ಪ್ರಭುದೇವ ‘ಮುಕ್ಕಾಲ ಮುಕ್ಕಾಬುಲ‘ ಹಾಡಿಗೆ ಹೆಜ್ಜೆ ಹಾಕಿದ ಡೇವಿಡ್​ ವಾರ್ನರ್​; ಮತ್ತೊಂದು ವಿಡಿಯೋ ವೈರಲ್​

David Warner: ಡೇವಿಡ್​ ವಾರ್ನರ್​ ಕುಟುಂಬ​ ಇತ್ತೀಚೆಗೆ ಅಲ್ಲು ಅರ್ಜುನ್​ ‘ಅಲಾ ವೈಕುಂಠಪುರಂಲೋ‘ ಸಿನಿಮಾದ ‘ಬುಟ್ಟ ಬೊಮ್ಮ‘ ಮತ್ತು ‘ರಾಮುಲೋ ರಾಮುಲಾ‘ ಹಾಡಿಗೆ ಟಿಕ್​ ಟಾಕ್​ ಮಾಡಿದ್ದರು. ಆದಾದ ನಂತರ ಮಹೇಶ್​ ಬಾಬು ‘ಪೊಕಿರಿ‘ ಸಿನಿಮಾದ ಸಿಗ್ನೇಚರ್​ ಡೈಲಾಗ್​​ ಹೇಳಿದ ವಿಡಿಯೋವನ್ನು ಹಂಚಿಕೊಂಡಿದ್ದರು. ಇಷ್ಟು ಮಾತ್ರವಲ್ಲ, ಬಾಹುಬಲಿ ಸಿನಿಮಾದಲ್ಲಿ ನಟ ಫ್ರಬಾಸ್​ ಅವರ ಡೈಲಾಗ್ ಹೇಳಿರುವ ವಿಡಿಯೋವನ್ನು ಡೇವಿಡ್​ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.

ಡೇವಿಡ್​ ವಾರ್ನರ್

ಡೇವಿಡ್​ ವಾರ್ನರ್

 • Share this:
  ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಕ್ರಿಕೆಟ್​ನಲ್ಲಿ ಮಾತ್ರವಲ್ಲದೆ, ಟಿಕ್​ ಟಾಕ್​ನಲ್ಲೂ ಜನಪ್ರಿಯತೆಗಳಿಸುತ್ತಿದ್ದಾರೆ. ಈಗಾಗಲೇ ಅನೇಕ ಟಿಕ್​ಟಾಕ್​ ವಿಡಿಯೋಗಳಿಗೆ ಹೆಜ್ಜೆ ಹಾಕುವ ಮೂಲಕ ಆ ವಿಡಿಯೋವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಕುಟುಂಬ ಸಮೇತರಾಗಿ ತಮಿಳಿನ ‘ಕಾದಲನ್‘​ ಸಿನಿಮಾದ ‘ಮುಕ್ಕಾಲ ಮುಕ್ಕಾಬುಲ‘ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹರಿಬಿಟ್ಟಿದ್ದಾರೆ.

  ಡೇವಿಡ್​ ವಾರ್ನರ್​ ಕುಟುಂಬ​ ಇತ್ತೀಚೆಗೆ ಅಲ್ಲು ಅರ್ಜುನ್​ ‘ಅಲಾ ವೈಕುಂಠಪುರಂಲೋ‘ ಸಿನಿಮಾದ ‘ಬುಟ್ಟ ಬೊಮ್ಮ‘ ಮತ್ತು ‘ರಾಮುಲೋ ರಾಮುಲಾ‘ ಹಾಡಿಗೆ ಟಿಕ್​ ಟಾಕ್​ ಮಾಡಿದ್ದರು. ಆದಾದ ನಂತರ ಮಹೇಶ್​ ಬಾಬು ‘ಪೊಕಿರಿ‘ ಸಿನಿಮಾದ ಸಿಗ್ನೇಚರ್​ ಡೈಲಾಗ್​​ ಹೇಳಿದ ವಿಡಿಯೋವನ್ನು ಹಂಚಿಕೊಂಡಿದ್ದರು. ಇಷ್ಟು ಮಾತ್ರವಲ್ಲ, ಬಾಹುಬಲಿ ಸಿನಿಮಾದಲ್ಲಿ ನಟ ಫ್ರಬಾಸ್​ ಅವರ ಡೈಲಾಗ್ ಹೇಳಿರುವ ವಿಡಿಯೋವನ್ನು ಡೇವಿಡ್​ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.

      
  View this post on Instagram
   

  Who was better @candywarner1 and I or @theshilpashetty 😂😂 #theoriginals @prabhudevaofficial


  A post shared by David Warner (@davidwarner31) on


  ತೆಲುಗು ಸಿನಿಮಾಗಳ ಡೈಲಾಗ್​ ಮತ್ತು ಹಾಡುಗಳಿಗೆ ಟಿಕ್​ ಟಾಕ್​ ಮಾಡುತ್ತಿದ್ದ ಕ್ರಿಕೆಟಿಗ ಡೇವಿಡ್​ ಇದೀಗ 1994ರಲ್ಲಿ ತೆರೆಕಂಡ ತಮಿಳಿನ ‘ಕಾದಲನ್​‘ ಸಿನಿಮಾದ ‘ಮುಕ್ಕಾಲ ಮುಕ್ಕಾಮುಲ‘ ಹಾಡಿಗೆ ಕುಟುಂಬ ಸಮೇತ ಹೆಜ್ಜೆ ಹಾಕಿದ್ದಾರೆ. ‘ಕಾದಲನ್‘​ ಸಿನಿಮಾದಲ್ಲಿ ಇಂಡಿಯನ್​ ಮೈಕಲ್​ ಜಾಕ್ಸನ್​ ಎಂಬ ಖ್ಯಾತಿ ಪಡೆದ ಪ್ರಭುದೇವ ಮತ್ತು ನಟಿ ನಗ್ಮ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಬರುವ ‘ಮುಕ್ಕಾಬುಲ‘ ಹಾಡು ಅಂದಿಗೆ ಖ್ಯಾತಿಗಳಿಸಿತ್ತು. ಆನಂತರ ಈ ಹಾಡನ್ನು ಪ್ರಭುದೇವ ಅವರು ಹಿಂದಿಯ ಸ್ಟ್ರೀಟ್​ ಡ್ಯಾನ್ಸ್​​ 3ಡಿ ಸಿನಿಮಾದಲ್ಲೂ ಬಳಸಿಕೊಂಡಿದ್ದರು. ಇಲ್ಲೂ ಪ್ರಭುದೇವ ಅವರು ಹೆಜ್ಜೆ ಹಾಕಿದ್ದರು.
  First published: