HOME » NEWS » Sports » CRICKET DAVID WARNER THANKS FANS FOR 89 MILLION VIEWS ON TIKTOK SINCE APRIL 18 DEBUT WATCH VIDEO HG

ಟಿಕ್​​ಟಾಕ್​ನಲ್ಲಿ ಧೂಳೆಬ್ಬಿಸಿದ ಹೈದರಾಬಾದ್​​ ತಂಡದ ನಾಯಕ; ಎರಡು ತಿಂಗಳಿನಲ್ಲಿ 40 ಲಕ್ಷ ಫಾಲೋವರ್ಸ್​​​​​​

David Warner: ಕೇವಲ ಎರಡುವರೆ ತಿಂಗಳಿನಲ್ಲಿ ವಾರ್ನರ್​​ 40 ಲಕ್ಷ ಫಾಲೋವರ್ಸ್​​​​ ಹೊಂದಿದ್ದಾರೆ. ಇದರಿಂದ ಖುಷಿಯಾಗಿರುವ ವಾರ್ನರ್​​​​ ತನ್ನ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

news18-kannada
Updated:June 9, 2020, 2:38 PM IST
ಟಿಕ್​​ಟಾಕ್​ನಲ್ಲಿ ಧೂಳೆಬ್ಬಿಸಿದ ಹೈದರಾಬಾದ್​​ ತಂಡದ ನಾಯಕ; ಎರಡು ತಿಂಗಳಿನಲ್ಲಿ 40 ಲಕ್ಷ ಫಾಲೋವರ್ಸ್​​​​​​
ಸನ್​​ರೈಸರ್ಸ್​ ಹೈದರಾಬಾದ್​
  • Share this:
ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್​​ಮನ್ ಡೇವಿಡ್​ ವಾರ್ನರ್​​ ಇತ್ತೀಚೆಗೆ ಟಿಕ್​ಟಾಕ್​​ನಲ್ಲಿ ಭಾರೀ ಹವಾ ಎಬ್ಬಿಸುತ್ತಿದ್ದಾರೆ. ದಿನಕೊಂದು ವಿಭಿನ್ನ ಟಿಕ್​ಟಾಕ್​ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪತ್ನಿ ಮಕ್ಕಳನ್ನು ಜೊತೆಗೂಡಿಸಿಕೊಂಡು ಈಗಾಗಳೇ ಅನೇಕ ಟಿಕ್​​ಟಾಕ್​ ವಿಡಿಯೋ ಮಾಡಿದ್ದಾರೆ. ತಮಿಳು, ತೆಲುಗು ಭಾಷೆಯಲ್ಲೂ ಟಿಕ್​ಟಾಕ್​ ಮಾಡಿರುವ ಡೇವಿಡ್​ ವಾರ್ನರ್​ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

ಡೇವಿಡ್​ ವಾರ್ನರ್​ ಟಿಕ್​ಟಾಕ್​​ನಲ್ಲಿ​ ಫಾಲೋವರ್ಸ್​ಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಲಕ್ಷಗಟ್ಟಲೆ ಲೈಕ್ಸ್​, ವ್ಯೂವ್ಸ್​ ಪಡೆದುಕೊಂಡಿದ್ದಾರೆ. ಸದ್ಯ ವಾರ್ನರ್​​ ಎಲ್ಲಾ ವಿಡಿಯೋಗಳನ್ನು ಸೇರಿಸಿದರೆ 89 ಮಿಲಿಯನ್​​ ಅಂದರೆ 8.9 ಕೋಟಿ ವೀಕ್ಷಣೆ ಪಡೆದುಕೊಂಡಿದ್ದಾರೆ. ಆ ಮೂಲಕ ವಾರ್ನರ್​ ಟಿಕ್​ಟಾಕ್​​​ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಕೇವಲ ಎರಡುವರೆ ತಿಂಗಳಿನಲ್ಲಿ ವಾರ್ನರ್​​ 40 ಲಕ್ಷ ಫಾಲೋವರ್ಸ್​​​​ ಹೊಂದಿದ್ದಾರೆ. ಇದರಿಂದ ಖುಷಿಯಾಗಿರುವ ವಾರ್ನರ್​​​​ ತನ್ನ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

  
View this post on Instagram
 

My TikTok story #dilboletiktok #family #thanks appreciate the help with the ideas everyone 👍👍👏👏


A post shared by David Warner (@davidwarner31) on


ಡೇವಿಡ್​ ವಾರ್ನರ್​ ಸನ್​​ರೈಸರ್ಸ್​ ಹೈದರಾಬಾದ್​ ತಂಡದ ನಾಗಿಕರಾಗಿದ್ದಾರೆ. ಇತ್ತೀಚೆಗೆ ತೆಲುಗಿನ ಅಲ್ಲು ಅರ್ಜುನ್​​ ನಟನೆಯ ‘ಅಲಾ ವೈಕುಂಠಪುರಂಲೊ‘ ಸಿನಿಮಾದ ‘ಬುಟ್ಟಾ ಬೊಮ್ಮಾ ಹಾಡಿಗೆ‘ ಹೆಜ್ಜೆ ಹಾಕಿದ್ದಾರು. ಆನಂತರ ಮಹೇಶ್​ ಬಾಬು ಸಿನಿಮಾದ ಹಾಡಿಗೂ ಹೆಜ್ಜೆ ಹಾಕಿದ್ದಾರು. ಪ್ರಭಾಸ್​​ ನಟನೆಯ ಬಾಹುಬಲಿ ಸಿನಿಮಾದ ಡೈಲಾಗ್​​​ಗನ್ನು ಟಿಕ್​ಟಾಕ್​ನಲ್ಲಿ ಬಳಸಿದ್ದರು. ಅಷ್ಟೇ ಅಲ್ಲದೆ, ತಮಿಳು ನಟ ಧನುಷ್​​ ಕೊಲವೆರಿ ಹಾಡಿಗೂ ಟಿಕ್​ಟಾಕ್​ನಲ್ಲಿ ಹೆಜ್ಜೆ  ಹಾಕಿದ್ದರು. ಹೀಗಾಗಿ ಅನೇಕ ಭಾರತೀಯ ವಾರ್ನರ್​​ ಟಿಕ್​ಟಾಕ್​ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ.

Atlas Cycles: ಸವಾರಿ ನಿಲ್ಲಿಸಿದ ಅಟ್ಲಾಸ್​ ಸೈಕಲ್​; ದೇಶದ ಹೆಮ್ಮೆಯ ಸಂಸ್ಥೆಗೆ ಬೀಗ!
First published: June 9, 2020, 2:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories