David Warner: ಪುಟ್ಟ ಅಭಿಮಾನಿಗೆ ದೊಡ್ಡ ಗಿಫ್ಟ್;​ ವಾರ್ನರ್​​ ನಡೆಗೆ ಭಾರೀ ಮೆಚ್ಚುಗೆ

David Warner: ಪಾಕಿಸ್ತಾನ ವಿರುದ್ಧ ಅಬ್ಬರಿಸಿದ್ದ ವಾರ್ನರ್​ ಆಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ​ ಸಿಕ್ಕಿತು. ಆಸೀಸ್​ ಗೆಲ್ಲಲು ಪ್ರಮುಖ ಕಾರಣವಾಗಿದ್ದ ವಾರ್ನರ್​​​ ಈ ಪ್ರಶಸ್ತಿ ನನ್ನ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ ಎಂದರು.

ಅಭಿಮಾನಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡುತ್ತಿರುವ ವಾರ್ನರ್

ಅಭಿಮಾನಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡುತ್ತಿರುವ ವಾರ್ನರ್

  • News18
  • Last Updated :
  • Share this:
ಬೆಂಗಳೂರು (ಜೂ. 14): ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೀವ್​ ಸ್ಮಿತ್ ಜೊತೆಗೆ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್​​​, ಐಪಿಎಲ್ 12ನೇ ಆವೃತ್ತಿಯಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಪರ ಅಬ್ಬರಿಸಿದ್ದರು. ಇದೀಗ ಅದೇ ಫಾರ್ಮ್​ ವಿಶ್ವಕಪ್​​​ನಲ್ಲೂ ಮುಂದುವರಿಸಿರುವ ಡೇವಿಡ್, ​​ ಪ್ರತಿ ಪಂದ್ಯದಲ್ಲೂ ಉತ್ತಮ ಆಟವಾಡುತ್ತಿದ್ದಾರೆ. ಮೊದಲೆರಡು ಪಂದ್ಯ ಅರ್ಧಶತಕ ದಾಖಲಿಸಿದ್ದ ಈ ಪಾಕೆಟ್​ ಡೈನಾಮೇಟ್, ​​ಪಾಕಿಸ್ತಾನ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದರು.

ಏಕದಿನ ಕ್ರಿಕೆಟ್​ನಲ್ಲಿ 17ನೇ ಶತಕ ದಾಖಲಿಸಿದ ವಾರ್ನರ್​​ಗೆ ಈ ಸೆಂಚುರಿ ಬಹಳ ಭಾವನಾತ್ಮಕವಾಗಿತ್ತು. ಯಾಕಂದರೆ ಮತ್ತೆ ಆಸ್ಟ್ರೇಲಿಯಾ ಪರ ಆಡುತ್ತೇನೆ ಎಂಬುದು ಗ್ಯಾರೆಂಟಿ ಇಲ್ಲ ಎಂದಿದ್ದ ವಾರ್ನರ್,  1 ವರ್ಷ ನಿಷೇಧದ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಮರಳಿದರು. ಮೊದಲ ಸವಾಲೇ ವಿಶ್ವಕಪ್ ಆಗಿದ್ದರಿಂದ ತನ್ನ ತಾಕತ್ತು ಪ್ರದರ್ಶಿಸಬೇಕಿತ್ತು. ಹೀಗಾಗೇ ಮತ್ತೆ ತನ್ನ ಹಳೆಯ ಆಟ ಪ್ರದರ್ಶಿಸಿದ ವಾರ್ನರ್​ ಸೆಂಚುರಿ ಸಿಡಿಸಿ ಪಾಕ್ ವಿರುದ್ಧ ಬೃಹತ್ ಮೊತ್ತ ಕಲೆಹಾಕಲು ಕಾರಣರಾದರು. ಇವರ ಸೆಂಚುರಿ ನೆರವಿನಿಂದಲೇ ಆಸೀಸ್ 352ರನ್​ಗಳ ಬೃಹತ್ ಮೊತ್ತ ಕಲೆಹಾಕಿತು.

David Warner Gifts Man Of The Match Award To Young Fan
ಶತಕ ಬಾರಿಸಿ ಸಂಭ್ರಮಿಸುತ್ತಿರುವ ವಾರ್ನರ್


ಪಾಕಿಸ್ತಾನ ವಿರುದ್ಧ ಅಬ್ಬರಿಸಿದ್ದ ವಾರ್ನರ್​ ಆಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ​ ಸಿಕ್ಕಿತು. ಆಸೀಸ್​ ಗೆಲ್ಲಲು ಪ್ರಮುಖ ಕಾರಣವಾಗಿದ್ದ ವಾರ್ನರ್​​​ ಈ ಪ್ರಶಸ್ತಿ ನನ್ನ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ ಎಂದರು.

Poonam Pandey: ಅಭಿನಂದನ್ ಹೆಸರಲ್ಲಿ ಟ್ರೋಲ್; ಒಳ ಉಡುಪು ಬಿಚ್ಚಿ ಪಾಕ್​ಗೆ ತಿರುಗೇಟು ನೀಡಿದ ಪೂನಂ!

ಪ್ರಶಸ್ತಿ ಸ್ವೀಕರಿಸಿ ಪೆವಿಲಿಯನ್​ ನತ್ತ ತೆರಳುತ್ತಿದ್ದ ವಾರ್ನರ್​ ತನ್ನ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುತ್ತಿದ್ದರು. ಈ ವೇಳೆ ಒಬ್ಬ ಬಾಲಕ ಆಸೀಸ್ ಜೆರ್ಸಿ ತೊಟ್ಟು ಅಪ್ಪನೊಂದಿಗೆ ಪಂದ್ಯ ನೋಡಲು ಆಗಮಿಸಿದ್ದ. ಆತನನ್ನ ನೋಡಿ ವಾರ್ನರ್​​ಗೆ ಅದೇನು ಅನ್ನಿಸಿತೋ ಗೊತ್ತಿಲ್ಲ ಆ ಪುಟ್ಟ ಅಭಿಮಾನಿಗೆ ಹಸ್ತಾಕ್ಷರ ನೀಡಿದ್ದಷ್ಟೇ ಅಲ್ಲ. ಮ್ಯಾನ್ ಆಫ್​ ದಿ ಮ್ಯಾಚ್​ ಪ್ರೈಜ್​ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನ ಸ್ವೀಕರಿಸಿದ ಬಾಲಕನ ಸಂತೋಷಕ್ಕೆ ಪಾರವೇ ಇರಲಿಲ್ಲ.

 

First published: