David Warner- ಕಾಂಕ್ರೀಟ್ ಪಿಚ್​ನಲ್ಲಿ ಡೇವಿಡ್ ವಾರ್ನರ್ ಪ್ರಾಕ್ಟೀಸ್; ಸಿಂಥೆಟಿಕ್ ಟ್ರ್ಯಾಕ್​ನಿಂದ ಏನು ಲಾಭ?

Help of Concrete Pitches for Batting Practice- ದೊಡ್ಡ ಇನ್ನಿಂಗ್ಸ್ ಭಾರಿಸಿ ಹಲವು ದಿನಗಳೇ ಕಂಡಿರುವ ಡೇವಿಡ್ ವಾರ್ನರ್ ಇದೀಗ ಸಿಂಥೆಟಿಕ್ ಟ್ರ್ಯಾಕ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಇದರ ಮೂಲಕ ಅವರು ಬ್ಯಾಟಿಂಗ್ ಲಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ಧಾರೆ.

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್

 • Share this:
  ದುಬೈ, ಅ. 27: ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಫಾರ್ಮ್ ಕಳೆದುಕೊಂಡಿದ್ದಾರೆಯೇ? ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸ್ಥಾನ ಕೂಡ ಪಡೆಯಲು ವಿಫಲರಾಗಿದ್ದ ಅವರಿಂದ ಇತ್ತೀಚಿನ ದಿನಗಳಲ್ಲಿ ಯಾವ ದೊಡ್ಡ ಇನ್ನಿಂಗ್ಸ್ ಬರದೇ ಇರುವ ಹಿನ್ನೆಲೆಯಲ್ಲಿ ಅವರು ಕಳಪೆ ಫಾರ್ಮ್​ನಲ್ಲಿದ್ದಾರೆ ಎಂತ ಅನಿಸುವುದು ಸಹಜ. ಆದರೆ, ಡೇವಿಡ್ ವಾರ್ನರ್ ಇದನ್ನ ಸಾರಾಸಗಟಾಗಿ ತಳ್ಳಿಹಾಕುತ್ತಾರೆ. ತಾನು ಫಾರ್ಮ್​ನಲ್ಲಿ ಇಲ್ಲ ಎಂದು ಜನರು ಹೇಳುತ್ತಿದ್ದರೆ ಅದು ನನಗೆ ತಮಾಷೆ ಎನಿಸುತ್ತದೆ ಎಂದು ಅವರು ಹೇಳುತ್ತಾರೆ. ನಾನೇನೂ ಬ್ಯಾಟಿಂಗ್ ಲಯ ಕಳೆದುಕೊಂಡಿಲ್ಲ. ನೆಟ್​ನಲ್ಲಿ ಚೆನ್ನಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದೇನೆ ಎಂದು ಡೇವಿಡ್ ವಾರ್ನರ್ ಹೇಳುತ್ತಾರೆ.

  ಟಿ20 ವಿಶ್ವಕಪ್​ಗೆ ಮುನ್ನ ನಡೆದ ಎರಡು ವಾರ್ಮಪ್ ಮ್ಯಾಚ್​ಗಳಲ್ಲಿ ಡೇವಿಡ್ ವಾರ್ನರ್ ಗಳಿಸಿದ್ದು 0 ಮತ್ತು 1 ರನ್ ಮಾತ್ರ. ಅದಕ್ಕೆ ಮುನ್ನ ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳ ಪೈಕಿ ಡೇವಿಡ್ ವಾರ್ನರ್ ತಾವು ಆಡಿದ ಎರಡು ಪಂದ್ಯದಲ್ಲಿ ಗಳಿಸಿದ್ದು 0 ಮತ್ತು 2 ರನ್ ಮಾತ್ರ. ಅಂದರೆ ವಿಶ್ವಕಪ್ ಟೂರ್ನಿಗೆ ಮುನ್ನ ನಡೆದ ನಾಲ್ಕು ಪಂದ್ಯಗಳಿಂದ ವಾರ್ನರ್ ಗಳಿಸಿದ ರನ್ ಕೇವಲ 3 ಮಾತ್ರ. ಇನ್ನು, ಸೌತ್ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 14 ರನ್ ಬಂದದ್ದು ಯುಎಇಯಲ್ಲಿ ಈ ವರ್ಷ ಅವರು ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ. ಆದರೂ ವಾರ್ನರ್ ಅವರು ತಾನು ಫಾರ್ಮ್ ಕಳೆದುಕೊಂಡಿಲ್ಲ ಎಂದು ಹೇಳಲು ಬಲವಾದ ಕಾರಣ ಇದೆಯೇ?

  “ನನ್ನ ದೃಷ್ಟಿಯಲ್ಲಿ, ನಾನು ಫಾರ್ಮ್ ಕಳೆದುಕೊಂಡಿರುವುದಾಗಿ ಜನರು ಹೇಳುವುದು ಹಾಸ್ಯಾಸ್ಪದ ಎನಿಸುತ್ತದೆ. ಈ ಮಾತುಗಳನ್ನ ಕೇಳಿ ನಾನು ನಕ್ಕುಬಿಡುತ್ತೇನೆ. ಯಾಕೆಂದರೆ ವಾಸ್ತವವನ್ನು ಗಮನಿಸಿದಾಗ ನಾನು ಹೆಚ್ಚು ಕ್ರಿಕೆಟ್ ಆಡಲೇ ಇಲ್ಲ. ಐಪಿಎಲ್​ನಲ್ಲಿ ನಾನು ಎರಡು ಪಂದ್ಯ ಮಾತ್ರ ಆಡಿದೆ…

  ”ವಾರ್ಮಪ್ ಪಂದ್ಯಗಳು ವಾರ್ಮಪ್ ಮಾತ್ರವೇ. ಸೌತ್ ಆಫ್ರಿಕಾ ವಿರುದ್ಧ ನಾನು ನಿರೀಕ್ಷಿಸಿದ ರೀತಿಯಲ್ಲಿ ಬ್ಯಾಟ್ ಮಾಡಿದೆ. ನಾನು ಒಳ್ಳೆಯ ಲಯದಲ್ಲಿ ಇದ್ದೇನೆ ಎನಿಸುತ್ತಿದೆ. ನೆಟ್​ನಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ಸೌತ್ ಆಫ್ರಿಕಾ ವಿರುದ್ಧ ಒಳ್ಳೆಯ ಇನ್ನಿಂಗ್ಸ್ ಕಟ್ಟಲು ನನಗೆ ಒಂದು ಬೌಂಡರಿಯ ಕೊರತೆ ಬಿತ್ತು ಅಷ್ಟೇ” ಎಂದು ಡೇವಿಡ್ ವಾರ್ನರ್ ಹೇಳುತ್ತಾರೆ.

  ಇದನ್ನೂ ಓದಿ: T20 Rankings: ಇಂಗ್ಲೆಂಡ್, ಮಲನ್, ಶಮ್ಸಿ, ಶಾಕಿಬ್ ನಂ.1; ಭಾರತದ ಟಿ20 ಟಾಪರ್ಸ್ ಯಾರು? ಇಲ್ಲಿದೆ ಪಟ್ಟಿ

  ಐಪಿಎಲ್​ನಲ್ಲಿ ಆಗಿದ್ದೇನು?

  ಐಪಿಎಲ್​ನಲ್ಲಿ ಟೂರ್ನಿಯ ಮಾರ್ಗಮಧ್ಯೆಯೇ ಡೇವಿಡ್ ವಾರ್ನರ್ ಅವರನ್ನ ಸನ್​ರೈಸರ್ಸ್ ಹೈದರಾಬಾದ್ ತಂಡದಿಂದಲೇ ಡ್ರಾಪ್ ಮಾಡಿತು. ಅವರ ಅನುಪಸ್ಥಿತಿಯಲ್ಲಿ ಕೇನ್ ವಿಲಿಯಮ್ಸನ್ ಅವರು ಉಳಿದೆಲ್ಲಾ ಪಂದ್ಯಗಳಿಗೆ ನಾಯಕತ್ವ ವಹಿಸಿದ್ದರು. ಯುಎಇಯಲ್ಲಿ ಐಪಿಎಲ್ ಪಂದ್ಯಗಳು ವರ್ಗವಾದಾಗ ವಾರ್ನರ್ ಎರಡು ಪಂದ್ಯಗಳಲ್ಲಿ 0 ಮತ್ತು 2 ರನ್ ಮಾತ್ರ ಗಳಿಸಿದ್ದರು. ಅದಕ್ಕೆ ಮುನ್ನ ಭಾರತದಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ 6 ಪಂದ್ಯಗಳಿಂದ 193 ರನ್ ಗಳಿಸಿದ್ದರು.

  ಎರಡು ಪಂದ್ಯಗಳಲ್ಲಿ ವಿಫಲವಾಗಿದ್ದಕ್ಕೆ ವಾರ್ನರ್ ಅವರನ್ನ ಕೈಬಿಡಲಾಯಿತೇ? ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೇವಿಡ್ ವಾರ್ನರ್, ಹೈದರಾಬಾದ್ ತಂಡದಲ್ಲಿ ಯುವ ಆಟಗಾರರೆಲ್ಲರಿಗೂ ಅವಕಾಶ ಕೊಡಬೇಕೆಂದು ನಿರ್ಧರಿಸಲಾಗಿತ್ತು. ಹೀಗಾಗಿ, ನನ್ನನ್ನು ತಂಡದಿಂದ ಕೈಬಿಟ್ಟರು ಎಂದು ಹೇಳಿದ್ದಾರೆ.

  ಇದನ್ನೂ ಓದಿ: 2004 Incident- ಭಾರತ-ಪಾಕ್ ಕ್ರಿಕೆಟ್ ಸರಣಿ: ಜಾಮಾ ಮಸೀದಿ ಘಟನೆ ಸ್ಮರಿಸಿದ ಇರ್ಫಾನ್ ಪಠಾಣ್ ತಂದೆ

  ವಾರ್ನರ್ ಅಭ್ಯಾಸಕ್ಕೆ ವ್ಯಾಂಗರ್ಸ್ ಮತ್ತು ಕಾಂಕ್ರೀಟ್ ಪಿಚ್​ಗಳ ನೆರವು:

  ಆಸ್ಟ್ರೇಲಿಯಾದ ಇಬ್ಬರು ಆರಂಭಿಕ ಬ್ಯಾಟರ್ಸ್ ಆಗಿರುವ ಆರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಅವರು ಕಾಂಕ್ರೀಟ್ ಪಿಚ್​ಗಳಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ಧಾರೆ. ಚೆಂಡು ಥ್ರೋ ಮಾಡುವ ವ್ಯಾಂಗರ್ಸ್ (Wangers) ಎಂಬ ವಿಶೇಷ ಸಾಧನದ ನೆರವು ಅವರಿಗೆ ಸಿಕ್ಕಿದೆ. ಈ ವ್ಯಾಂಗರ್ ಸಾಧನವು ಮಾಮೂಲಿಗಿಂತ ತುಸು ವೇಗವಾಗಿ ಚೆಂಡನ್ನ ಎಸೆಯಬಲ್ಲವು.

  “ಆಸ್ಟ್ರೇಲಿಯಾದಲ್ಲಿರುವ ನನ್ನ ಬ್ಯಾಟಿಂಗ್ ಕೋಚ್ ಟ್ರೆಂಟ್ ವುಡ್​​ಹಿಲ್ (Trent Woodhill) ಅವರು ನನಗೆ ಮೆಸೇಜ್ ಕಳುಹಿಸಿ, ಸಿಂಥೆಟಿಕ್ ಪಿಚ್​ಗಳಲ್ಲಿ ಅಭ್ಯಾಸ ನಡೆಸಬೇಕೆಂದು ಸಲಹೆ ನೀಡಿದರು. ನನ್ನ ಕಾಲುಗಳ ಚಲನೆ ಸರಿ ಮಾಡಿಕೊಳ್ಳಲು ತಿಳಿಸಿದರು. ಇಂಥ ಕಾಂಕ್ರೀಟ್ ಪಿಚ್​ಗಳಲ್ಲಿ ಬ್ಯಾಟ್ ಮಾಡಿದರೆ ಪಾದವನ್ನು ಸರಿಯಾದ ಪೊಸಿಶನ್​ಗೆ ತೆಗೆದುಕೊಂಡುಹೋಗಲು ಅಭ್ಯಾಸ ಆಗುತ್ತದೆ. ಬ್ಯಾಟಿಂಗ್ ವೇಳೆ ಕಾಲು ಸರಿಯಾದ ಜಾಗದಲ್ಲಿರಬೇಕಾಗುತ್ತದೆ” ಎಂದು ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.
  Published by:Vijayasarthy SN
  First published: