ಲಿ,  ಟೀಮ್ ಇಂಡಿಯಾ ಆಟಗಾರ  ದೀಪಕ್ ಚಹರ್ ತನ್ನ ಪ್ರೇಯಸಿ ಜಯ ಭಾರದ್ವಾಜ್ ಗಾಗಿ ಹುಡುಕಾಟ ನಡೆಸಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

ನ್ಯೂಜಿಲ್ಯಾಂಡ್ ವಿರುದ್ಧ ನೆನ್ನೆ ಜೈಪುರದಲ್ಲಿ ನಡೆದ ಟಿ-ಟ್ವೆಂಟಿ ಪಂದ್ಯದಲ್ಲಿ, ಟೀಮ್ ಇಂಡಿಯಾ ಆಟಗಾರ ದೀಪಕ್ ಚಹರ್ ತನ್ನ ಪ್ರೇಯಸಿ ಜಯ ಭಾರದ್ವಾಜ್ ಗಾಗಿ ಹುಡುಕಾಟ ನಡೆಸಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

ನ್ಯೂಜಿಲ್ಯಾಂಡ್ ವಿರುದ್ಧ ನೆನ್ನೆ ಜೈಪುರದಲ್ಲಿ ನಡೆದ ಟಿ-ಟ್ವೆಂಟಿ ಪಂದ್ಯದಲ್ಲಿ, ಟೀಮ್ ಇಂಡಿಯಾ ಆಟಗಾರ ದೀಪಕ್ ಚಹರ್ ತನ್ನ ಪ್ರೇಯಸಿ ಜಯ ಭಾರದ್ವಾಜ್ ಗಾಗಿ ಹುಡುಕಾಟ ನಡೆಸಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

  • Share this:

    ಟಿ-20ವಿಶ್ವಕಪ್ ಮುಗಿದ ಬೆನ್ನಲ್ಲೇ ಭಾರತ ಹಾಗೂ ನ್ಯೂಜಿಲ್ಯಾಂಡ್ (India-New Zeland) ನಡುವಣ ಮೂರು ಪಂದ್ಯಗಳ ಟಿ-20 (T20) ಸರಣಿ ಆರಂಭ ಆಗಿದೆ.. ನಿನ್ನೆ ಜೈಪುರದ (Jaipur) ಸವಾಯ್ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದು ಬೀಗಿದೆ.. ವಿಶೇಷ ಅಂದ್ರೆ ನಿನ್ನೆ ನಡೆದ ಟಿ-ಟ್ವೆಂಟಿ ಪಂದ್ಯದಲ್ಲಿ ಐಪಿಎಲ್ ನಲ್ಲಿ(Indian Premier League ) ಅಮೋಘ ಪ್ರದರ್ಶನ ತೋರಿದ್ದ ದೀಪಕ್ ಚಹರ್ (Deepak Chahar) ಕೂಡ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದು ಗಮನಸೆಳೆದಿದ್ದರು.. ಈಗ ಅದೇ ದೀಪಕ್ ಚಹರ್ ನೆನ್ನೆ ನಡೆದ ಪಂದ್ಯದಲ್ಲಿ ನಡೆದುಕೊಂಡ 2 ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ..


    ಮನದನ್ನೆಗಾಗಿ ಹುಡುಕಾಡಿದ ದೀಪಕ್ ಚಹರ್..


    ಕ್ರಿಕೆಟಿಗರು ಕ್ರೀಡಾಂಗಣದಲ್ಲಿ ತಮ್ಮ ಹೆಂಡತಿ ಅಥವಾ ಗರ್ಲ್ ಫ್ರೆಂಡ್ ಮೇಲೆ ಆಗಾಗ ಪ್ರೀತಿ ತೋರಿಸುವುದು ಸಾಮಾನ್ಯ ಆಗಿದೆ.. ಟೀಮ್ ಇಂಡಿಯಾದ ಟಿ20 ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ರಿಷಬ್ ಪಂತ್, ಕೆ ಎಲ್ ರಾಹುಲ್ ಸೇರಿ ಅನೇಕರು ಹಲವು ಬಾರಿ ತಮ್ಮ ಮನಸ್ಸು ಕದ್ದವರ ಮೇಲೆ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ. ಈಗ ಐಪಿಎಲ್ ನಲ್ಲಿ ಕಮಾಲ್ ಮಾಡಿದ್ದ ದೀಪಕ್ ಚಹರ್, ಮೈದಾನದಲ್ಲಿ ತಮ್ಮ ಪ್ರೇಯಸಿ ಮೇಲೆ ತಮಗಿರುವ ಪ್ರೀತಿಯನ್ನ ವ್ಯಕ್ತ ಪಡಿಸಿದ್ದಾರೆ.


    ಇದನ್ನೂ ಓದಿ: ಸಿಎಸ್​ಕೆ ಬೌಲರ್ ದೀಪಕ್ ಚಾಹರ್ ಪ್ರೊಪೋಸ್ ಮಾಡಿದ ಗರ್ಲ್​​ಫ್ರೆಂಡ್ ಜಯಾ ಯಾರು? ಬಿಗ್ ಬಾಸ್ ಸ್ಪರ್ಧಿಯ ಸೋದರಿಯಾ?


    ಮಾರ್ಟಿನ್ ಗಪ್ಟಿಲ್ ಅವರ ಜೊತೆಗೆ ದೃಷ್ಟಿ ಯುದ್ದ ನಡೆಸಿ, ಕಮಾಲ್ ಕಾ ಮೊಮೆಂಟ್ ಪ್ರಶಸ್ತಿ ಹಾಗೂ ಒಂದು ಲಕ್ಷ ರೂಪಾಯಿ ಬಹುಮಾನವನ್ನು ದೀಪಕ್ ಚಹರ್ ಪಡೆದುಕೊಂಡಿದ್ದರು.. ಸದ್ಯ ದೀಪಕ್ ಮಾರ್ಟಿನ್ ಗಪ್ಟಿಲ್ ರನ್ನ ಗುರಾಯಿಸಿ ಪ್ರಶಸ್ತಿ ಪಡೆದುಕೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.. ಇದರ ಜೊತೆಗೆ ಮೈದಾನದಿಂದ ಆಚೆಗೆ ದೀಪಕ್ ಚಹರ್ ತನ್ನ ಮನದನ್ನೆಗಾಗಿ ಹುಡುಕಾಡಿರುವ ಮತ್ತೊಂದು ವಿಡಿಯೋ ಅಭಿಮಾನಿಗಳ ಮನಸ್ಸು ಗೆದ್ದಿದೆ..



    ಆಕೆ ಎಲ್ಲಿ ಎಂದು ಅಕ್ಕನನ್ನ ಪ್ರಶ್ನೆ ಮಾಡಿದ ತಮ್ಮ..


    ಜೈಪುರದಲ್ಲಿ ನೆನ್ನೆ ನಡೆದ ಪಂದ್ಯಾವಳಿ ವೀಕ್ಷಣೆಗೆ ದೀಪಕ್ ಚಹರ್ ಅಕ್ಕ ಬಾಲಿವುಡ್ ನಟಿ ಮಾಲತಿ ಚಹರ್, ದೀಪಕ್ ಪ್ರೇಯಸಿ ಜಯ ಭಾರದ್ವಾಜ್ ಅವರ ಜೊತೆ ಬಂದಿದ್ದರು.. ಪಂದ್ಯದ ಮೊದಲಾರ್ಧದ 8ನೇ ಓವರ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ದೀಪಕ್ ಚಹರ್ ಬೌಂಡರಿ ಲೈನ್ ವೇಳೆ ನಿಂತಿದ್ರು. ಈ ವೇಳೆ ಮಾಲತಿ ಚಹರ್ ತನ್ನ ತಮ್ಮನ ಕಾಲೆಳೆಯಲು ಪ್ರಾರಂಭ ಮಾಡಿದ್ದಾರೆ.. ಕೊನೆಗೆ ಮಾಲತಿ ಕಡೆ ತಿರುಗಿ ಅವಳು ಎಲ್ಲಿ ಅಂತ ಪ್ರಶ್ನೆ ಮಾಡಿದ್ದಾರೆ. ಇನ್ನು ಈ ವಿಡಿಯೋವನ್ನು ಸ್ವತಃ ಮಾಲತಿ ಚಹರ್ ತಮ್ಮ ಇನ್ಸ್​​ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ..




    ಮೈದಾನದಲ್ಲಿಯೇ ಗೆಳತಿಗೆ ಪ್ರಪೋಸ್ ಮಾಡಿದ್ದ ಚಹರ್


    ದುಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ನಡೆದಿದ್ದ 53ನೇ ಪಂದ್ಯದ ಬಳಿಕ ದೀಪಕ್ ಚಹರ್ ಕ್ರೀಡಾಂಗಣದಲ್ಲಿ ತಮ್ಮ ಗೆಳತಿ ಜಯಾ ಭಾರದ್ವಾಜ್ ಕುಳಿತಿದ್ದ ಕಡೆಗೆ ತೆರಳಿ, ಮಂಡಿಯೂರಿ ಪ್ರೇಮ ನಿವೇದನೆಯನ್ನು ಮಾಡಿದ್ರು.. ಚಹರ್ ಪ್ರೇಮ ನಿವೇದನೆಗೆ ಜಯ ಕೂಡ ಒಪ್ಪಿಗೆ ಸೂಚಿಸಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗ ಮತ್ತೆ ಮೈದಾನದಲ್ಲಿ ಚಹರ್ ತನ್ನ ಪ್ರೇಯಸಿ ಮೇಲಿನ ಪ್ರೀತಿಯನ್ನು ವ್ಯಕ್ತ ಪಡಿಸಿರುವ ವಿಡಿಯೋ ಅಭಿಮಾನಿಗಳ ಮನಸ್ಸು ಕದ್ದಿದೆ..


    ಇದನ್ನೂ ಓದಿ : ದೀಪಕ್ ಚಾಹರ್ ಕಣ್ಣ ನೋಟಕ್ಕೆ ಸಿಕ್ತು 1 ಲಕ್ಷ ಬಹುಮಾನ; ಅದು ಅಂತಿಂಥ ನೋಟ ಅಲ್ಲ


    ಇನ್ನು ದೀಪಕ್ ಚಹರ್ ಪ್ರೇಯಸಿ ಜಯ ಭಾರದ್ವಾಜ್ ದೆಹಲಿಯ ಮೂಲದವರಾಗಿದ್ದು, ಹಿಂದಿ ಬಿಗ್ ಬಾಸ್ ನ ಮಾಜಿ ಸ್ಪರ್ಧಾಳು, ಎಂಟಿವಿಯ ಸ್ಪಿಟ್ ವಿಲ್ಲಾ-2ನ (MTV Splitvilla Season 2) ವಿನ್ನರ್ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿಯಾಗಿದ್ದಾರೆ.

    Published by:ranjumbkgowda1 ranjumbkgowda1
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು