ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಸತತ ಎರಡು ಜಯ ಸಾಧಿಸಿ ಸರಣಿ ವಶಪಡಿಸಿಕೊಂಡು ಮೆರೆಯುತ್ತಿದ್ದ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ಭಾನುವಾರ ನಡೆದ ಏಕದಿನ ಪಂದ್ಯದ ಫೀಲ್ಡಿಂಗ್ ವೇಳೆ ತೊಡೆಸಂದು ಸಮಸ್ಯೆಯಿಂದಾಗಿ ಮೈದಾನದಿಂದ ಹೊರ ನಡೆದಿದ್ದ ಡೇವಿಡ್ ವಾರ್ನರ್ ಈಗ ಮೂರನೇ ಏಕದಿನ ಹಾಗೂ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ. ಜೊತೆಗೆ ಟೆಸ್ಟ್ ಸರಣಿಗೂ ಅನುಮಾನ ಎಂದು ಹೇಳಲಾಗಿದೆ. ಇದು ಕಾಂಗರೂ ಪಡೆಗೆ ದೊಡ್ಡ ಹೊಡೆತವಾದರೆ ಇತ್ತ ಟೀಂ ಇಂಡಿಯಾಕ್ಕೆ ಕೊಂಚ ನೆಮ್ಮದಿ ನೀಡಿದೆ.
ಎರಡನೇ ಏಕದಿನ ಪಂದ್ಯದ ಭಾರತದ ಇನ್ನಿಂಗ್ಸ್ನ ನಾಲ್ಕನೇ ಓವರ್ನಲ್ಲಿ ಶಿಖರ್ ಧವನ್ ಚೆಂಡನ್ನು ಮಿಡ್-ಆಫ್ ಕಡೆಗೆ ಹೊಡೆದರು. ಅಲ್ಲೇ ಇದ್ದ ವಾರ್ನರ್ ಚೆಂಡನ್ನು ತಡೆಯಲು ಡೈವ್ ಮಾಡಿದರು. ಈ ವೇಳೆ ತೊಡೆಸಂದು ನೋವಿಗೆ ತುತ್ತಾದರು.
ಮೈದಾನದಲ್ಲಿ ನಿಲ್ಲಲೂ ಸಾಧ್ಯವಾಗದ ವಾರ್ನರ್ ಅವರನ್ನು ತಕ್ಷಣವೆ ಆಸ್ಟ್ರೇಲಿಯಾದ ಫಿಸಿಯೋ ಬಂದು ಕರೆದೊಯ್ದರು. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸೋಮವಾರ ಕ್ರಿಕೆಟ್ ಆಸ್ಟ್ರೇಲಿಯಾ ಈ ಬಗ್ಗೆ ಅಧಿಕೃತ ಪ್ರಕಟಣೆ ತಿಳಿಸಿದ್ದು, ಡೇವಿಡ್ ವಾರ್ನರ್ ಬದಲಿಗೆ ಡಾರ್ಸಿ ಶಾರ್ಟ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ. ಇನ್ನೂ ಸತತ ಕ್ರಿಕೆಟ್ ನಿಂದ ಬಳಲಿರುವ ಪ್ಯಾಟ್ ಕಮಿನ್ಸ್ಗೆ ವಿಶ್ರಾಂತಿ ನೀಡಲಾಗಿದೆ ಎಂದು ಹೇಳಿದೆ.
Virat Kohli: 350+ ಟಾರ್ಗೆಟ್ ಇದ್ದರೆ ಕೊಹ್ಲಿಯಿಂದ ಗೆಲ್ಲಲು ಸಾಧ್ಯವೇ ಇಲ್ಲ ಎಂದವರಿಗೆ ಹರ್ಭಜನ್ ಹೇಳಿದ್ದೇನು ನೋಡಿ
ಡೇವಿಡ್ ವಾರ್ನರ್ ಭಾರತದ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ನಾಯಕ ಆರೋನ್ ಫಿಂಚ್ ಜೊತೆ ಸೇರಿ ಶತಕದ ಜೊತೆಯಾಟವನ್ನು ಸೀಡಿದ್ದರು. ಈ ಎರಡು ಪಂದ್ಯಗಳಲ್ಲೂ ವಾರ್ನರ್ ಅರ್ಧ ಶತಕವನ್ನು ಸಿಡಿಸಿ ಮಿಂಚಿದ್ದರು.
IND vs AUS: ಗುರಿ ಮುಟ್ಟಲು ಮತ್ತೆ ವಿಫಲವಾದ ಭಾರತ: ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹೇಳಿದ್ದೇನು?
ಇತ್ತ ಪ್ಯಾಟ್ ಕಮ್ಮಿನ್ಸ್ ಅವರಿಗೆ ಉಳಿದಿರುವ ಒಂದು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂಬುದು ಕೂಡ ಖಚಿತವಾಗಿದೆ. ಟೆಸ್ಟ್ ಸರಣಿಗೂ ಮುನ್ನ ಕಮ್ಮಿನ್ಸ್ಗೆ ವಿಶ್ರಾಂತಿಯನ್ನು ನಿಡುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ