ಫಿರೋಜ್ ಶಾ ಕೋಟ್ಲಾ ಇನ್ಮುಂದೆ ಅರುಣ್ ಜೇಟ್ಲಿ ಕ್ರೀಡಾಂಗಣ; ನೂತನ ಪೆವಿಲಿಯನ್​ಗೆ ಕೊಹ್ಲಿ ಹೆಸರು

ಈ ಭವ್ಯ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಕ್ರೀಡಾ ಸಚಿವ ಕಿರಣ್​ ರಿಜಿಜು, ಬಿಸಿಸಿಐಯ ಪ್ರಮುಖ ಅಧಿಕಾರಿಗಳು ಹಾಜರಿದ್ದರು.

Vinay Bhat | news18-kannada
Updated:September 13, 2019, 8:25 AM IST
ಫಿರೋಜ್ ಶಾ ಕೋಟ್ಲಾ ಇನ್ಮುಂದೆ ಅರುಣ್ ಜೇಟ್ಲಿ ಕ್ರೀಡಾಂಗಣ; ನೂತನ ಪೆವಿಲಿಯನ್​ಗೆ ಕೊಹ್ಲಿ ಹೆಸರು
ಅರುಣ್ ಜೇಟ್ಲಿ ಸ್ಟೇಡಿಯಂ
  • Share this:
ನವ ದೆಹಲಿ (ಸೆ. 13): ವಿಶ್ವ ಪ್ರಸಿದ್ಧ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನಕ್ಕೆ ಮರುನಾಮಕರಣ ಮಾಡಲಾಗಿದೆ. ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ) ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ನಾಯಕ ಮಾಜಿ ಸಚಿವ ದಿ. ಅರುಣ್​ ಜೇಟ್ಲಿ ಹೆಸರನ್ನು ಮರು ನಾಮಕರಣ ಮಾಡಲಾಗಿದೆ.

ಅರುಣ್​​​​ ಜೇಟ್ಲಿ ಅವರು ದೆಹಲಿ ಕ್ರಿಕೆಟ್​​ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಫಿರೋಷ್ ಷಾ ಕೋಟ್ಲಾ ಮೈದಾನ ಆಧುನಿಕ ಸೌಲಭ್ಯವನ್ನು ನವೀಕರಿಸಿದ ಕೀರ್ತಿಗೆ ಪಾತ್ರರಾಗಿದ್ದರು. ವಿಶ್ವ ದರ್ಜೆಯ ಡ್ರೆಸ್ಸಿಂಗ್​​ ಕೊಠಡಿಗಳು ನಿರ್ಮಿಸುವುದರ ಜತೆ ಈ ಕ್ರೀಡಾಂಗಣ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ಜು ಹೆಚ್ಚಿಸಿದ್ದರು.

ಇನ್ನು ಕ್ರೀಡಾಂಗಣದ ಒಂದು ಸ್ಟ್ಯಾಂಡ್​ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿಟ್ಟು ಗೌರವಿಸಲಾಯಿತು.

 


ಈ ಭವ್ಯ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಕ್ರೀಡಾ ಸಚಿವ ಕಿರಣ್​ ರಿಜಿಜು, ಬಿಸಿಸಿಐಯ ಪ್ರಮುಖ ಅಧಿಕಾರಿಗಳು ಹಾಜರಿದ್ದರು. ಕ್ರಿಕೆಟಿಗರ ಪೈಕಿ ಮನೀಶ್ ಪಾಂಡೆ, ಕೆ ಎಲ್ ರಾಹುಲ್, ಶಿಖರ್ ಧವನ್ ಸೇರಿದಂರೆ ಕೊಹ್ಲಿ ಜೊತೆಗೆ ಅನುಷ್ಕಾ ಶರ್ಮಾ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಈ ಸಂದರ್ಭ ಮಾತನಾಡಿದ ಕೊಹ್ಲಿ, '2001 ರಲ್ಲಿ ನಾನು ಪಂದ್ಯ ನೋಡಲು ಟಿಕೆಟ್ ಪಡೆದು ಇದೇ ಕ್ರೀಡಾಂಗಣಕ್ಕೆ ಬರುತ್ತಿದ್ದೆ. ಆಟಗಾರರ ಆಟೋಗ್ರಾಫ್​ಗಾಗಿ ಕಾದು ಕುಳಿತಿದ್ದ ನೆನಪು ಈಗಲೂ ಇದೆ. ಆದರೆ, ಈಗ ಅದೇ ಕ್ರೀಡಾಂಗಣಕ್ಕೆ ನನ್ನ ಹೆಸರಿರುವ ಪೆವಿಲಿಯನ್ ಇರುವುದು ಖುಷಿ ನೀಡಿದೆ. ಇದು ನನಗೆ ಬಹುದೊಡ್ಡ ಗೌರವ' ಎಂದು ಹೇಳಿದರು.

ಈ ಹಿಂದೆ ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ, 'ವಿರಾಟ್​ ಕೊಹ್ಲಿ ಜಗತ್ತಿನ ಕ್ರಿಕೆಟ್​ನಲ್ಲಿ ಅತೀ ಎತ್ತರಕ್ಕೆ ಬೆಳೆದಿದ್ದಾರೆ. ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 11 ವರ್ಷ ಪೂರೈಸಿದ ನೆನೆಪಿನಲ್ಲಿ ಅವರ ಹೆಸರನ್ನು ಕೋಟ್ಲಾ ಮೈದಾನದ ಒಂದು ಸ್ಟ್ಯಾಂಡ್​ಗೆ ಇಡಲು ನಿರ್ಧರಿದಿದ್ದೇವೆ' ಎಂದು ಹೇಳಿದ್ದರು.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading