David Warner: ವಾರ್ನರ್​ನ ಐಪಿಎಲ್​​ ಬೆಸ್ಟ್​ ಇಲೆವೆನ್​ನಲ್ಲಿ 8 ಭಾರತೀಯರು, ಆದ್ರೆ ದಿಗ್ಗಜರಿಗಿಲ್ಲ ಸ್ಥಾನ

Warner IPLl XI: ವಾರ್ನರ್ ಪ್ರಕಟಿಸಿರುವ ನೆಚ್ಚಿನ ಆಲ್​ಟೈಮ್​ ಐಪಿಎಲ್ ತಂಡದಲ್ಲಿ ಎಂಟು ಆಟಗಾರರು ಭಾರತೀಯರಾಗಿದ್ದಾರೆ. ಕಾಮೆಂಟೇಟರ್​ ಹರ್ಷಬೋಗ್ಲೆಯವರೊಂದಿಗೆ ನಡೆದ ಸಂದರ್ಶನದಲ್ಲಿ ವಾರ್ನರ್ ಅವರು ತಮ್ಮ ನೆಚ್ಚಿನ ತಂಡವನ್ನು ಘೋಷಣೆ ಮಾಡಿದರು.

news18-kannada
Updated:May 7, 2020, 2:31 PM IST
David Warner: ವಾರ್ನರ್​ನ ಐಪಿಎಲ್​​ ಬೆಸ್ಟ್​ ಇಲೆವೆನ್​ನಲ್ಲಿ 8 ಭಾರತೀಯರು, ಆದ್ರೆ ದಿಗ್ಗಜರಿಗಿಲ್ಲ ಸ್ಥಾನ
ಡೇವಿಡ್‌ ವಾರ್ನರ್.
  • Share this:
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್​ಮನ್​, ಸನ್​ರೈಸರ್ಸ್​ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್​ನ​ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಪ್ರಕಟಮಾಡಿದ್ದಾರೆ. ಆದರೆ, ಅಚ್ಚರಿ ಎಂಬಂತೆ ಐಪಿಎಲ್​ನ ದಿಗ್ಗಜರಾಗಿದ್ದ ಲಸಿತ್ ಮಲಿಂಗಾ, ಕೋರೊನ್ ಪೊಲಾರ್ಡ್​​, ಶೇನ್ ವಾಟ್ಸನ್ ಹಾಗೂ ಯುವರಾಜ್ ಸಿಂಗ್ ಅವರನ್ನು ಕೈಬಿಟ್ಟಿದ್ದಾರೆ.

Yuvraj Singh left out; Rohit Sharma included in David Warner’s combined IPL XI
ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಹಾಗೂ ಜಸ್​ಪ್ರೀತ್ ಬುಮ್ರಾ.


ಬೌಲರ್ ನೋಡಿಕೊಂಡು ಬ್ಯಾಟ್ ಮಾಡಲ್ಲ, ಯಾರೇ ಇದ್ದರೂ ನೈಜ ಆಟ ಆಡೋದು ನನ್ನ ಕ್ರಿಕೆಟ್ ನಿಯಮ!: ಪ್ರಿಯಂ ಗರ್ಗ್

ವಾರ್ನರ್ ಪ್ರಕಟಿಸಿರುವ ನೆಚ್ಚಿನ ಆಲ್​ಟೈಮ್​ ಐಪಿಎಲ್ ತಂಡದಲ್ಲಿ ಎಂಟು ಆಟಗಾರರು ಭಾರತೀಯರಾಗಿದ್ದಾರೆ. ಕಾಮೆಂಟೇಟರ್​ ಹರ್ಷಬೋಗ್ಲೆಯವರೊಂದಿಗೆ ನಡೆದ ಸಂದರ್ಶನದಲ್ಲಿ ವಾರ್ನರ್ ಅವರು ತಮ್ಮ ನೆಚ್ಚಿನ ತಂಡವನ್ನು ಘೋಷಣೆ ಮಾಡಿದರು.

ವಾರ್ನರ್ ತಮ್ಮ ತಂಡದಲ್ಲಿ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್​ ಆರಂಭಿಸುವುದಾಗಿ ಹೇಳಿದ್ದು, 3ನೇ ಕ್ರಮಾಂಕ ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಗೆ ನೀಡಿ 4ನೇ ಕ್ರಮಾಂಕದಲ್ಲಿ ಸುರೇಶ್ ರೈನಾರನ್ನು ಕಣಕ್ಕಿಳಿಸುತ್ತುರಾಂತೆ.

ಇನ್ನೂ ನಂಬರ್‌ 5 ಮತ್ತು 6ನೇ ಸ್ಥಾನಕ್ಕೆ ಗ್ಲೆನ್ ಮ್ಯಾಕ್ಸ್​ವೆಲ್​ ಹಾಗೂ ಹಾರ್ದಿಕ್​ ಪಾಂಡ್ಯರನ್ನು ಆಯ್ಕೆ ಮಾಡಿದ್ದಾರೆ. 7ನೇ ಕ್ರಮಾಂಕಕ್ಕೆ ಹೇಳಿ ಮಾಡಿಸಿರುವ ಆಟಗಾರ ಸಿಎಸ್​ಕೆ ಹಾಗೂ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಯನ್ನು ವಾರ್ನರ್​ ಸೆಲೆಕ್ಟ್​ ಮಾಡಿದ್ದಾರೆ.

ಮತ್ತೊಂದು ಕ್ರಿಕೆಟ್ ತಂಡ ಖರೀದಿಸಲಿದ್ದಾರೆ ಶಾರುಖ್ ಖಾನ್..!ಇತ್ತ ಬೌಲಿಂಗ್ ವಿಬಾಗದಲ್ಲಿ ಮಿಚೆಲ್ ಸ್ಟಾರ್ಕ್​ ಹಾಗೂ ಜಸ್​ಪ್ರೀತ್ ಬುಮ್ರಾ ಪ್ರಮುಖರಾಗಿದ್ದರೆ, ಆಶಿಶ್ ನೆಹ್ರಾ ಹಾಗೂ ಯಜುವೇಂದ್ರ ಚಹಾಲ್ ಅಥವಾ ಕುಲ್ದೀಪ್ ಯಾದವ್ ಬೌಲಿಂಗ್ ಬಣದಲ್ಲಿ ಕಣಕ್ಕಿಳಿಸುತ್ತಾರಂತೆ.

ಡೇವಿಡ್‌ ವಾರ್ನರ್‌ ಪ್ರಕಟಿಸಿದ ಆಲ್‌ಟೈಮ್‌ ಬೆಸ್ಟ್‌ ಐಪಿಎಲ್ XI:

ರೋಹಿತ್‌ ಶರ್ಮಾ, ಡೇವಿಡ್‌ ವಾರ್ನರ್‌, ವಿರಾಟ್‌ ಕೊಹ್ಲಿ, ಸುರೇಶ್‌ ರೈನಾ, ಹಾರ್ದಿಕ್‌ ಪಾಂಡ್ಯ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಎಂಎಸ್‌ ಧೋನಿ, ಮಿಚೆಲ್‌ ಸ್ಟಾರ್ಕ್, ಜಸ್‌ಪ್ರೀತ್‌ ಬುಮ್ರಾ, ಆಶಿಶ್ ನೆಹ್ರಾ, ಯುಜುವೇಂದ್ರ ಚಹಲ್‌ ಅಥವಾ ಕುಲ್ದೀಪ್‌ ಯಾದವ್.

First published: May 7, 2020, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading