ಕ್ರೀಡೆ

  • associate partner

ಐಪಿಎಲ್​ನಿಂದ ಡೆಕ್ಕನ್ ಜಾರ್ಜಸ್ ಕೈಬಿಟ್ಟಿದ್ದಕ್ಕೆ ಬಿಸಿಸಿಐಗೆ ಬರೋಬ್ಬರಿ 4,800 ಕೋಟಿ ರೂ ದಂಡ?

ಬಿಸಿಸಿಐನ ನಡುವಳಿಕೆ ತಪ್ಪು ಎಂಬ ತೀರ್ಮಾನಕ್ಕೆ ಬರಲಾಗಿದ್ದು, ಈ ಸಂಬಂಧ ಡೆಕ್ಕನ್​ ಕ್ರೋನಿಕಲ್​ ಸಂಸ್ಥೆಗೆ 4,800 ಕೋಟಿ ರೂಪಾಯಿ ನಷ್ಟ ತುಂಬಿಕೊಡುವಂತೆ ಆರ್ಬಿಟ್ರೇಟರ್ ತೀರ್ಪು ಪ್ರಕಟಿಸಿದೆ.

news18-kannada
Updated:July 18, 2020, 9:24 AM IST
ಐಪಿಎಲ್​ನಿಂದ ಡೆಕ್ಕನ್ ಜಾರ್ಜಸ್ ಕೈಬಿಟ್ಟಿದ್ದಕ್ಕೆ ಬಿಸಿಸಿಐಗೆ ಬರೋಬ್ಬರಿ 4,800 ಕೋಟಿ ರೂ ದಂಡ?
ಡೆಕ್ಕನ್ ಚಾರ್ಜರ್ಸ್
  • Share this:
2012ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡವನ್ನು ಕೈಬಿಟ್ಟಿದ್ದ ಬಿಸಿಸಿಐ ಭಾರೀ ದಂಡ ಹೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಐಪಿಎಲ್‌ನ ಮಾಜಿ ಚಾಂಪಿಯನ್ಸ್‌ ಡೆಕನ್‌ ಚಾರ್ಜರ್ಸ್‌ ಫ್ರಾಂಚೈಸಿ ತಂಡದ ಮಾಲೀಕತ್ವ ಪಡೆದಿದ್ದ ಡೆಕನ್‌ ಕ್ರಾನಿಕಲ್ಸ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ (ಡಿಸಿಎಚ್ಎಲ್) ಸಂಸ್ಥೆಯು ಬಿಸಿಸಿಐ ವಿರುದ್ಧ ನಡೆಸಿದ್ದ ಸುದೀರ್ಘಾವಧಿಯ ಕಾನೂನು ಸಮರ ಅಂತ್ಯಗೊಂಡಿದೆ.

ಐಪಿಎಲ್ ಆರಂಭದ ಸಮಯದಲ್ಲಿ ಟೂರ್ನಿಯಲ್ಲಿ ಭಾಗಿಯಾಗುತ್ತಿದ್ದ 8 ತಂಡಗಳಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಕೂಡ ಒಂದು. ಆದರೆ, 2012ರಲ್ಲಿ ಬಿಸಿಸಿಐ ಈ ತಂಡವನ್ನು ಟರ್ಮಿನೇಟ್ ಮಾಡಿತ್ತು. ಇದನ್ನು ಪ್ರಶ್ನಿಸಿ ಡೆಕ್ಕನ್​ ಕ್ರೋನಿಕಲ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೆ ಇದರ ಮಧ್ಯಸ್ಥಿಕೆ ವಹಿಸಲು ಆರ್ಬಿಟ್ರೇಟರ್ ಆಗಿ ನಿವೃತ್ತ ನ್ಯಾಯಮೂರ್ತಿ ಸಿ.ಕೆ ಥಕ್ಕಾರ್​ರನ್ನ ನೇಮಕ ಮಾಡಲಾಗಿತ್ತು.

Sourav Ganguly: ಮೂರು ತಿಂಗಳು, ಮೂರು ಪಂದ್ಯ ನೀಡಿ ಮತ್ತೆ ರನ್ ಗಳಿಸಿ ತೋರಿಸುವೆ..!

ಇದೀಗ ಬಿಸಿಸಿಐನ ನಡುವಳಿಕೆ ತಪ್ಪು ಎಂಬ ತೀರ್ಮಾನಕ್ಕೆ ಬರಲಾಗಿದ್ದು, ಈ ಸಂಬಂಧ ಡೆಕ್ಕನ್​ ಕ್ರೋನಿಕಲ್​ ಸಂಸ್ಥೆಗೆ 4,800 ಕೋಟಿ ರೂಪಾಯಿ ನಷ್ಟ ತುಂಬಿಕೊಡುವಂತೆ ಆರ್ಬಿಟ್ರೇಟರ್ ತೀರ್ಪು ಪ್ರಕಟಿಸಿದೆ.

ಅದೇಶದಲ್ಲಿ ಬಿಸಿಸಿಐ ಅಂತಿಮ ಗಡುವು ಮುಕ್ತಾಯವಾಗುವುದರೊಳಗೇ ತಂಡದ ಫ್ರಾಂಚೈಸಿಯನ್ನು ಅಮಾನತು ಮಾಡಿದೆ. ಇದು ಒಪ್ಪಂದಕ್ಕೆ ವಿರೋಧವಾದದ್ದು, ತಂಡದ ಮಾಲೀಕರಿಗೆ ಪ್ರತಿಕ್ರಿಯೆ ನೀಡಲು ಅಥವಾ ಅಂತಿಮ ನಿರ್ಣಯ ಕೈಗೊಳ್ಳುವ ಮುನ್ನ ಸಂಪೂರ್ಣ ಕಾಲಾವಕಾಶ ಬಳಕೆಗೆ ಅವಕಾಶ ನೀಡಬೇಕಿತ್ತು ಎಂದು ಹೇಳಿದೆ. ಅಲ್ಲದೆ ತಂಡಕ್ಕೆ4,814.67 ಕೂಟಿ ರೂ ಪರಿಹಾರ ಮೊತ್ತವನ್ನು ಶೇ. 10ರಷ್ಟು ಬಡ್ಡಿಯಂತೆ ನೀಡಬೇಕು. ಅಲ್ಲದೆ ವಿಚಾರಣೆಗಾಗಿ ತಂಡ ಖರ್ಚು ಮಾಡಿರುವ 50 ಲಕ್ಷ ರೂಗಳನ್ನು ಬಿಸಿಸಿಐ ಭರಿಸಬೇಕು ಎಂದು ಹೇಳಿದೆ.

ಇದನ್ನು ಪ್ರಶ್ನಿಸಿ ಬಿಸಿಸಿಐ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಇದುವರೆಗೂ ಈ ಬಗ್ಗೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಂದು ಟೀಂ ಇಂಡಿಯಾ ಆಟಗಾರ ಬಾರಿಸಿದ್ದ 10 ಸಾವಿರ ರನ್ ಇಂದಿನ 16 ಸಾವಿರ ರನ್​ಗೆ ಸಮ; ಪಾಕ್ ದಿಗ್ಗಜ

ಇನ್ನು ಬಿಸಿಸಿಐ ಪರವಾಗಿ ವಾದ ಮಂಡಿಸಿದ್ದ ಮಣಿಯಾರ್ ಶ್ರೀವಾತ್ಸವ ಅಸೋಸಿಯೇಟ್ಸ್‌ನ ವಿರಾಜ್‌ ಮಣಿಯಾರ್ ಮಾತನಾಡಿ, "ನ್ಯಾಯಾಲಯದ ಆದೇಶದ ಪ್ರತಿಯನ್ನು ಪಡೆದ ಬಳಿಕ ಅದನ್ನು ಅದ್ಯನ ಮಾಡಿ ನಂತರ ಬಿಸಿಸಿಐನ ಮಾರ್ಗದರ್ಶನದಂತೆ ಮುಂದಿನ ಹೆಜ್ಜೆ ಇಡಲಿದ್ದೇವೆ," ಎಂದಿದ್ದಾರೆ.
Published by: Vinay Bhat
First published: July 18, 2020, 9:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading