ಲಾರಾ ವಿಶ್ವ ದಾಖಲೆಯನ್ನು ಭಾರತದ ಈ ಆಟಗಾರನಿಂದ ಮಾತ್ರ ಮುರಿಯಲು ಸಾಧ್ಯ: ವಾರ್ನರ್ ಭವಿಷ್ಯ

ಇನ್ನು ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಬ್ರಿಯಾನ್ ಲಾರಾ 400 ರನ್ ಪೂರೈಸಿ ಅಜೇಯರಾಗಿ ಉಳಿದಿರುವುದು ವಿಶ್ವ ದಾಖಲೆಯಾಗಿದೆ.

zahir | news18-kannada
Updated:December 1, 2019, 4:42 PM IST
ಲಾರಾ ವಿಶ್ವ ದಾಖಲೆಯನ್ನು ಭಾರತದ ಈ ಆಟಗಾರನಿಂದ ಮಾತ್ರ ಮುರಿಯಲು ಸಾಧ್ಯ: ವಾರ್ನರ್ ಭವಿಷ್ಯ
Warner
  • Share this:
ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಡೇವಿಡ್ ವಾರ್ನರ್​ ಹೊಸ ದಾಖಲೆ ನಿರ್ಮಿಸಿದ್ದರು. ಆಸ್ಟ್ರೇಲಿಯಾ ಪರ 8ನೇ ತ್ರಿಶತಕ ಬಾರಿಸಿದ ವಾರ್ನರ್ ಅಡಿಲೇಡ್ ಮೈದಾನದಲ್ಲಿ ಈ ಹಿಂದೆ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್ ನಿರ್ಮಿಸಿದ 299 ರನ್​ಗಳ ದಾಖಲೆಯನ್ನು ಹಾಗೂ 334 ರನ್​ಗಳ ರೆಕಾರ್ಡ್​ನ್ನು ಅಳಿಸಿ ಹಾಕಿದರು. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ಪರ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ರನ್ ಬಾರಿಸಿದ 2ನೇ ಆಟಗಾರ ಎನಿಸಿಕೊಂಡಿದ್ದಾರೆ.

ಇನ್ನು ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಬ್ರಿಯಾನ್ ಲಾರಾ 400 ರನ್ ಪೂರೈಸಿ ಅಜೇಯರಾಗಿ ಉಳಿದಿರುವುದು ವಿಶ್ವ ದಾಖಲೆಯಾಗಿದೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಾರ್ನರ್, ಆ ದಾಖಲೆಯನ್ನು ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಮಾತ್ರ ಮುರಿಯಬಲ್ಲರು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ 3 ಬಾರಿ ಡಬಲ್ ಸೆಂಚುರಿ ಹಾಗೂ ಟೆಸ್ಟ್​ನಲ್ಲಿ 1 ಬಾರಿ ದ್ವಿಶತಕ ಸಿಡಿಸಿರುವ ರೋಹಿತ್ ಶರ್ಮಾ ಅವರು ಟೆಸ್ಟ್​ ಕ್ರಿಕೆಟ್​ನಲ್ಲೂ ಅತ್ಯಧಿಕ ಮೊತ್ತ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರೇ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಅಳಿಸಿ ಹಾಕಬಲ್ಲರು ಎಂದು ವಾರ್ನರ್ ಹೇಳಿದ್ದಾರೆ.

ಅಲ್ಲದೆ ಈ ಹಿಂದೆ ನಾನು ಐಪಿಎಲ್ ಪಂದ್ಯವಾಡುವಾಗ ವಿರೇಂದ್ರ ಸೆಹ್ವಾಗ್ ನೀವು ಟೆಸ್ಟ್​ ಪಂದ್ಯಗಳನ್ನು ಸಹ ಚೆನ್ನಾಗಿ ಆಡುತ್ತೀರಿ. ಟಿ 20 ಪಂದ್ಯಗಳಿಗಿಂತ ಉತ್ತರ ಟೆಸ್ಟ್ ಆಟಗಾರನಾಗಿ ಗುರುತಿಸಿಕೊಳ್ಳುತ್ತೀರಿ ಎಂದಿದ್ದರು. ಆದರೆ ಸೆಹ್ವಾಗ್ ಅವರ ಆ ಮಾತನ್ನು ಅಂದು ನಾ ನಂಬಿರಲಿಲ್ಲ. ಇದೀಗ ಅವರ ಭವಿಷ್ಯ ನಿಜವಾಗಿದೆ ಎಂದು ವಾರ್ನರ್ ಹೇಳಿದರು.

ಇದನ್ನೂ ಓದಿ: Viral Video: ಹಾಡು ಮರೆತು ಇಂಗ್ಲಿಷ್ ಮಾತಾಡಿ ಮತ್ತೆ ಟ್ರೋಲ್ ಆದ ರಾನು ಮಂಡಲ್

ಪಾಕ್ ವಿರುದ್ಧದ ಈ ಪಂದ್ಯದಲ್ಲಿ ವಾರ್ನರ್​ 39 ಬೌಂಡರಿ ಮತ್ತು 1 ಭರ್ಜರಿ ಸಿಕ್ಸರ್ ಒಳಗೊಂಡ 335 ರನ್​ಗಳಿಸಿ ಅಜೇಯರಾಗಿ ಉಳಿದಿದ್ದರು. ಇದು ಆಸ್ಟ್ರೇಲಿಯನ್ ಕ್ರಿಕೆಟಿಗರೊಬ್ಬರ ಎರಡನೇ ಗರಿಷ್ಠ ಟೆಸ್ಟ್ ಸೆಂಚುರಿ​ ರನ್ ಆಗಿದೆ. ಈ ಹಿಂದೆ ವಿಂಡೀಸ್ ವಿರುದ್ಧ ಮ್ಯಾಥ್ಯು ಹೇಡನ್ 380 ರನ್​ಗಳಿಸಿರುವುದು ಆಸೀಸ್ ಕ್ರಿಕೆಟ್​ ಇತಿಹಾಸದ ಗರಿಷ್ಠ ರನ್ ದಾಖಲೆಯಾಗಿ ಉಳಿದಿದೆ.

First published: December 1, 2019, 4:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading