Video: ಮಹೇಶ್​ ಬಾಬು ಸಿನಿಮಾದ ಡೈಲಾಗ್​​ ಹೇಳಿದ ಡೇವಿಡ್​ ವಾರ್ನರ್​; ಟಿಕ್​ ಟಾಕ್​ ವಿಡಿಯೋ ವೈರಲ್​

David Warner Tik tok Video Viral: ಅನೇಕರು ಡೇವಿಡ್​ ವಾರ್ನರ್​ ಟಿಕ್​ ಟಾಕ್​  ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ವಾರ್ನರ್​​ ಬಾಯಲ್ಲಿ ನಟ ಮಹೇಶ್​ ಬಾಬು ಅವರ ಡೈಲಾಗ್​ ಕೇಳಿದ ಅಭಿಮಾನಿಗಳು ನಾನಾ ತರಹದ ಕಾಮೆಂಟ್​ ಕೂಡ ಬರೆದಿದ್ದಾರೆ. ಕೆಲವರು ‘ಪೊಕಿರಿ ವಾರ್ನರ್‘​ ಎಂದು ಬರೆದಿದ್ದಾರೆ. ಇನ್ನು ಕೆಲವರು ‘ಪೊಕಿರಿ 2‘ ಸಿನಿಮಾದ ಹೀರೊ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಮಹೇಶ್​​ ಬಾಬು ಸಿನಿಮಾದ ಡೈಲಾಗ್​ ಹೇಳಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.

ಮಹೇಶ್​ ಬಾಬು - ಡೇವಿಡ್​ ವಾರ್ನರ್​

ಮಹೇಶ್​ ಬಾಬು - ಡೇವಿಡ್​ ವಾರ್ನರ್​

 • Share this:
  ಇತ್ತೀಚೆಗೆ ತೆಲುಗು ನಟ ಅಲ್ಲು ಅರ್ಜುನ್​ ಮತ್ತು ಕನ್ನಡತಿ ಪೂಜಾ ಹೆಗ್ಡೆ ನಟಿಸಿರುವ ‘ಅಲಾ ವೈಕುಂಠಪುರಂಲೋ‘ ಸಿನಿಮಾದ ಬುಟ್ಟ ಬೊಮ್ಮ ಹಾಡಿಗೆ ಕ್ರಿಕೆಟಿಗ ಡೇವಿಡ್​ ವಾರ್ನರ್​ ಮತ್ತು ಅವರ ಕುಟುಂಬ ಹೆಜ್ಜೆ ಹಾಕಿರುವ ವಿಡಿಯೋವನ್ನು ಟಿಕ್​ಟಾಕ್​ನಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಕೂಡ ಆಗಿತ್ತು. ನಟ ಅಲ್ಲು ಅರ್ಜುನ್​  ಅವರು ಡೇವಿಡ್​ ವಾರ್ನರ್​ ಅವರ ತೆಲುಗು ಪ್ರೀತಿ ನೋಡಿ ಟ್ವಿಟ್ಟರ್​​ನಲ್ಲಿ ಕಾಮೆಂಟ್​ ಕೂಡ ಬರೆದಿದ್ದರು. ಇದೀಗ ​​ ವಾರ್ನರ್ ಮಹೇಶ್​ ಬಾಬು ಸಿನಿಮಾದ ಡೈಲಾಗ್​ ಅನ್ನು ಹೇಳುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ.

  ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿರುವ ವಿಡಿಯೋದಲ್ಲಿ ಡೇವಿಡ್​​ ವಾರ್ನರ್​​  ಬ್ಯಾಟ್​ ಹಿಡಿದುಕೊಂಡು ಮಹೇಶ್​​ ಬಾಬು  ‘ಪೊಕಿರಿ‘ ಸಿನಿಮಾದ ಡೈಲಾಗ್​ ಅನ್ನು  ಹೇಳಿದ್ದಾರೆ. ಜೊತೆಗೆ ಇದು ಯಾವ ಸಿನಿಮಾದ ಡೈಲಾಗ್​ ಹೇಳಿ? ನಾನಂತೂ ಉತ್ತರ ಕೇಳಿ ಸುಸ್ತಾಗಿದ್ದೇನೆ. ಗುಡ್​ ಲಕ್​​ ಎಂದು ಬರೆದುಕೊಂಡಿದ್ದಾರೆ.   
  View this post on Instagram
   

  Guess the movie?? I tried everyone 🤷🏼‍♂️🤷🏼‍♂️Good luck 😂😂 #tollywood #requested #helpme #


  A post shared by David Warner (@davidwarner31) on
   
  View this post on Instagram
   

  It’s tiktok time #buttabomma get out of your comfort zone people lol @candywarner1


  A post shared by David Warner (@davidwarner31) on
     ಅನೇಕರು ಡೇವಿಡ್​ ವಾರ್ನರ್​ ಟಿಕ್​ ಟಾಕ್​  ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ವಾರ್ನರ್​​ ಬಾಯಲ್ಲಿ ನಟ ಮಹೇಶ್​ ಬಾಬು ಅವರ ಡೈಲಾಗ್​ ಕೇಳಿದ ಅಭಿಮಾನಿಗಳು ನಾನಾ ತರಹದ ಕಾಮೆಂಟ್​ ಕೂಡ ಬರೆದಿದ್ದಾರೆ. ಕೆಲವರು ‘ಪೊಕಿರಿ ವಾರ್ನರ್‘​ ಎಂದು ಬರೆದಿದ್ದಾರೆ. ಇನ್ನು ಕೆಲವರು ‘ಪೊಕಿರಿ 2‘ ಸಿನಿಮಾದ ಹೀರೊ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಮಹೇಶ್​​ ಬಾಬು ಸಿನಿಮಾದ ಡೈಲಾಗ್​ ಹೇಳಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.

  ಡೇವಿಡ್​ ವಾರ್ನರ್​​ ಐಪಿಎಲ್​ನಲ್ಲಿ ಸನ್​ ರೈಸರ್ಸ್​​ ತಂಡದ ಪರವಾಗಿ ಆಡುತ್ತಿದ್ದಾರೆ. ಹಾಗಾಗಿ ತೆಲುಗಿನಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಅವರು​ ಹೊಂದಿದ್ದಾರೆ. ಇದರ ಜೊತೆಗೆ ವಾರ್ನರ್​ಗೂ ಕೂಡ ತೆಲುಗು ಭಾಷೆ ಮೇಲೆ ವಿಶೇಷ ಅಭಿಮಾನವಿದೆ. ಅದಕ್ಕೆ ಸಾಕ್ಷಿಯೆಂಬಂತೆ ಟಿಕ್ ​ಟಾಕ್​ನಲ್ಲಿ ತೆಲುಗು ಸಿನಿಮಾಗಳ ಡೈಲಾಗ್ ಹಾಡುಗಳನ್ನು ಬಳಸಿಕೊಂಡು ಟಿಕ್​ಟಾಕ್​ ವಿಡಿಯೋ ರಚಿಸಿ ಹರಿ ಬಿಡುತ್ತಿರುತ್ತಾರೆ.

  Video Viral: ತಾನೇ ನಿರ್ದೇಶಿಸಿದ ಕನ್ನಡ ಸಿನಿಮಾಗೆ ಬ್ಲಾಕ್ ಟಿಕೆಟ್ ಖರೀದಿಸಿದ ನಿರ್ದೇಶಕ!
  First published: